ಸಂಘಗಳು ಸಮಾಜ ಸೇವೆ ಮಾಡಲಿ | equipment Distribution

ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಸೊರಬ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಸೇಂಟ್ ಮಿಲಾಗ್ರಿಸ್ ಸೊಸೈಟಿಯಿಂದ ಅಗತ್ಯ ಪರಿಕರ ವಿತರಿಸಿಲಾಯಿತು.
ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಸೊರಬ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಸೇಂಟ್ ಮಿಲಾಗ್ರಿಸ್ ಸೊಸೈಟಿಯಿಂದ ಅಗತ್ಯ ಪರಿಕರ ವಿತರಿಸಿಲಾಯಿತು.
Published on

ಸೊರಬ: ಸಹಕಾರ ಸಂಸ್ಥೆಗಳು ಹಣಕಾಸಿನ ವ್ಯವಹಾರದ ಜತೆಗೆ ಸಮಾಜ ಸೇವೆಯಲ್ಲಿ ತೊಡಗಿದಾಗ ಮಾದರಿಯಾಗುತ್ತವೆ. ಈ ನಿಟ್ಟಿನಲ್ಲಿ ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಕಾರ್ಯನಿರ್ವಹಿಸುತ್ತಿದೆ ಎಂದು ಸೊಸೈಟಿಯ ಶಾಖಾ ವ್ಯವಸ್ಥಾಪಕ ಜಿ.ನವೀನ್ ಹೇಳಿದರು.

ಪಟ್ಟಣದ ಹೊಸಪೇಟೆ ಬಡಾವಣೆಯ ನವಚೇತನ ಬುದ್ಧಿಮಾಂದ್ಯ ಮಕ್ಕಳ ವಸತಿ ಶಾಲೆಯಲ್ಲಿ ಶುಕ್ರವಾರ ಸೊಸೈಟಿ ವತಿಯಿಂದ ಸ್ವಾತಂತ್ರೃ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಅಗತ್ಯ ಪರಿಕರ ವಿತರಿಸಿ ಮಾತನಾಡಿದರು.
ಸೊಸೈಟಿಯಿಂದ ಪ್ರತಿ ವರ್ಷ ಸ್ವಾತಂತ್ರೊೃೀತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಅದರಲ್ಲೂ ವಿಶೇಷ ಮಕ್ಕಳ ಜತೆ ಆಚರಿಸುತ್ತಿರುವುದು ಸಂತಸದ ವಿಷಯ. ಪಟ್ಟಣದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಯು ಸಾರ್ವಜನಿಕರೊಂದಿಗೂ ಉತ್ತಮ ಸಂಪರ್ಕ ಹೊಂದಿದ್ದು, ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ನವಚೇತನ ವಸತಿ ಶಾಲೆ ಕಾರ್ಯದರ್ಶಿ ಜಿ.ರಾಮಪ್ಪ ಮಾತನಾಡಿ, ಸಾರ್ವಜನಿಕರ ಹಾಗೂ ವಿವಿಧ ಸಂಘಗಳ ಸಹಕಾರದಿಂದ ಶಾಲೆಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಸೊಸೈಟಿಯಿಂದ ಮಕ್ಕಳಿಗೆ ಅಗತ್ಯ ಪರಿಕರ ನೀಡುತ್ತಿರುವುದು ಒಳ್ಳೆಯ ಸಂಗತಿ ಎಂದು ಹೇಳಿದರು.
ಶಾಲೆಯ 60 ಮಕ್ಕಳಿಗೆ ಹೊದಿಕೆ, ಟವೆಲ್‌ಗಳು, ನೀರಿನ ಬಾಟಲಿ ಸೇರಿ ಮತ್ತಿತರ ಪರಿಕರಗಳನ್ನು ವಿತರಿಸಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ ಎಚ್.ಇ.ಮಾಲತೇಶ, ಎಚ್.ಬಿ.ಗಜಾನನ, ಸೇಂಟ್ ಮಿಲಾಗ್ರಿಸ್ ಸೊಸೈಟಿ ಕಿರಿಯ ಸಹಾಯಕರಾದ ಡಿ.ಅಭಿಷೇಕ್, ಡಿ.ಆರ್.ದಿವ್ಯಾ, ವೈ.ಎಚ್.ಸವೀನಾ, ಸಿಬ್ಬಂದಿ ಎನ್.ಲೋಹಿತ್, ಮಂಜುನಾಥ ಹೆಗ್ಗೋಡು, ಮುಖ್ಯ ಶಿಕ್ಷಕ ಎಸ್.ರವೀಂದ್ರ, ಶಿಕ್ಷಕರಾದ ಕೆ.ಬಿ.ಪುಟ್ಟರಾಜು, ಗಾಯತ್ರಿ ನಾಯ್ಕ, ಮಂಗಳಾ ಪೂಜಾರ್, ಎಚ್.ಆರ್.ಸುವರ್ಣಾ, ಸುನೀಲ್‌ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net