ಮಂಗಳೂರು ವ್ಯಾಪ್ತಿಯಿಂದ ಶಿವಮೊಗ್ಗ ಕೈಬಿಡಿ I mangalore limit

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯಿಸಿ ಶಿವಮೊಗ್ಗ ವಕೀಲರ ಸಂಘ ಸೇರಿ ವಿವಿಧ ಸಂಘಟನೆಗಳ ಪ್ರಮುಖರು ಮುಷ್ಕರ ಆರಂಭಿಸಿದರು. ಬಸಪ್ಪ ಗೌಡ, ರಾಘವೇಂದ್ರ ಸ್ವಾಮಿ, ಅಶೋಕ್ ಭಟ್ ಮುಂತಾದವರಿದ್ದರು.
ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆಗೆ ಒತ್ತಾಯಿಸಿ ಶಿವಮೊಗ್ಗ ವಕೀಲರ ಸಂಘ ಸೇರಿ ವಿವಿಧ ಸಂಘಟನೆಗಳ ಪ್ರಮುಖರು ಮುಷ್ಕರ ಆರಂಭಿಸಿದರು. ಬಸಪ್ಪ ಗೌಡ, ರಾಘವೇಂದ್ರ ಸ್ವಾಮಿ, ಅಶೋಕ್ ಭಟ್ ಮುಂತಾದವರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವಕೀಲದ ಸಂಘದಿಂದ ಮುಷ್ಕರ ಆರಂಭ
  • ವಿವಿಧ ಸಂಘ ಸಂಸ್ಥೆಗಳಿದ ಬೆಂಬಲ
ಶಿವಮೊಗ್ಗ: ಹೈಕೋರ್ಟ್ (highcourt) ಸಂಚಾರಿ ಪೀಠವನ್ನು ಶಿವಮೊಗ್ಗ (shivamogga) ದಲ್ಲೇ ಆರಂಭಿಸಬೇಕೆಂದು ಆಗ್ರಹಿಸಿ ವಕೀಲರ (lawyers) ಹೋರಾಟ ಆರಂಭವಾಗಿದೆ. ಇಷ್ಟು ದಿನ ಪತ್ರಿಕಾಗೋಷ್ಠಿ, ಹೇಳಿಕೆ, ಎಚ್ಚರಿಕೆಗಳಿಗೆ ಸೀಮಿತವಾಗಿದ್ದ ವಕೀಲರ ಸಂಘ ಸೋಮವಾರದಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ.
ವಕೀಲರ ಸಂಘದ ಎದುರು ಶಾಮಿಯಾನ ಹಾಕಿಕೊಂಡು ವಕೀಲರು ಮುಷ್ಕರ ಆರಂಭಿಸಿದ್ದಾರೆ. ಮುಷ್ಕರಕ್ಕೆ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಕೈಜೋಡಿಸಿದ್ದಾರೆ. ಶಿವಮೊಗ್ಗ ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸೇರಿ ಅನೇಕ ಸಂಘಟನೆಗಳು ಸಂಚಾರಿ ಪೀಠಕ್ಕಾಗಿ ಆಗ್ರಹಿಸಿವೆ.
ಒಂದು ವೇಳೆ ಕರಾವಳಿ ಭಾಗದ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರಿಪೀಠ ಸ್ಥಾಪಿಸುವುದಾದರೆ ಯಾವ ಕಾರಣಕ್ಕೂ ಆ ವ್ಯಾಪ್ತಿಗೆ ಶಿವಮೊಗ್ಗ ಜಿಲ್ಲೆಯನ್ನು ಸೇರ್ಪಡೆ ಮಾಡಬಾರದು. ಇಲ್ಲಿನ ಪ್ರಕರಣಗಳನ್ನು ಅಲ್ಲಿಗೆ ವರ್ಗಾವಣೆ ಮಾಡಬಾರದು ಎಂದು ವಕೀಲರು ಸೇರಿ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಒತ್ತಾಯಿಸಿದ್ದಾರೆ.
ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ಹೋರಾಟ ಸಮಿತಿ ಅಧ್ಯಕ್ಷ ಬಸಪ್ಪಗೌಡ, ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದ ಕೆ.ವಿ.ವಸಂತಕುಮಾರ್, ಡಾ. ಎ.ಸತೀಶ್ ಕುಮಾರ್ ಶೆಟ್ಟಿ, ಎಸ್.ಬಿ.ಅಶೋಕ್‌ಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net