ಕೆಳದಿ ದೇವಸ್ಥಾನದ ಪಕ್ಕದಲ್ಲಿ ಧರೆ ಕುಸಿತ

ಸಾಗರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿ ಮಳೆಯಿಂದಾಗಿ ಧರೆ ಕುಸಿದಿರುವುದು.
ಸಾಗರ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿ ಮಳೆಯಿಂದಾಗಿ ಧರೆ ಕುಸಿದಿರುವುದು.
Published on
ಸಾಗರ: ತಾಲೂಕಿನಲ್ಲಿ ಸುರಿದ ವಿಪರೀತ ಮಳೆಯ ಕಾರಣ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿ ದಿಬ್ಬದ ಮಣ್ಣು ಕುಸಿದಿದೆ. ಪಕ್ಕದಲ್ಲಿಯೇ ಮಹೇಶ್​ ದೇವಾಡಿಗ ಎಂಬುವವರ ಮನೆ ಇದ್ದು, ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಕಳೆದ ಮೂರ್ನಾಲ್ಕು ದಿನಗಳಿಂದ ಗಾಳಿ ಸಹಿತ ಮಳೆ ಆಗುತ್ತಿರುವ ಕಾರಣಕ್ಕೆ ಧರೆ ಕುಸಿದಿದೆ.   
ಈ ಗುಡ್ಡದ ಮೇಲ್ಭಾಗದಲ್ಲಿ ಕೆಳದಿ ಮಾಸೂರು ಎ್​&6 ವಿದ್ಯುತ್​ ಮಾರ್ಗ ಹಾದು ಹೋಗಿದೆ. ವಿಪರೀತ ಮಳೆ ಜತೆಗೆ ಗಾಳಿ ಇರುವುದರಿಂದ ಗುಡ್ಡದ ಮೇಲಿನ ವಿದ್ಯುತ್​ ಕಂಬಗಳು ಮುರಿದು ಬಿದ್ದು ಮಹೇಶ್​ ದೇವಾಡಿಗ ಅವರ ಮನೆ ಮೇಲೆ ವಿದ್ಯುತ್​ ತಂತಿ ಬೀಳುವ ಸಾಧ್ಯತೆ ಇದೆ. ತಣ ಮೆಸ್ಕಾಂ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ವಿದ್ಯುತ್​ ಕಂಬ ಬೀಳದಂತೆ ಸೂಕ್ತ ವ್ಯವಸ್ಥೆ ಒದಗಿಸಲು ರೈತ ಸಂದ ಜಿಲ್ಲಾ ಕಾರ್ಯಾಧ್ಯ ರಮೇಶ್​ . ಕೆಳದಿ ಮನವಿ ಮಾಡಿದ್ದಾರೆ.  
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net