ಕೂಡ್ಲಿಯ ಸಂಗಮೇಶ್ವರ ಜಾತ್ರೆ ಆರಂಭ | Religious programme

ತುಂಗಭದ್ರಾ ಸಂಗಮದ ಕೂಡ್ಲಿಯ ಸಂಗಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಸೇರಿದ್ದ ಭಕ್ತ ಸಮೂಹ.
ತುಂಗಭದ್ರಾ ಸಂಗಮದ ಕೂಡ್ಲಿಯ ಸಂಗಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಸೇರಿದ್ದ ಭಕ್ತ ಸಮೂಹ.
Published on
ಹೊಳೆಹೊನ್ನೂರು: ತುಂಗಭದ್ರಾ ಸಂಗಮದ ಕೂಡ್ಲಿಯ ಸಂಗಮೇಶ್ವರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ಆರಂಭವಾಗಿದೆ.
ಯುಗಾದಿ ಅಮಾವಾಸ್ಯೆಯಂದು ಸಂಗಮೇಶ್ವರ ಜಾತ್ರೆಗೆ ಚಾಲನೆ ನೀಡಲಾಗುತ್ತದೆ. ಒಂದು ವಾರಗಳ ಕಾಲ ನಡೆಯುವ ಉತ್ಸವ ಹೊಳೆ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದೆ. ತಾಲೂಕಿನ ಬಹುತೇಕ ಗ್ರಾಮಗಳ ಗ್ರಾಮ ದೇವರುಗಳನ್ನು ಸಂಗಮೇಶ್ವರ ಸನ್ನಿಧಾನಕ್ಕೆ ತಂದು ಪುಣ್ಯ ಸ್ನಾನ ಮಾಡಿಸಿ ವಿಶೇಷ ಪೂಜೆ ನೆರವೇರಿಸುವುದು ವಾಡಿಕೆ.
ಕಳೆದೆರಡು ದಿನಗಳಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ಮಹಿಳೆ ಮಕ್ಕಳಾದಿಯಾಗಿ ಸಂಗಮೇಶ್ವರನಿಗೆ ಹಣ್ಣು-ಕಾಯಿ ನೈವೇದ್ಯ ಮಾಡಿದರು.
ಸಂಗಮ ಸ್ಥಳದಿಂದ ಜಾತ್ರೆ ನಡೆಯುವ ಜಾಗಕ್ಕೆ ಹೋಗಿ ಬರುವುದಕ್ಕೆ ತೆಪ್ಪಗಳನ್ನು ಬಳಸಲಾಯಿತು. ಭದ್ರಾ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆ ಇದ್ದ ಕಾರಣ ಡಣಾಯಕಪುರ ಭಾಗದಿಂದ ಬರುವ ಭಕ್ತರು ಭದ್ರಾ ನದಿಯಲ್ಲಿ ನಡೆದುಕೊಂಡೇ ಜಾತ್ರೆ ಸ್ಥಳ ತಲುಪಿದರು. ಕೂಡ್ಲಿ ಸಂಗಮದ ಹೊಳೆ ಜಾತ್ರೆಗೆ ಜಿಲ್ಲೆ ಸೇರಿದಂತೆ ಪಕ್ಕದ ಕೇರಳ, ಆಂಧ್ರಪ್ರದೇಶದಿಂದ ಭಕ್ತರು ಆಗಮಿಸುತ್ತಾರೆ. ಪುಣ್ಯ ಸ್ನಾನ ಮಾಡಿದವರು ಎಲ್ಲೆಂದರಲ್ಲಿ ಬಟ್ಟೆಗಳನ್ನು ಬಿಟ್ಟು ಹೋಗಿರುವುದು ಕಿರಿಕಿರಿ ಉಂಟಾಯಿತು. ಸ್ಥಳೀಯ ಪೊಲೀಸರು ನದಿಯಲ್ಲಿ ಮಕ್ಕಳ ಜಾಗರೂಕತೆ ಸೇರಿ ಜೇಬುಗಳ್ಳರ ಬಗ್ಗೆ ಮೈಕ್‌ನಲ್ಲಿ ಜಾಗೃತಿ ಮೂಡಿಸುತ್ತಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net