ಈಗ ತಾಲೂಕಿನಲ್ಲಿ ಮೆಕ್ಕೆಜೋಳವನ್ನು 15,000 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ಭತ್ತವನ್ನು 10,000 ಹೆಕ್ಟೇರ್ನಲ್ಲಿ ಮಾತ್ರ ಬೆಳೆಯಲಾಗುತ್ತಿದೆ. ತಾಳಗುಂದ, ಉಡುಗಣಿ, ಹೊಸೂರು ಹೋಬಳಿಯಲ್ಲಿ ಶೇ. 10ರಷ್ಟು ಬಿತ್ತನೆಯಾಗಿದೆ. ಹಿಂದೆ ಸಾಕಷ್ಟು ರೈತರು ರೋಹಿಣಿ ಮಳೆಗೆ ಮೆಕ್ಕೆಜೋಳ ಬಿತ್ತನೆ ಮಾಡುತ್ತಿದ್ದರು. ಆದರೆ ಇದೀಗ ಮಳೆ ವ್ಯತ್ಯಯದಿಂದ ಬಿತ್ತನೆಗೆ ಚಿಂತಿಸುವಂತಾಗಿದೆ.