ಅನುದಾನ ತಲುಪುವ ಮುಂಚೆಯೇ ಸೋರಿಕೆ

ತೀರ್ಥಹಳ್ಳಿಯಲ್ಲಿ ಕುರುವಳ್ಳಿಯ 19 ಜೋಪಡಿ ವಾಸಿಗಳ ಕುಟುಂಬಕ್ಕೆ ಹಕ್ಕುಪತ್ರ ವಿತರಿಸಲಾಯಿತು. ಆರಗ ಜ್ಞಾನೇಂದ್ರ, ಆರ್​.ಎಂ.ಮಂಜುನಾಥ ಗೌಡ, ಜಿ.ಪಲ್ಲವಿ, ಸಚ್ಚಿಂದ್ರ ಹೆಗ್ಗಡೆ, ರತ್ನಾಕರ ಶೆಟ್ಟಿ ಇತರರಿದ್ದರು.
ತೀರ್ಥಹಳ್ಳಿಯಲ್ಲಿ ಕುರುವಳ್ಳಿಯ 19 ಜೋಪಡಿ ವಾಸಿಗಳ ಕುಟುಂಬಕ್ಕೆ ಹಕ್ಕುಪತ್ರ ವಿತರಿಸಲಾಯಿತು. ಆರಗ ಜ್ಞಾನೇಂದ್ರ, ಆರ್​.ಎಂ.ಮಂಜುನಾಥ ಗೌಡ, ಜಿ.ಪಲ್ಲವಿ, ಸಚ್ಚಿಂದ್ರ ಹೆಗ್ಗಡೆ, ರತ್ನಾಕರ ಶೆಟ್ಟಿ ಇತರರಿದ್ದರು.
Published on
ತೀರ್ಥಹಳ್ಳಿ: ತುಂಗಾ ಕಮಾನು ಸೇತುವೆ ಪಕ್ಕದಲ್ಲಿ ಜೋಪಡಿಯಲ್ಲಿ ವಾಸಿಸುವ ಕುಟುಂಬಗಳಿಗೆ ಶಾಶ್ವತ ನೆಲೆ ಕಲ್ಪಿಸಲು ಹಲವು ಹೋರಾಟಗಳು ನಡೆದಿವೆ. ಸಮುದಾಯಗಳಿಗೆ ಸರ್ಕಾರ ನೀಡಿದ ಅನುದಾನ ತಲುಪುವ ಮುಂಚೆಯೇ ಸೋರಿಕೆಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದರು.
ಪಟ್ಟಣ ಪಂಚಾಯಿತಿಯಿಂದ ಶುಕ್ರವಾರ ನಾಗರತ್ನಾ ಸಭಾಭವನದಲ್ಲಿ ಕುರುವಳ್ಳಿಯ 19 ಜೋಪಡಿ ವಾಸಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದ ಅವರು, ಬಹಳ ವರ್ಷಗಳ ಹಿಂದೆ ಬೊಮ್ಮರಸಯ್ಯನ ಅಗ್ರಹಾರದಲ್ಲಿ 128 ನಿವೇಶನ ಹಂಚಿಕೆ ಮಾಡಲಾಗಿತ್ತು. ಅದಾದ ನಂತರ ಮಾಡಿದ ಪ್ರಯತ್ನಗಳಿಗೆ ಬಹಳಷ್ಟು ಮಂದಿ ಅಡ್ಡಗಾಲು ಹಾಕಿದ್ದರು ಎಂದು ದೂರಿದರು. 
ಪುತ್ತಿಗೆ ಮಠದ ಶ್ರೀಗಳೊಂದಿಗೆ ಚರ್ಚಿಸಿ ಪಟ್ಟಣ ಪಂಚಾಯಿತಿಗೆ ಜಾಗ ಖರೀದಿಸಲು ಮಾತುಕತೆ ನಡೆಸಲಾಗಿತ್ತು. ಆದರೆ ಲೇಔಟ್​ ಮಾಫಿಯಾದವರು ತೊಂದರೆ ನೀಡಿದರು. ಜಾಗ ಕೊಡದಂತೆ ಅರಣ್ಯ ಇಲಾಖೆಗೆ ಪತ್ರ ಬರೆದರು. 2019ರಲ್ಲೆ ಆರಂಭಗೊಂಡ ಪ್ರಯತ್ನ ಆಡಳಿತದ ರ್ನಿಲ್ಯದಿಂದ ತಡವಾಯಿತು ಎಂದು ಬೇಸರ ವ್ಯಕ್ತಪಡಿಸಿದರು.
ಅಲೆಮಾರಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯಕ್ಕೆ ಇಂದಿಗೂ ಸರಿಯಾದ ನ್ಯಾಯ ಸಿಗಲಿಲ್ಲ. ಅವರ ಹೆಸರಿನಲ್ಲಿ ಕಾಂಗ್ರೆಸ್​ ಸರ್ಕಾರ ಕೇವಲ ರಾಜಕೀಯ ಮಾಡುತ್ತಿದೆ. 6 ತಿಂಗಳಿನಿಂದ ಗುಡ್ಡಗಾಡು ಜನರಿಗೆ ಕೊಡುವ ದಿನಸಿ ಸಾಮಗ್ರಿ ಕೊಟ್ಟಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯ ಆರ್​.ಎಂ.ಮಂಜುನಾಥ ಗೌಡ, ಅಲೆಮಾರಿ ಮತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯೆ ಜಿ.ಪಲ್ಲವಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯ ಶಚೀಂದ್ರ ಹೆಗ್ಡೆ, ಪಪಂ ಅಧ್ಯ ರತ್ನಾಕರ ಎನ್​. ಶೆಟ್ಟಿ, ಉಪಾಧ್ಯೆ ಗೀತಾ, ಸದಸ್ಯರಾದ ಸಂದೇಶ ಜವಳಿ, ಸೊಪ್ಪುಗುಡ್ಡೆ ರಾವೇಂದ್ರ, ರಹಮತ್​ ಉಲ್ಲಾ ಅಸಾದಿ, ಮುಖ್ಯಾಧಿಕಾರಿ ಡಿ.ನಾಗರಾಜ, ತಹಸೀಲ್ದಾರ್​ ಎಸ್​.ರಂಜಿತ್​ ಇದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net