ಖಗೋಳ ಕೌತುಕದ ಅರಿವು ಅವಶ್ಯ | zero shadow day

ಸಾಗರದ ವಿಜ್ಞಾನ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಖಗೋಳ ಕೌತುಕದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ರೋಹಿತ್ ಮಾಹಿತಿ ನೀಡುತ್ತಿರುವುದು. ವಿಜಯವಾಮನ್ ಇತರರಿದ್ದರು.
ಸಾಗರದ ವಿಜ್ಞಾನ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಖಗೋಳ ಕೌತುಕದ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರಾಚಾರ್ಯ ರೋಹಿತ್ ಮಾಹಿತಿ ನೀಡುತ್ತಿರುವುದು. ವಿಜಯವಾಮನ್ ಇತರರಿದ್ದರು.
Published on
ಸಾಗರ: ಖಗೋಳದ ಕೌತುಕವನ್ನು ಮಕ್ಕಳಿಗೆ ತಿಳಿಸಬೇಕು. ಗ್ರಹಣ ಏಕೆ ಸಂಭವಿಸುತ್ತದೆ, ನಭೋ ಮಂಡಲದಲ್ಲಿರುವ ನಕ್ಷತ್ರಗಳು ಯಾವುವು ಎನ್ನುವುದರ ಬಗ್ಗೆ ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ ಎಂದು ಖಗೋಳ ತಜ್ಞ ಮಂಜುನಾಥ ಜೇಡಿಕುಣಿ ಹೇಳಿದರು.
ಇಕ್ಕೇರಿ ವೃತ್ತದ ವಿಜ್ಞಾನ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ನೆರಳು ರಹಿತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಒಂದೊಂದು ಪ್ರದೇಶದಲ್ಲಿ ಈ ನಭೋ ಕೌತುಕ ಸಂಭವಿಸುತ್ತದೆ. ಧಾರವಾಡದಲ್ಲಿ ಇನ್ನೂ ನಾಲ್ಕು ದಿನಗಳ ನಂತರ ಈ ವಿಶೇಷ ಸಂಭವಿಸುತ್ತದೆ ಎಂದರು
ಭೂಮಿ 22.5 ಡಿಗ್ರಿ ವಾಲಿರುವುದರಿಂದ ಇಂತಹ ಘಟನೆಗಳು ನಡೆಯುತ್ತವೆ. ಇದು ನಮ್ಮ ಋತುಗಳ ಮೇಲೆ ಪ್ರಭಾವ ಬೀರುತ್ತದೆ. ಹಗಲು ರಾತ್ರಿ ಆಗುವುದನ್ನು ಕತ್ತಲು ಬೆಳಕು ಎಂದು ಮಾತ್ರ ಯೋಚಿಸುತ್ತೇವೆ. ಖಗೋಳದಲ್ಲಿ ಇದರ ಹಿಂದೆ ಏನೇನು ನಡೆಯುತ್ತದೆ ಎನ್ನುವುದನ್ನು ನಾವು ತಿಳಿದುಕೊಳ್ಳಬೇಕು. ಇಂತಹ ಕಾರ್ಯಕ್ರಮಗಳು ನಡೆಸುವ ಮೂಲಕ ಖಗೋಳ ಕೌತುಕಗಳನ್ನು ಮಕ್ಕಳಿಗೆ ಪರಿಚಯಿಸಬೇಕಿದೆ ಎಂದು ತಿಳಿಸಿದರು.
ಚಿಂತಕ ಬಿ.ಆರ್.ವಿಜಯವಾಮನ್ ಮಾತನಾಡಿ, ಶೂನ್ಯ ನೆರಳಿನ ದಿನ ವರ್ಷಕ್ಕೆ ಎರಡು ಬಾರಿ ಸಂಭವಿಸುತ್ತದೆ. ಇದು ಖಗೋಳದ ಕೌತುಕ. ನಮ್ಮ ದೇಶ ವಿಜ್ಞಾನದಲ್ಲಿ ಮುಂದುವರಿದಿದೆ. ಆದರೆ ವಿಜ್ಞಾನದ ವಿದ್ಯಾರ್ಥಿಗಳಿಗೆ ಇವುಗಳ ಬಗ್ಗೆ ತಿಳಿವಳಿಕೆ ನೀಡಲು ಕೊಠಡಿ ಮೀರಿದ ಶಿಕ್ಷಣ ನೀಡಬೇಕಾದ ಅವಶ್ಯಕತೆ ಇದೆ ಎಂದು ಅಭಿಪ್ರಾಯಪಟ್ಟರು.
ನೆರಳು ರಹಿತ ದಿನದ ಪ್ರಾತ್ಯಕ್ಷಿಕೆಯನ್ನು ಕಾಲೇಜಿನ ಪ್ರಾಚಾರ್ಯ ರೋಹಿತ್ ನಡೆಸಿಕೊಟ್ಟರು. ಅಲ್ಲದೆ ಟೆಲಿಸ್ಕೋಪ್‌ಗಳ ಮೂಲಕ ಖಗೋಳದ ಅಧ್ಯಯನದ ಬಗೆಯನ್ನು ವಿವರಿಸಿದರು. ಸಂಸ್ಥೆ ಮುಖ್ಯಸ್ಥರಾದ ನಾಗರಾಜ್, ಉಪನ್ಯಾಸಕರಾದ ಅಂಕಿತಾ, ಪ್ರಿಯಾಂಕಾ, ಸಹನಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net