ಕೆಎಸ್‌ಇ ಸಾಮಾಜಿಕ ಕಾರ್ಯ ಅನುಕರಣೀಯ | Eshwarappa Birthday

ಶಿವಮೊಗ್ಗದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯಿಂದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ-ಜಯಲಕ್ಷ್ಮೀ ದಂಪತಿ ಆಶೀರ್ವಾದ ಪಡೆದರು. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇದ್ದರು.
ಶಿವಮೊಗ್ಗದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯಿಂದ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ-ಜಯಲಕ್ಷ್ಮೀ ದಂಪತಿ ಆಶೀರ್ವಾದ ಪಡೆದರು. ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರ 78ನೇ ಜನ್ಮದಿನ
  • ವೈಯಕ್ತಿಕ ಹಿತಾಸಕ್ತಿ ಬದಿಗೊತ್ತಿ ಹಿಂದುತ್ವಕ್ಕಾಗಿ ಹೋರಾಡುವ ನಾಯಕ
  • ಉಡುಪಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಮತ
ಶಿವಮೊಗ್ಗ: ಹಿಂದುಳಿದ ವರ್ಗದ ನಾಯಕ, ಹಿಂದುತ್ವವಾದಿ, ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಭವಿಷ್ಯದಲ್ಲಿ ಸರ್ಕಾರವನ್ನು ರಚಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ(Vishvaprasanna Theertha Swamiji) ಆಶಿಸಿದರು.
ಮಲ್ಲೇಶ್ವರನಗರ ಗುಂಡಪ್ಪಶೆಡ್‌ನಲ್ಲಿ ಶಿವಮೊಗ್ಗ ಶ್ರೀಗಂಧ ಸಾಂಸ್ಕೃತಿಕ ಸಂಸ್ಥೆ, ಶ್ರೀ ಮಾರಿಕಾಂಬ ಮೈಕ್ರೋಫೈನಾನ್ಸ್(Sri Marikamba Microfinance), ಕೆ.ಎಸ್.ಈಶ್ವರಪ್ಪ ಅಭಿಮಾನಿಗಳ ಬಳಗ ಹಾಗೂ ರಾಷ್ಟ್ರಭಕ್ತರ ಬಳಗದಿಂದ ಕೆ.ಎಸ್.ಈಶ್ವರಪ್ಪ ಅವರ ಜನ್ಮದಿನದ ನಿಮಿತ್ತ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದರು.
ಈಶ್ವರಪ್ಪ ಅವರ ಉತ್ಸಾಹ ಮತ್ತು ಲವಲವಿಕೆ ನೋಡಿದರೆ ಅವರಿಗೆ 78 ವರ್ಷವಾಗಿದೆ ಎನ್ನಿಸುತ್ತಿಲ್ಲ. ಬದಲಾಗಿ ಇಂದು ಆಚರಿಸುತ್ತಿರುವುದು ಅವರ 28ನೇ ವರ್ಷದ ಸಂಭ್ರಮ ಎಂಬಂತೆ ಭಾಸವಾಗುತ್ತಿದೆ. ಅವರ ಉತ್ಸಾಹ ವರ್ಷದಿಂದ ವರ್ಷಕ್ಕೆ ವೃದ್ಧಿಸಬೇಕು. ರಾಜಕೀಯವಾಗಿ ಮತ್ತಷ್ಟು ಉನ್ನತ ಸ್ಥಾನಮಾನ(High status)ಗಳು ಲಭಿಸಬೇಕು ಎಂದು ಹಾರೈಸಿದರು.
ಧರ್ಮ, ಹಿಂದುತ್ವದ ಪ್ರಶ್ನೆ ಬಂದಾಗ ಸ್ವಂತ ಹಿತವನ್ನೂ ಬಯಸದೆ ಸಮಾಜದ ಏಳಿಗೆಗಾಗಿ ಬದುಕುವುದೇ ನಿಜವಾದ ಬದುಕು ಎಂಬುದನ್ನು ಈಶ್ವರಪ್ಪ ಮೈಗೂಡಿಸಿಕೊಂಡಿದ್ದಾರೆ. ರಾಜಕಾರಣಿಯಾಗಿದ್ದರೂ ಧಾರ್ಮಿಕ, ಸಾಂಸ್ಕೃತಿಕ, ಸಮಾಜಮುಖಿ ಕಾರ್ಯಕ್ರಮ(Social program) ಮಾಡುತ್ತ ಸಮಾಜದೊಂದಿಗೆ ಬೆರೆತು ಜೀವನ ನಡೆಸುತ್ತಿದ್ದಾರೆ. ಆ ಮೂಲಕ ಎಲ್ಲರ ಪ್ರೀತಿಗೂ ಪಾತ್ರರಾಗಿದ್ದಾರೆ ಎಂದು ಹೇಳಿದರು.
ಶಿವಮೊಗ್ಗ ಆದಿಚುಂಚನಗಿರಿ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಮಾತನಾಡಿದರು. ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಕೆ.ಎಸ್.ಈಶ್ವರಪ್ಪ, ಪತ್ನಿ ಜಯಲಕ್ಷ್ಮೀ, ಪುತ್ರ ಕೆ.ಇ.ಕಾಂತೇಶ್, ಸೊಸೆ ಶಾಲಿನಿ ಕಾಂತೇಶ್ ಸೇರಿ ಕುಟುಂಬ ಸದಸ್ಯರು ಪೂಜಾ ವಿಧಿವಿಧಾನಗಳಲ್ಲಿ ಭಾಗವಹಿಸಿದ್ದರು. ಆರ್‌ಎಸ್‌ಎಸ್ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್, ಎಂಎಲ್ಸಿ ಡಿ.ಎಸ್.ಅರುಣ್, ಮುಖಂಡ ಬಿ.ಕೆ.ಮೋಹನ್‌ಕುಮಾರ್, ರಾಷ್ಟ್ರ ಭಕ್ತರ ಬಳಗದ ವಿಶ್ವಾಸ್ ಇತರರಿದ್ದರು.

ಸ್ಥಾನಮಾನ ಇರದಿದ್ರೂ ತತ್ವವನ್ನು ಬಿಟ್ಟಿಲ್ಲ

ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಅವರು ರಾಜಕೀಯ ಜೀವನದಲ್ಲಿ ಅನೇಕ ಏರಿಳಿತ ಕಂಡಿದ್ದರೂ ಎಂದಿಗೂ ತತ್ವ ಸಿದ್ಧಾಂತ(Principle theory)ಗಳನ್ನು ಬಿಟ್ಟುಕೊಟ್ಟಿಲ್ಲ. ಸ್ಥಾನಮಾನವನ್ನು ಬಿಟ್ಟಿರಬಹುದು. ಆದರೆ ತತ್ವವನ್ನು ಬಿಟ್ಟಿಲ್ಲ ಎಂದು ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠದ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಹೇಳಿದರು. ಈಶ್ವರಪ್ಪ ಅವರು ಹೋರಾಟದಿಂದಲೇ ರಾಜಕೀಯ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಸಮಾಜ ಮತ್ತು ಧರ್ಮಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರು ಮತ್ತಷ್ಟು ವರ್ಷ ಜನರ ಸೇವೆ ಮಾಡುವಂತಾಗಲಿ ಎಂದು ಆಶಿಸಿದರು.

ಮೌಲ್ಯಗಳಿಂದ ಬದುಕು ಸಾರ್ಥಕ್ಯ

ನೂರು ವರ್ಷ ಬದುಕುವುದು ದೊಡ್ಡದಲ್ಲ, ಹೇಗೆ ಬದುಕುತ್ತೇವೆ ಎಂಬುದು ಮುಖ್ಯ ಎಂದು ಬೆಕ್ಕಿನಕಲ್ಮಠ(Bekkinakalmat)ದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಹೇಳಿದರು. ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಅವರು, ಈಶ್ವರಪ್ಪ ಅವರು ಇಂದಿಗೂ ಚೈತನ್ಯದಿಂದ ಬದುಕುತ್ತಿರುವುದು ವಿಶೇಷ. ಸಮಾಜ, ಜೀವಜಗತ್ತು ಮತ್ತು ಮಾನವೀಯ ಮೌಲ್ಯಗಳಿಗೆ ಆದ್ಯತೆ ನೀಡಿ ಬದುಕಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಆ ನಿಟ್ಟಿನಲ್ಲಿ ಈಶ್ವರಪ್ಪ ಅವರ ಜೀವನ ಮಾದರಿ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net