ಸಾಗರ ತಾಲೂಕಿನ ತುಮರಿ ಹುಲ್ಕೋಡು ಗ್ರಾಮದಲ್ಲಿ ಆಯೋಜಿಸಿದ್ದ ಹೊಸನಗರ ಪ್ರಾಂತ್ಯದ ಪ್ರತಿಬಿಂಬ ಕಾರ್ಯಕ್ರಮವನ್ನು ಬಾಲಚಂದ್ರ ಭಟ್ ಉದ್ಘಾಟಿಸಿದರು. ಗಣಪತಿ ಭಟ್, ಸುಚೇತನ ಶಾಸ್ತ್ರಿ, ಪ್ರಸನ್ನ ಕೆರೆಕೈ ಇದ್ದರು.
ಸಾಗರ: ಹವ್ಯಕ ಬ್ರಾಹ್ಮಣ ಸಮಾಜದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಪ್ರತಿಬಿಂಬ ಕಾರ್ಯಕ್ರಮ ಎಲ್ಲೆಡೆ ನಡೆಯಬೇಕು ಎಂದು ಹಟ್ಟಿಯಂಗಡಿ ಕ್ಷೇತ್ರದ ಆಡಳಿತ ಮೊಕ್ತೆಸರ ಬಾಲಚಂದ್ರ ಭಟ್ ಹೇಳಿದರು.
ತುಮರಿ ಹುಲ್ಕೋಡು ಗ್ರಾಮದ ಭಾರತಿ ವಿದ್ಯಾನಿಕೇತನ ಪ್ರೌಢಶಾಲೆ ಆವರಣದಲ್ಲಿ ಅಖಿಲ ಹವ್ಯಕ HAVYAKA ಮಹಾಸಭಾದಿಂದ ಆಯೋಜಿಸಿದ್ದ ಹೊಸನಗರ ಪ್ರಾಂತ್ಯದ ಪ್ರತಿಬಿಂಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಲ ಬದಲಾವಣೆ ಮಾಡಿಕೊಳ್ಳುವ ಅನಿವಾರ್ಯತೆಗೆ ಬ್ರಾಹ್ಮಣ ಸಮುದಾಯ ಒಗ್ಗಿಕೊಳ್ಳಬೇಕಿದೆ. ಸಮುದಾಯ ಸಂಘಟನೆಯತ್ತ ಇನ್ನಷ್ಟು ಗಮನ ಹರಿಸಬೇಕು ಎಂದು ಹೇಳಿದರು.
ಹಳ್ಳಿಮನೆಗಳು ವೃದ್ಧಾಶ್ರಮಗಳಾಗುತ್ತಿವೆ. ಎಲ್ಲರೂ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ವೃದ್ಧ ಪಾಲಕರು ಅಡಿಕೆ ತೋಟ, ಜಮೀನು ನೋಡಿಕೊಂಡು ಉಳಿಯುತ್ತಿದ್ದಾರೆ. ಹಳ್ಳಿ ಬಿಟ್ಟು ಹೋದವರಿಗೆ ಮತ್ತೆ ನಮ್ಮ ಸಂಸ್ಕೃತಿ ಬಗ್ಗೆ ಅರಿವು ಮೂಡಿಸಬೇಕು. ಅವರು ಮತ್ತೆ ಹಳ್ಳಿಗಳನ್ನು ಪ್ರೀತಿಸುವಂತೆ ಮಾಡಬೇಕು. ಇಂತಹ ಕಾರ್ಯಕ್ರಮಗಳು ಯುವ ಸಮೂಹವನ್ನು ಹಳ್ಳಿಗಳತ್ತ ಕರೆತರಲಿ ಎಂದು ಆಶಿಸಿದರು.