ಮೃತ ಸುಮಾ ಮನೆಗೆ ಕಿಮ್ಮನೆ ಭೇಟಿ

ರಿಪ್ಪನ್​ಪೇಟೆ ಸಮೀಪದ ಶಾಖವಳ್ಳಿ ಗ್ರಾಮದ ಮೃತ ಸುಮಾ ಅವರ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಿ.ಜಿ.ಚಂದ್ರಮೌಳಿ, ರಂಜಿತ್​ಕುಮಾರ್​ ಇತರರಿದ್ದರು.
ರಿಪ್ಪನ್​ಪೇಟೆ ಸಮೀಪದ ಶಾಖವಳ್ಳಿ ಗ್ರಾಮದ ಮೃತ ಸುಮಾ ಅವರ ಮನೆಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಬಿ.ಜಿ.ಚಂದ್ರಮೌಳಿ, ರಂಜಿತ್​ಕುಮಾರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮೃತ ಸುಮಾ ಮನೆಗೆ ಕಿಮ್ಮನೆ ಭೇಟಿ
  • ಕುಟುಂಬಸ್ಥರಿಗೆ ಸಾಂತ್ವನ
  • ವೈಯುಕ್ತಿಕ ಧನ ಸಹಾಯ
ರಿಪ್ಪನ್​ಪೇಟೆ: ಹೆರಿಗೆ ವೇಳೆ ತೀವ್ರ ರಕ್ತಸ್ರಾವವಾಗಿ ಚಿಕಿತ್ಸೆ ಫಲಿಸದೆ ನಿಧನರಾದ ಕೋಡೂರು ಗ್ರಾಪಂ ವ್ಯಾಪ್ತಿಯ ಶಾಖವಳ್ಳಿ ಗ್ರಾಮದ ಸುಮಾ ಅವರ ಮನೆಗೆ ಸೋಮವಾರ ಮಾಜಿ ಸಚಿವ ಕಿಮ್ಮನೆ ರತ್ನಾಕರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. 
ಈ ವೇಳೆ ವೈಯುಕ್ತಿಕ ಧನ ಸಹಾಯ ನೀಡಿದ ಅವರು, ಸಾವಿನ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡು ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು. ಮುಖಂಡರಾದ ಬಿ.ಜಿ.ಚಂದ್ರಮೌಳಿ, ರಂಜಿತ್​ಕುಮಾರ್​, ವೇದಾಂತಪ್ಪ ಗೌಡ, ಅನಿಲ್​ಕುಮಾರ್​, ವಿಶ್ವನಾಥ, ಪೂರ್ಣೇಶ್​, ಆಡಿನಸರ ಸತೀಶ್​ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net