ಮಾನವೀಯತೆ ಶಿಕ್ಷಣದ ಗುರಿಯಾಗಲಿ

ಸಾಗರದ ಇಂದಿರಾ ಗಾಂಧಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ತತ್ವಪದ ಪರಂಪರೆ ಸಂವಾದ ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಸಿರಿವಂತೆ, ನಾದ ಮಣಿನಾಲ್ಕೂರು, ಪ್ರೊ. ಚಂದ್ರಶೇಖರ್ ಇತರರಿದ್ದರು.
ಸಾಗರದ ಇಂದಿರಾ ಗಾಂಧಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ತತ್ವಪದ ಪರಂಪರೆ ಸಂವಾದ ಕಾರ್ಯಕ್ರಮದಲ್ಲಿ ಸತ್ಯನಾರಾಯಣ ಸಿರಿವಂತೆ, ನಾದ ಮಣಿನಾಲ್ಕೂರು, ಪ್ರೊ. ಚಂದ್ರಶೇಖರ್ ಇತರರಿದ್ದರು.
Published on
ಸಾಗರ: ಧಾವಂತದ ದಿನಗಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತಿ ಬೆಳೆಯುವಲ್ಲಿ ಕನ್ನಡ ತತ್ವಪದ ಪರಂಪರೆ ಕೊಡುಗೆ ಅಪಾರ ಎಂದು ಗಾಯಕ ನಾದ ಮಣಿನಾಲ್ಕೂರು ಹೇಳಿದರು.
ಇಂದಿರಾ ಗಾಂಧಿ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗ ಮತ್ತು ಐಕ್ಯೂಎಸಿ ಸಹಯೋಗದಲ್ಲಿ ಆಯೋಜಿಸಿದ್ದ ತತ್ವಪದ ಪರಂಪರೆ-ಉಪನ್ಯಾಸ, ಗಾಯನ, ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಮನುಷ್ಯ ಜೀವನ್ಮುಖಿಯಾಗಿ ಬದುಕಬೇಕು. ಸಂತರು, ಶರಣರು, ದಾರ್ಶನಿಕರು ಬದುಕಿನ ಮಹತ್ವ ಪ್ರತಿಪಾದಿಸಿದ್ದಾರೆ. ಅವರ ಹಾದಿಯಲ್ಲಿ ನಾವು ನಡೆಯಬೇಕು ಎಂದರು.
ಕನ್ನಡ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಸತ್ಯನಾರಾಯಣ ಸಿರಿವಂತೆ ಮಾತನಾಡಿ, 12ನೇ ಶತಮಾನದಿಂದ ಇಂದಿನವರೆಗೂ ಬೆಳೆದುಬಂದ ಕನ್ನಡ ತತ್ವಪದ ಪರಂಪರೆಯ ಜಾಡು ಮತ್ತು ಅದು ಕಟ್ಟಿಕೊಡುವ ಆತ್ಮಪ್ರಜ್ಞೆ ಅರಿವು ಅಗತ್ಯ. ಕ್ಷಣಿಕ ಜನಪ್ರಿಯತೆ ಆಸೆಗೆ ಜಾನಪದದ ಮಹತ್ವ ಕಳೆದುಕೊಳ್ಳುತ್ತಿದ್ದೇವೆ. ಶ್ರಮ ಸಂಸ್ಕೃತಿ ಪ್ರತೀಕ ಜಾನಪದದ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಚಂದ್ರಶೇಖರ್, ಹಿರಿಯ ಪ್ರಾಧ್ಯಾಪಕ ರವೀಂದ್ರ ಕಾಟೋಟಿ, ಐಕ್ಯೂಎಸಿ ಸಂಚಾಲಕ ಪ್ರೊ. ಶಿವಾನಂದ ಎಸ್.ಭಟ್, ಕನ್ನಡ ವಿಭಾಗದ ಮುಖ್ಯಸ್ಥ ಡಾ. ರತ್ನಾಕರ ಸಿ.ಕುನುಗೋಡು, ಪ್ರಾಧ್ಯಾಪಕ ಜೆ.ಎಚ್.ಚರಣರಾಜ, ಪ್ರತಿಮಾ, ಡಾ. ಎಚ್.ಕೆ.ಶೈಲಜಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net