ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ಲೋಕಾ ಬಲೆಗೆ | Lokayukta Trap

ಲೋಕಾ ಬಲೆಗೆ ಬಿದ್ದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ನಾಮದೇವ.
ಲೋಕಾ ಬಲೆಗೆ ಬಿದ್ದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ನಾಮದೇವ.
Published on

ಪ್ರಮುಖ ಮುಖ್ಯಾಂಶಗಳು

  • 7ನೇ ತರಗತಿಗೆ ವಿದ್ಯಾರ್ಥಿನಿ ದಾಖಲಾತಿಗೆ 20 ಸಾವಿರ ರೂ. ಲಂಚಕ್ಕೆ ಬೇಡಿಕೆ
  • ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ ವಿದ್ಯಾರ್ಥಿನಿ ತಂದೆ
  • 10 ಸಾವಿರ ರೂ. ಸ್ವೀಕರಿಸುವಾಗ ಪ್ರಾಚಾರ್ಯ ನಾಮದೇವ ಟ್ರ್ಯಾಪ್
ಶಿವಮೊಗ್ಗ: ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ(Kittur Rani Channamma Residential School)ಯಲ್ಲಿ ಏಳನೇ ತರಗತಿಗೆ ವಿದ್ಯಾರ್ಥಿನಿ ದಾಖಲಾತಿಗೆ ಆಕೆಯ ತಂದೆಯಿಂದ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ವಸತಿ ಶಾಲೆಯ ಪ್ರಾಚಾರ್ಯ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಗ್ರಾಮ(Hunasekatte village)ದ ಕಿತ್ತೂರು ಠಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ನಾಮದೇವ ಲೋಕಾ ಬಲೆಗೆ ಬಿದ್ದ ಆರೋಪಿ. ಭದ್ರಾವತಿ ತಾಲೂಕಿನ ತಿಮ್ಲಾಪುರ ಕ್ಯಾಂಪ್‌ನ ಮೇಘರಾಜ್ ಎಂಬುವರು ದೂರು ನೀಡಿದ್ದರು.
ಮೇಘರಾಜ್ ಎಳನೀರು ವ್ಯಾಪಾರ(Coconut business) ಮಾಡಿಕೊಂಡಿದ್ದು, ಹುಣಸೆಕಟ್ಟೆ ಗ್ರಾಮದಲ್ಲಿರುವ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಏಳನೇ ತರಗತಿಗೆ ತನ್ನ ಮಗಳನ್ನು ದಾಖಲಾತಿ ಮಾಡಲು ತೆರಳಿದ್ದರು. ಡ್ರಮ್ ಸೆಟ್(Drum set) ನೆಪದಲ್ಲಿ ಪ್ರಾಚಾರ್ಯ ನಾಮದೇವ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮೇಘರಾಜ್ ನೀಡಿದ ದೂರಿನ ಮೇರೆಗೆ ಶಿವಮೊಗ್ಗ ಲೋಕಾಯುಕ್ತ ಪೊಲೀಸ್ ಠಾಣೆ(Shivamogga Lokayukta Police Station)ಯಲ್ಲಿ ಪ್ರಕರಣ ದಾಖಲಾಗಿದ್ದು, ಸೋಮವಾರ ಪ್ರಾಚಾರ್ಯ ನಾಮದೇವ 10 ಸಾವಿರ ರೂ. ಸ್ವೀಕರಿಸುವಾಗ ಟ್ರ್ಯಾಪ್ ಆಗಿದ್ದಾರೆ.
ಲೋಕಾಯುಕ್ತ ಎಸ್‌ಪಿ(Lokayukta SP) ಎಂ.ಎಸ್.ಕೌಲಾಪೂರೆ ಮಾರ್ಗದರ್ಶನದಲ್ಲಿ ಶಿವಮೊಗ್ಗ ಡಿವೈಎಸ್‌ಪಿ ಬಿ.ಪಿ.ಚಂದ್ರಶೇಖರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಕೆ.ಪಿ.ರುದ್ರೇಶ್ ಟ್ರ್ಯಾಪ್ ಮಾಡಿದ್ದು, ಲಂಚದ ಹಣ ಜಪ್ತಿ ಮಾಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಮದೇವ್ ಅವರನ್ನು ವಶಕ್ಕೆ ಪಡೆದು ಲೋಕಾಯುಕ್ತ ಪೊಲೀಸ್ ಇನ್‌ಸ್ಪೆಕ್ಟರ್ ಕೆ.ಪಿ.ರುದ್ರೇಶ್ ತನಿಖೆ ಕೈಗೊಂಡಿದ್ದಾರೆ. ಇನ್ಸ್‌ಪೆಕ್ಟರ್ ವೀರಬಸಪ್ಪ ಎಲ್ ಕುಸಲಾಪುರ ಸೇರಿ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net