ಕೇಂದ್ರ ಸರ್ಕಾರ 2,186 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರಕ್ಕೆ ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಕಲ್ಲೂರು ಮೇಘರಾಜ್, ಎಲ್.ಆದಿಶೇಷ, ಜೀವನ್, ನಂಜುಂಡಪ್ಪ, ಕೋಡ್ಲು ಶಿವಪ್ಪ ಮತ್ತಿತರರು ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ: ಕೇಂದ್ರ (central) ಸರ್ಕಾರ (goverment) 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯ ಸರ್ಕಾರಕ್ಕೆ ಬರಬೇಕಾದ 2,186 ಕೋಟಿ ರೂ. ಅನುದಾನವನ್ನು (grant) ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿ ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ಪ್ರಮುಖರು ಸೋಮವಾರ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ 2025-26ನೇ ಸಾಲಿಗೆ ಸಂಬಂಧಿಸಿ 2,186 ಕೋಟಿ ರೂ. ಬಿಡುಗಡೆ ಮಾಡದೆ ರಾಜ್ಯಕ್ಕೆ ಅನ್ಯಾಯ ಎಸಗಿದೆ. ಈ ಅನುದಾನವನ್ನು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಬಳಸಿಕೊಳ್ಳಬೇಕಿತ್ತು. ಈಗಾಗಲೇ ಎಲ್ಲ ಗ್ರಾಪಂಗಳಿಂದ ಅನುದಾನ ವರ್ಗಾವಣೆ ಪತ್ರ ನೀಡಲಾಗಿದೆ. 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ಹಂಚಿಕೆಯಾದ 13,392 ಕೋಟಿ ರೂ.ಗಳಲ್ಲಿ 4 ವರ್ಷದ ಅವಧಿಯಲ್ಲಿ 11,068ಕೋಟಿ ರೂ.ಬಿಡುಗಡೆಯಾಗಿದೆ. ಇನ್ನೂ 2,186 ಕೋಟಿ.ರೂ.ಬಾಕಿ ಇದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹಣ ಬಿಡುಗಡೆ ಆಗದೆ ಇರುವುದರಿಂದ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿವೆ. ರಾಜ್ಯದಲ್ಲಿ ಮುಂಗಾರು ಕುಸಿದಿದೆ. 5,944 ಗ್ರಾಪಂಗಳಲ್ಲಿ ಕುಡಿಯುವ ನೀರು ಪೂರೈಕೆಗೂ ಕಷ್ಟವಾಗಿದೆ. ರಾಜ್ಯ ಸರ್ಕಾರಕ್ಕೆ ಈ ಸಮಸ್ಯೆ ಸವಾಲಾಗಿ ಪರಿಣಮಿಸಿದೆ. ಬಾಕಿ ಇರುವ 2,186 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.
ಟ್ರಸ್ಟಿನ ವ್ಯವಸ್ಥಾಪಕ ಟ್ರಸ್ಟಿ ಕಲ್ಲೂರು ಮೇಘರಾಜ್, ಟ್ರಸ್ಟಿಗಳಾದ ಎಲ್.ಆದಿಶೇಷ, ಚಂದ್ರಪ್ಪ, ಎಸ್.ಪಿ.ಶಿವಣ್ಣ, ಜೀವನ್, ಶಂಕ್ರಾನಾಯ್ಕಾ, ಕೋಡ್ಲು ಶಿವಪ್ಪ, ನಂಜುಂಡಪ್ಪ ಮತ್ತಿತರರು ಇದ್ದರು.