ಕುಳ್ಳಿ ಕಿರಣ್ ಕೊಲೆ ಆರೋಪಿ ಕಾಲಿಗೆ ಗುಂಡೇಟು | police Fairing

ಪೊಲೀಸರ ಗುಂಡೇಟಿನಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಆರೋಪಿ ಉಮೇಶ್ ನಾಯ್ಕ.
ಪೊಲೀಸರ ಗುಂಡೇಟಿನಿಂದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ಆರೋಪಿ ಉಮೇಶ್ ನಾಯ್ಕ.
Published on

ಪ್ರಮುಖ ಮುಖ್ಯಾಂಶಗಳು

  • ಹೊಸಕೊಪ್ಪದ ಉಮೇಶ್ ನಾಯ್ಕ ಅಲಿಯಾಸ್ ಡಿಯೋ ಉಮೇಶ್ ಕಾಲಿಗೆ ಗುಂಡೇಟು
  • ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ ತುಂಗಾನಗರ ಪೊಲೀಸರು
  • ಪೇದೆ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲು ಯತ್ನ, ಎಡಗಾಲಿಗೆ ಗುಂಡು ಹಾರಿಸಿದ ಇನ್‌ಸ್ಪೆಕ್ಟರ್
ಶಿವಮೊಗ್ಗ: ನಗರದ ಹೊರವಲಯದ ರಾಮೇನಕೊಪ್ಪದಲ್ಲಿ ನಡೆದ ಸೀಗೇಹಟ್ಟಿಯ ಕುಳ್ಳಿ ಕಿರಣ್ ಕೊಲೆ(Kulli Kiran murder) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಮುಂದಾಗಿದ್ದ ಪ್ರಮುಖ ಆರೋಪಿ ಕಾಲಿಗೆ ಗುಂಡೇಟು ಬಿದ್ದಿದೆ. ಇದರೊಂದಿಗೆ ಪ್ರಕರಣದಲ್ಲಿ ಭಾಗಿಯಾಗಿದ್ದರು ಎನ್ನಲಾದ ನಾಲ್ವರನ್ನೂ ತುಂಗಾನಗರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶಿವಮೊಗ್ಗ ತಾಲೂಕಿನ ಹೊಸಕೊಪ್ಪದ ಉಮೇಶ್ ನಾಯ್ಕ ಅಲಿಯಾಸ್ ಡಿಯೋ ಉಮೇಶ್ ಕಾಲಿಗೆ ಗುಂಡೇಟು ಬಿದ್ದಿದ್ದು, ಗಾಯಾಳುವನ್ನು ಮೆಗ್ಗಾನ್ ಆಸ್ಪತ್ರೆ(Meggan Hospital)ಗೆ ದಾಖಲಿಸಲಾಗಿದೆ. ಸುನೀಲ್, ಭುವನ್, ಮನೋಜ್ ಮತ್ತು ಬಾಬು ರಾಜೇಂದ್ರ ಪ್ರಸಾದ್ ಅಲಿಯಾಸ್ ಅಪ್ಪು ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ.
ಭಾನುವಾರ ಸಂಜೆ ಹಣಕಾಸಿನ ವಿಚಾರ(Financial matters)ಕ್ಕೆ ಸಂಬಂಧಿಸಿದಂತೆ ಸೀಗೇಹಟ್ಟಿಯಿಂದ ರಾಮೇನಕೊಪ್ಪಕ್ಕೆ ಕುಳ್ಳಿ ಕಿರಣ್‌ನನ್ನು ಕರೆಸಿಕೊಂಡಿದ್ದ ಆರೋಪಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದರು. ಸೋಮವಾರ ಬೆಳಗ್ಗೆ ಆರೋಪಿ ಉಮೇಶ್ ನಾಯ್ಕ್ ಎನ್.ಆರ್.ಪುರ ರಸ್ತೆಯಲ್ಲಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತುಂಗಾನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸಿದ್ದರು. ಅಲ್ಲಿಂದ ಜೀಪ್‌ನಲ್ಲಿ ಕರೆ ತರುವಾಗ ಮೂತ್ರ ವಿಸರ್ಜನೆ(Urination) ನೆಪ ಹೇಳಿ ಜೀಪ್‌ನಿಂದ ಇಳಿದಿದ್ದ ಉಮೇಶ್ ನಾಯ್ಕ, ತುಂಗಾನಗರ ಠಾಣೆ ಪೇದೆ ತಮ್ಮಣ್ಣ ಅವರ ಮೇಲೆ ಹಲ್ಲೆ ನಡೆಸಿ ಪರಾರಿ ಆಗಲು ಯತ್ನಿಸಿದ್ದ ಎನ್ನಲಾಗಿದೆ.
ಈ ವೇಳೆ ಸ್ಥಳದಲ್ಲಿದ್ದ ಇನ್‌ಸ್ಪೆಕ್ಟರ್ ಕೆ.ಟಿ.ಗುರುರಾಜ್(Inspector K.T.Gururaj) ಎಚ್ಚರಿಕೆ ನೀಡಿದರೂ ಲೆಕ್ಕಿಸದೆ ಪರಾರಿ ಆಗಲು ಮುಂದಾದಾಗ ಉಮೇಶ್ ನಾಯ್ಕನ ಎಡಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಘಟನಾ ಸ್ಥಳ ಮತ್ತು ಮೆಗ್ಗಾನ್ ಆಸ್ಪತ್ರೆಗೆ ಎಸ್‌ಪಿ ಬಿ.ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಣಕಾಸಿನ ವ್ಯವಹಾರವೇ ಹತ್ಯೆಗೆ ಕಾರಣ

"

ಕುಳ್ಳಿ ಕಿರಣ್ ಹತ್ಯೆ ಪ್ರಕರಣದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದ ಆರೋಪಿ ಉಮೇಶ್ ನಾಯ್ಕನ ಕಾಲಿಗೆ ಗುಂಡೇಟು ಬಿದ್ದಿದೆ. ಹತ್ಯೆಯಾದ ಕಿರಣ್ ಮೇಲೆಯೂ ಕೊಲೆ, ಕೊಲೆ ಯತ್ನ ಸೇರಿ ಆರು ಪ್ರಕರಣಗಳಿದ್ದವು. ಆತ ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗದಲ್ಲಿ ಹೆಚ್ಚಾಗಿ ಇರುತ್ತಿರಲಿಲ್ಲ. ಕಿರಣ್‌ನನ್ನು ಗಡಿಪಾರು ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆ ನಿಟ್ಟಿನಲ್ಲಿ ರೌಡಿ ಪಡೆ ಆತನ ಮೇಲೆ ನಿಗಾ ಇಟ್ಟಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net