ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಕೆಎಸ್‌ಆರ್‌ಟಿಸಿಗೆ ಪ್ರಥಮ ಬಹುಮಾನ
ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿ ಪ್ರಥಮ ಸ್ಥಾನ ಪಡೆದ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಶಿವಮೊಗ್ಗ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬಹುಮಾನ ವಿತರಿಸಲಾಯಿತು. ಡಾ. ಧನಂಜಯ ಸರ್ಜಿ, ಗುರುದತ್ತ ಹೆಗಡೆ, ಜಿ.ಕೆ.ಮಿಥುನ್‌ಕುಮಾರ್ ಇತರರಿದ್ದರು.
Published on:
Copied
Follow Us
ಶಿವಮೊಗ್ಗ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಕನ್ನಡ ರಾಜ್ಯೋತ್ಸವ ಮೆರವಣಿಗೆಯ ಸ್ತಬ್ಧಚಿತ್ರ ಪ್ರದರ್ಶನದಲ್ಲಿ ಶಿವಮೊಗ್ಗದ ಕೆಎಸ್‌ಆರ್‌ಟಿಸಿ ಪ್ರಥಮ ಬಹುಮಾನ ಪಡೆಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸ್ತಬ್ಧಚಿತ್ರಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದವು. ಸಾಂಸ್ಕೃತಿಕ ವಿಭಾಗದಲ್ಲಿ ಕರ್ನಾಟಕ ಕಲಾ ವೈಭವ ರಿಮಿಕ್ಸ್ ಹಾಡಿಗೆ ಪ್ರದರ್ಶನ ನೀಡಿದ ಕೋಟೆ ರಸ್ತೆಯ ಮಹಾವೀರ ವಿದ್ಯಾಲಯದ ಮಕ್ಕಳು ಪ್ರಥಮ ಬಹುಮಾನ ಪಡೆದರು.
ಕರ್ನಾಟಕ ಸಾಂಸ್ಕೃತಿಕ ವೈಭವದ ರಿಮಿಕ್ಸ್ ಹಾಡಿಗೆ ಹೆಜ್ಜೆ ಹಾಕಿದ ಶರಾವತಿ ನಗರದ ಆದಿಚುಂಚನಗಿರಿ ವಿದ್ಯಾಸಂಸ್ಥೆ ಮಕ್ಕಳು ದ್ವಿತೀಯ ಮತ್ತು ಕನ್ನಡ ಫ್ಯೂಜನ್ ಹಾಡಿಗೆ ನೃತ್ಯ ಪ್ರದರ್ಶಿಸಿದ ಡಿವಿಎಸ್ ವಿದ್ಯಾಸಂಸ್ಥೆ ಮಕ್ಕಳು ತೃತೀಯ ಬಹುಮಾನ ಪಡೆದರು.