ಬೀರನಕೆರೆಯಲ್ಲಿ ಕೆರೆಬೇಟೆ ಸಂಭ್ರಮ

ಸೊರಬ ತಾಲೂಕಿನ ಜೇಡಗೇರಿ ಗ್ರಾಮದ ಬೀರನಕೆರೆಯಲ್ಲಿ ನಡೆದ ಕೆರೆಬೇಟೆ.
ಸೊರಬ ತಾಲೂಕಿನ ಜೇಡಗೇರಿ ಗ್ರಾಮದ ಬೀರನಕೆರೆಯಲ್ಲಿ ನಡೆದ ಕೆರೆಬೇಟೆ.
Published on
ಸೊರಬ: ಪುರಸಭೆ ವ್ಯಾಪ್ತಿಯ ಜೇಡಗೇರಿ ಗ್ರಾಮದ ಬೀರನಕೆರೆಯಲ್ಲಿ ಕೆರೆಬೇಟೆ ಮಂಗಳವಾರ ಭರ್ಜರಿಯಾಗಿ ನಡೆಯಿತು. 
ಮಲೆನಾಡಿನ ಅಪ್ಪಟ ಗ್ರಾಮೀಣ ಕ್ರೀಡೆಯಾಗಿರುವ ಕೆರೆಬೇಟೆಯಲ್ಲಿ ಪಾಲ್ಗೊಳ್ಳುವವರು ಏಕ ಕಾಲದಲ್ಲಿ ಕೆರೆಗೆ ಇಳಿದು ಮೀನುಗಳನ್ನು ಹಿಡಿಯುತ್ತಾರೆ. ಇದನ್ನು ನೋಡಲು ಅಕ್ಕಪಕ್ಕದ ಊರುಗಳಿಂದ ನೂರಾರು ಜನ ಆಗಮಿಸಿದ್ದರು. ಮಳೆಗಾಲದಲ್ಲಿ ಕೆರೆಗಳಿಗೆ ಮೀನಿನ ಮರಿಗಳನ್ನು ಬಿಡಲಾಗುತ್ತದೆ. ನಂತರ ಬೇಸಿಗೆಯಲ್ಲಿ ಕೆರೆಗಳು ಬತ್ತಿದಾಗ ಕೆರೆಬೇಟೆ ಸಾರಲಾಗುತ್ತದೆ. ಈ ಬಾರಿ ಗ್ರಾಮದ ಮಾರಿಕಾಂಬ ದೇವಸ್ಥಾನ ಕಟ್ಟಡ ಸಹಯಾರ್ಥ ಒಂದು ಕೂಣಿಗೆ 600 ರೂ. ನಿಗದಿ ಮಾಡಲಾಗಿತ್ತು. 
ಗ್ರಾಮದಲ್ಲಿ ನಡೆದ ಕೆರೆಬೇಟೆಯಲ್ಲಿ ಕೂಣಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಗ್ರಾಮಸ್ಥರು ಮಾತ್ರವಲ್ಲದೆ ಸುತ್ತಲಿನ ಗ್ರಾಮದವರು ಜಾತಿ, ಮತ ಭೇದವಿಲ್ಲದೆ ಹಿರಿಯರು, ಕಿರಿಯರು ಪಾಲ್ಗೊಂಡಿದ್ದರು. ಕೆಲವರಿಗೆ ಅಂದಾಜು 5-6 ಕೆ.ಜಿ.ವರೆಗೆ ಮೀನುಗಳು ಸಿಕ್ಕವು. ಕೂಣಿ ಹಿಡಿದು ಕೆರೆಗೆ ಇಳಿದವರು ಸಂತಸದಿಂದಲೇ ಕೆರೆಬೇಟೆ ಮಾಡಿ ತೆರಳಿದರು. ಬಿದರಿನ ಕೂಣಿಯ ಬದಲಿಗೆ ಕಬ್ಬಿಣದ ಕೂಣಿಗಳನ್ನೂ ಸಹ ಬಳಸಲಾಯಿತು. ಗ್ರಾಮ ಸಮಿತಿಯವರು ಯಾವುದೇ ಗಲಾಟೆ ಮತ್ತು ಗೊಂದಲಗಳಿಗೆ ಅವಕಾಶ ನೀಡದಂತೆ ಅಚ್ಚುಕಟ್ಟಾಗಿ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net