ಕೆಎಸ್‌ಆರ್‌ಪಿ ಪೇದೆ ಹೃದಯಾಘಾತದಿಂದ ಸಾವು | Heart attack

ಕೆಎಸ್‌ಆರ್‌ಪಿ 8ನೇ ಪಡೆಯ ಪೊಲೀಸ್ ಕಾನ್ಸ್‌ಟೇಬಲ್ ಈರಣ್ಣ ಗುಡಾದಾರ್.
ಕೆಎಸ್‌ಆರ್‌ಪಿ 8ನೇ ಪಡೆಯ ಪೊಲೀಸ್ ಕಾನ್ಸ್‌ಟೇಬಲ್ ಈರಣ್ಣ ಗುಡಾದಾರ್.
Published on

ಪ್ರಮುಖ ಮುಖ್ಯಾಂಶಗಳು

  • 18 ದಿನಗಳ ಹಿಂದೆಯಷ್ಟೇ ವಿವಾಹ
  • ಕೆಎಸ್‌ಆರ್‌ಪಿ 8ನೇ ಪಡೆಯ ಪೇದೆ
  • ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವು
ಶಿವಮೊಗ್ಗ: ಕರ್ನಾಟಕ ರಾಜ್ಯ ಮೀಸಲು ಪೊಲೀಸ್(ಕೆಎಸ್‌ಆರ್‌ಪಿ) 8ನೇ ಪಡೆಯ ಪೊಲೀಸ್ ಕಾನ್ಸ್‌ಟೇಬಲ್(constable) ಈರಣ್ಣ ಗುಡಾದಾರ್(26) ವರ್ಷ ಅವರು ಮಂಗಳವಾರ ತೀವ್ರ ಹೃದಯಾಘಾತ(heart attack)ದಿಂದ ಮೃತಪಟ್ಟಿದ್ದಾರೆ.
ಮೂಲತಃ ಬೆಳಗಾವಿ(Belagavi) ಜಿಲ್ಲೆಯ ಗೋಕಾಕ್ ತಾಲೂಕಿನ ಈರಣ್ಣ ಕಳೆದ 7 ವರ್ಷಗಳಿಂದ ಶಿವಮೊಗ್ಗದ ಕೆಎಸ್‌ಆರ್‌ಪಿ 8ನೇ ಪಡೆಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್ ಆಗಿದ್ದರು. ತೀವ್ರ ಹೃದಯಾಘಾತ ಸಂಭವಿಸಿದಾಗ ತಕ್ಷಣ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಈರಣ್ಣ ಅವರಿಗೆ 18 ದಿನಗಳ ಹಿಂದೆಯಷ್ಟೇ ವಿವಾಹ(Marreid)ವಾಗಿತ್ತು ಎನ್ನಲಾಗಿದ್ದು, ತಂದೆ, ತಾಯಿ, ಪತ್ನಿ  ಹಾಗೂ ಸಹೋದರಿ ಇದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net