ಭಾಷೆಗೆ ಯಾವುದೇ ಜಾತಿ, ಧರ್ಮದ ಹಂಗಿಲ್ಲ

ಸೊರಬ ದೇವರಾಜ ಅರಸು ಮೆಟ್ರಿಕ್​ ನಂತರದ ಬಾಲಕಿಯರ ವಿದ್ಯಾರ್ಥಿನಿಯರ ನಿಲಯದಲ್ಲಿ ಕನ್ನಡ ಸಾಹಿತ್ಯ ಸಾಂಸತಿಕ ವೇದಿಕೆಯಿಂದ ಆಯೋಜಿಸಿದ್ದ ವಿಶ್ವ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಸಾಹಿತಿ ಡಾ. ಶಾಂತಾರಾಮ್​ ಪ್ರಭು  ಉದ್ಘಾಟಿಸಿದರು. ಮೋಹನ್​ಕುಮಾರ್​, ಡಾ. ಉಮೇಶ್​, ಷಣ್ಮುಖಾಚಾರ್​, ಪ್ರಜ್ವಲ್​ ಇತರರಿದ್ದರು.
ಸೊರಬ ದೇವರಾಜ ಅರಸು ಮೆಟ್ರಿಕ್​ ನಂತರದ ಬಾಲಕಿಯರ ವಿದ್ಯಾರ್ಥಿನಿಯರ ನಿಲಯದಲ್ಲಿ ಕನ್ನಡ ಸಾಹಿತ್ಯ ಸಾಂಸತಿಕ ವೇದಿಕೆಯಿಂದ ಆಯೋಜಿಸಿದ್ದ ವಿಶ್ವ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಸಾಹಿತಿ ಡಾ. ಶಾಂತಾರಾಮ್​ ಪ್ರಭು ಉದ್ಘಾಟಿಸಿದರು. ಮೋಹನ್​ಕುಮಾರ್​, ಡಾ. ಉಮೇಶ್​, ಷಣ್ಮುಖಾಚಾರ್​, ಪ್ರಜ್ವಲ್​ ಇತರರಿದ್ದರು.
Published on
ಸೊರಬ: ಭಾಷೆಗೆ ಯಾವುದೇ ಜಾತಿ, ಮತ, ಧರ್ಮ, ಪಂಥದ ತಾರತಮ್ಯವಿಲ್ಲ. ತಾಯಿ ನುಡಿ ಮತ್ತು ತಾಯಿ ನಾಡಿನ ಬಗ್ಗೆ ಗೌರವ, ಅಭಿಮಾನ ಹೊಂದಿರಬೇಕು ಎಂದು ಸಾಹಿತಿ ಡಾ. ಶಾಂತಾರಾಮ್​ ಪ್ರಭು ಹೇಳಿದರು. 
ಪಟ್ಟಣದ ದೇವರಾಜ ಅರಸು ಮೆಟ್ರಿಕ್​ ನಂತರದ ಬಾಲಕಿಯರ ವಿದ್ಯಾರ್ಥಿನಿಯರ ನಿಲಯದಲ್ಲಿ ಕನ್ನಡ ಸಾಹಿತ್ಯ ಸಾಂಸತಿಕ ವೇದಿಕೆಯಿಂದ ಆಯೋಜಿಸಿದ್ದ ವಿಶ್ವ ಮಾತೃಭಾಷಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತರಬೇತುದಾರ ಗುರುದೇವ ಬಳುಂಡಗಿ ಮಾತನಾಡಿ, ಭಾಷೆಗಳು ಹಲವು ಪ್ರಭಾವಗಳಿಂದ ಅಳಿವಿನ ಅಂಚಿನಲ್ಲಿವೆ. ಅಂತಹ ಭಾಷೆಗಳನ್ನು ಮಾತನಾಡುವ, ಬರೆಯುವ ಮೂಲಕ ಇತರರು ಮಾತನಾಡುವಂತೆ ಪ್ರೇರಣೆ ನೀಡುವ ಪ್ರಯತ್ನವಾಗಬೇಕು. ಇಂದು ನಮ್ಮ ಮೂಲ ಭಾಷೆ ಮರೆತು ಬೇರೆ ಭಾಷೆ ಮಾತನಾಡಲು ಪ್ರಯತ್ನ ಮಾಡುತ್ತೇವೆ. ಇದು ವಿಪರ್ಯಾಸ ಎಂದರು.
ಕನ್ನಡ ಸಾಹಿತ್ಯ ಸಾಂಸತಿಕ ವೇದಿಕೆ ಅಧ್ಯ ಶಂಕರ್​ ಶೇಟ್​ ಮಾತನಾಡಿ, ಕನ್ನಡ ಸಾಹಿತ್ಯ ಸಾಂಸತಿಕ ವೇದಿಕೆ ಕಳೆದ ಹಲವು ವರ್ಷಗಳಿಂದ ಕನ್ನಡಪರ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಸಾವಿರಕ್ಕೂ ಹೆಚ್ಚು ಕಲಾವಿದರನ್ನು ಗುರುತಿಸಿ ಬೆಳಕಿಗೆ ತರುವ ಕೆಲಸ ನಮ್ಮ ವೇದಿಕೆ ಮಾಡುತ್ತಿರುವುದು ಹೆಮ್ಮೆಯ ಸಂಗತಿ. ವಿಶ್ವದಲ್ಲಿಯೇ ಅತ್ಯಂತ ಸರಳ, ಸುಂದರ, ಸುಲಲಿತ ಭಾಷೆ ಕನ್ನಡ. ನಮ್ಮ ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿ ಇರುವುದು ಕನ್ನಡ ಭಾಷೆಗೆ ಮಾತ್ರ ಎಂದು ತಿಳಿಸಿದರು.
ಭಾರತೀಯ ಪರಂಪರೆಯಲ್ಲಿ ಭಾಷೆಗೆ ತನ್ನದೆ ಆದ ವೈಶಿಷ್ಟ, ಹಿರಿಮೆ ಇದೆ. ಕನ್ನಡ ವಿಶ್ವಲಿಪಿಗಳ ರಾಣಿ ಆಗಿದೆ. ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಕನ್ನಡ ಭಾಷೆ ಎಂಬುದು ನಮ್ಮೆಲ್ಲರ ಹಿರಿಮೆ ಎಂದರು. ದೂರದರ್ಶನ ಚಂದನ ವಾಹಿನಿ ಕಲಾವಿದೆ ಸಂಗೀತ ಚೌಹಾಣ್​, ಶಿಕಿ ಕೊಂಡಮ್ಮ ಅವರನ್ನು ಸನ್ಮಾನಿಸಲಾಯಿತು.
ಬಿಸಿಎಂ ಇಲಾಖೆ ಅಧಿಕಾರಿ ಮೋಹನ್​ಕುಮಾರ್​, ಡಾ.ಉಮೇಶ್​ ಭದ್ರಾಪುರ, ಕಸಾಪ ಅಧ್ಯ ಷಣ್ಮುಖಾಚಾರ್​, ಉಪನ್ಯಾಸಕ ಪ್ರಜ್ವಲ್​, ನಿಲಯ ಪಾಲಕಿ ಕುಮುದಾ, ಪ್ರತಿಮಾ, ರೇವಣಪ್ಪ, ವಕೀಲ ಡಾಕಪ್ಪ, ಶಿಕ ರಮೇಶ್​, ಮಹೇಶ್​, ನಟರಾಜ್​, ಸುಮಾ, ಮಹೇಶ್​ ಖಾರ್ವಿ ಇತರರಿದ್ದರು.  
ದೇಶದಲ್ಲಿ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದಾರೆ. ಅವರಿಗೆ ಅವರವರ ಭಾಷೆ ಮೇಲೆ ಅಭಿಮಾನ ಇರುತ್ತದೆ. ಭಾಷೆಗೆ ಯಾವುದೇ ಮಿತಿಯಿಲ್ಲ. ಭಾಷೆ ಉಳಿಸಿ, ಬೆಳೆಸಲು ಮುಂದಾದರೆ ಅದು ನಮ್ಮನ್ನು ಕಾಪಾಡುತ್ತದೆ. ಭಾಷೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು.
> ಡಾ. ಶಾಂತಾರಾಮ್​ ಪ್ರಭು 
ಸಾಹಿತಿ 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net