ಚಿರತೆ ಸೆರೆಗೆ ಪಂಜರ ಅಳವಡಿಸಿ | B Y vijayendra

ಬಿದರಿಕೊಪ್ಪ ಗ್ರಾಮದ ಹೂವ ನಾಯ್ಕ ಅವರ ಮನೆಗೆ ತೆರಳಿ ಶಾಸಕ ಬಿ.ವೈ.ವಿಜಯೇಂದ್ರ ಆರೋಗ್ಯ ವಿಚಾರಿಸಿದರು.
ಬಿದರಿಕೊಪ್ಪ ಗ್ರಾಮದ ಹೂವ ನಾಯ್ಕ ಅವರ ಮನೆಗೆ ತೆರಳಿ ಶಾಸಕ ಬಿ.ವೈ.ವಿಜಯೇಂದ್ರ ಆರೋಗ್ಯ ವಿಚಾರಿಸಿದರು.
Published on
ಶಿರಾಳಕೊಪ್ಪ: ಶಿಕಾರಿಪುರ ತಾಲೂಕಿನ ತಡಸನಹಳ್ಳಿ, ಅಡಗಂಟಿ ಹಾಗೂ ಬಿದರಿಕೊಪ್ಪ ಗ್ರಾಮಗಳಲ್ಲಿ ಚಿರತೆ ದಾಳಿಯಿಂದ ಗಾಯಗೊಂಡ ರೈತರನ್ನು ಶಾಸಕ ಬಿ.ವೈ.ವಿಜಯೇಂದ್ರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ತಡಸನಹಳ್ಳಿ ಗ್ರಾಮದ ಮುತ್ತು ಮರಮಳ್ಳಿ ಅವರನ್ನು ಶಿಕಾರಿಪುರ ಸರ್ಕಾರಿ ಆಸ್ಪತ್ರೆಯಲ್ಲಿ, ಅಡಗಂಟಿ ಮತ್ತು ಬಿದರಿಕೊಪ್ಪ ಗ್ರಾಮಗಳಿಗೆ ಭೇಟಿ ನೀಡಿ ಸುದೀಪ್ ಹಾಗೂ ಹೂವಾನಾಯ್ಕ ಅವರ ಮನೆಗಳಿಗೆ ತೆರಳಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.
ನಂತರ ಮಾತನಾಡಿದ ಅವರು, ಚಿರತೆ ದಾಳಿ ಆತಂಕವನ್ನು ತಗ್ಗಿಸಲು ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು. ಗ್ರಾಮಗಳಲ್ಲಿ ರಾತ್ರಿ ಪಹರೆ ವ್ಯವಸ್ಥೆ ಬಲಪಡಿಸಿ, ಅಗತ್ಯವಿದ್ದಲ್ಲಿ ಪಂಜರಗಳನ್ನು ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು. ರೈತರು ಕೂಡಾ ಎಚ್ಚರಿಕೆಯಿಂದ ಇರಬೇಕು. ಗಾಯಾಳುಗಳಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಹಾಗೂ ವೈದ್ಯಕೀಯ ನೆರವು ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ, ಅರಣ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಕೆ.ರೇವಣಪ್ಪ, ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಮಹೇಶ್ ಹುಲ್ಮಾರ್, ತಾಪಂ ಮಾಜಿ ಅಧ್ಯಕ್ಷ ಆರ್.ಕೆ.ಶಂಭು, ಮಳವಳ್ಳಿ ಗ್ರಾಪಂ ಮಾಜಿ ಸದಸ್ಯ ಚಂದ್ರು, ಎಪಿಎಂಸಿ ಮಾಜಿ ಅಧ್ಯಕ್ಷ ತಾಳಗುಂದ ಸತೀಶ್, ಈರಣ್ಣ, ಬೆಣ್ಣೆ ಪ್ರವೀಣ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net