ಅಶಕ್ತರಿಗೆ ಸಂಘ ಸಂಸ್ಥೆಗಳು ನೆರವಾಗಲಿ

ಸಾಗರದಲ್ಲಿ ಪತ್ರಕರ್ತರು, ಪತ್ರಿಕಾ ವಿತರಕರ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಲಾಯಿತು. ಅಬಸೆ ದಿನೇಶ್‌ಕುಮಾರ್ ಜೋಷಿ, ಎಂ.ಜಿ.ರಾಘವನ್, ಮ.ಸ.ನಂಜುಂಡಸ್ವಾಮಿ, ಜಿ.ನಾಗೇಶ್ ಇತರರಿದ್ದರು.
ಸಾಗರದಲ್ಲಿ ಪತ್ರಕರ್ತರು, ಪತ್ರಿಕಾ ವಿತರಕರ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಲಾಯಿತು. ಅಬಸೆ ದಿನೇಶ್‌ಕುಮಾರ್ ಜೋಷಿ, ಎಂ.ಜಿ.ರಾಘವನ್, ಮ.ಸ.ನಂಜುಂಡಸ್ವಾಮಿ, ಜಿ.ನಾಗೇಶ್ ಇತರರಿದ್ದರು.
Published on
ಸಾಗರ: ಸಾಮಾಜಿಕ ಸೇವೆಗಳಲ್ಲಿ ದುಡಿಮೆಯ ಸ್ವಲ್ಪ ಭಾಗ ಮೀಸಲಿಡಬೇಕು. ಪ್ರತಿಯೊಬ್ಬರೂ ಸೇವಾ ಭಾವ ಬೆಳೆಸಿಕೊಳ್ಳಬೇಕು ಎಂದು ಜೋಷಿ ಫೌಂಡೇಷನ್ ಸಂಸ್ಥಾಪಕ ಅಬಸೆ ದಿನೇಶ್‌ಕುಮಾರ್ ಜೋಷಿ ಹೇಳಿದರು.
ಪತ್ರಕರ್ತರ ಭವನದಲ್ಲಿ ಜೋಷಿ ಫೌಂಡೇಷನ್‌ನಿಂದ ಪತ್ರಕರ್ತರು, ಪತ್ರಿಕಾ ವಿತರಕರ ಮಕ್ಕಳಿಗೆ ಉಚಿತ ನೋಟ್‌ಬುಕ್ ವಿತರಿಸಿ ಮಾತನಾಡಿ, ಬಡ ಕುಟುಂಬಗಳಲ್ಲಿ ಶೈಕ್ಷಣಿಕ ಪರಿಕರ ಖರೀದಿಸುವುದು ಕಷ್ಟಕರ. ಆದ್ದರಿಂದ ಸಂಘ ಸಂಸ್ಥೆಗಳು ಅಗತ್ಯ ಇರುವವರಿಗೆ ನೆರವಾಗಬೇಕು ಎಂದು ತಿಳಿಸಿದರು.
ಜೋಷಿ ಫೌಂಡೇಷನ್‌ನಿಂದ ಒಂದು ವರ್ಷಕ್ಕೆ ಅಗತ್ಯ ಇರುವಷ್ಟು ನೋಟ್‌ಬುಕ್ ನೀಡುತ್ತಿದ್ದು, ಗ್ರಾಮೀಣ ಮತ್ತು ನಗರ ಪ್ರದೇಶದ ಮಕ್ಕಳಿಗೆ, ಪೌರಕಾರ್ಮಿಕರು, ಶ್ರಮಿಕ ವರ್ಗದವರ ಮಕ್ಕಳಿಗೆ ಒಂದು ಲಕ್ಷಕ್ಕೂ ಅಧಿಕ ನೋಟ್ ಪುಸ್ತಕ ವಿತರಿಸಲಾಗುವುದು ಎಂದರು.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಹೇಶ್ ಹೆಗಡೆ ಮಾತನಾಡಿ, ಪತ್ರಿಕಾ ಕ್ಷೇತ್ರದ ಅನೇಕರು ಆರ್ಥಿಕವಾಗಿ ಸದೃಢರಾಗಿ ಇರುವುದಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಕಾರ ನೀಡುವುದು ಉತ್ತಮ ಕಾರ್ಯ ಎಂದರು.
ಸಂಘದ ಕಾರ್ಯದರ್ಶಿ ಎಂ.ಜಿ.ರಾಘವನ್, ಜಿಲ್ಲಾ ಕಾರ್ಯದರ್ಶಿ ದೀಪಕ್ ಸಾಗರ್, ಜಿಲ್ಲಾ ವಿಶೇಷ ಆಹ್ವಾನಿತ ಜಿ.ನಾಗೇಶ್, ಸಹ ಕಾರ್ಯದರ್ಶಿ ಲೋಕೇಶ್‌ಕುಮಾರ್, ಮ.ಸ.ನಂಜುಂಡಸ್ವಾಮಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net