ಸರ್ಕಾರ ರೈತಪರ ನಿಲುವು ಪ್ರದರ್ಶಿಸಲಿ I pro farmar goverment
ತುಂಗಾ ಏತ ನೀರಾವರಿ ಯೋಜನೆಗೆ ಸಂಬಂಧಿಸಿ ಸರ್ಕಾರ ವಿದ್ಯುತ್ ಬಿಲ್ ಪಾವತಿಸುವಂತೆ ಒತ್ತಾಯಿಸಿ ಎಚ್.ಆರ್.ಬಸವರಾಜಪ್ಪ, ಶಾರದಾ ಪೂರ‌್ಯಾನಾಯ್ಕಾ, ಭಾಗ್ಯಾ, ಪಿ.ಡಿ.ಮಂಜಪ್ಪ. ಎ.ಡಿ.ನಾಗರಾಜಪ್ಪ, ಜಿ.ಎನ್.ಪಂಚಾಕ್ಷರಿ ಮತ್ತಿತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಿಸಿ ಕಚೇರಿ ಎದುರು ರೈತಸಂಘದಿಂದ ಪ್ರತಿಭಟನೆ
ವಿದ್ಯುತ್ ಬಿಲ್ ಬಾಕಿ ಪಾವತಿಸುವಂತೆ ಆಗ್ರಹ
ನೀರಾವರಿ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಡಿತ
ಶಿವಮೊಗ್ಗ: ಮೆಸ್ಕಾಂ(mescom) ಗೆ ಸರ್ಕಾರದಿಂದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವ ಕಾರಣ ತುಂಗಾ ಏತ ನೀರಾವರಿ ಯೋಜನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಸರ್ಕಾರ (goverment) ಕೂಡಲೇ ಬಿಲ್ ಪಾವತಿಸಿ ರೈತಪರ (pro farmars) ನಿಲುವು ಪ್ರದರ್ಶಿಸಬೇಕು ಎಂದು ಆಗ್ರಹಿಸಿ ರೈತ ಸಂಘದಿಂದ ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಶಿವಮೊಗ್ಗ ತಾಲೂಕಿನ ಹಾಯ್‌ಹೊಳೆ, ಬಾರೆಹಳ್ಳ, ಗೌಡನಕೆರೆ ಮೂಲಕ 7.5 ಸಾವಿರ ಎಕರೆಗೆ ನೀರು ಹರಿಸುತ್ತಿದ್ದು, 28ಕ್ಕೂ ಹೆಚ್ಚು ಹಳ್ಳಿಗಳು ಪ್ರಯೋಜನ ಪಡೆಯುತ್ತವೆ. 8 ವರ್ಷದಿಂದ ಯೋಜನೆ ಚಾಲನೆಯಲ್ಲಿದೆ. ಆದರೆ ರಾಜ್ಯ ಸರ್ಕಾರ ಮೆಸ್ಕಾಂ ಇಲಾಖೆಗೆ 25.22 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿರುವುದರಿಂದ ರೈತರು ಸಮಸ್ಯೆ ಎದುರಿಸುವಂತಾಗಿದೆ ಎಂದು ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸಿದರು.
ಈಗ ತುಂಗಾ ನದಿಯಲ್ಲಿ ಅಪಾರ ಪ್ರಮಾಣದ ನೀರು ಹರಿಯುತ್ತಿದೆ ಕೂಡ. ಆದರೆ ವಿದ್ಯುತ್ ಸಂಪರ್ಕವಿಲ್ಲದೆ ನೀರನ್ನೆತ್ತಲು ಸಾಧ್ಯ ಆಗುತ್ತಿಲ್ಲ. ರಾಜ್ಯ ಸರ್ಕಾರ ಕೂಡಲೇ ಬಾಕಿ ಬಿಲ್ ಪಾವತಿಸಿ ನೀರು ತುಂಬಲು ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.