ಅನ್ನ ನೀರು ಇಲ್ಲದೆ ನಿತ್ರಾಣಗೊಂಡಿದ್ದ ಆತನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಸ್ವಲ್ಪ ದಿನ ಇದ್ದ ನಂತರ ರೈಲು ಹತ್ತಿಕೊಂಡು ಚೆನ್ನೈ, ಹೌರಾ, ದೆಹಲಿ, ಕಲ್ಕತ್ತಾ, ಪುಣೆ ಮತ್ತಿತರ ಕಡೆಗಳಲ್ಲಿ ಸುತ್ತಾಡಿದ್ದ. ಬಳಿಕ ಚೆನ್ನೈ ರೈಲಿನಲ್ಲಿ ಭಿಕ್ಷೆ ಬೇಡಿಕೊಂಡಿದ್ದು, ನಿಂತ ರೈಲುಗಳಲ್ಲಿ ಮಲಗುತ್ತಿದ್ದ. ನಂತರ ಬೆಂಗಳೂರಿಗೆ ರೈಲಿನಲ್ಲಿ ಬಂದು ಅಲ್ಲಿಂದ ರೈಲಿನಲ್ಲಿ ಭದ್ರಾವತಿಗೆ ಬಂದಿಳಿದು ಹೊರಗಡೆ ತಿರುಗಾಡುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ಬಳಿಕ ಆತನ ಬಾಂಗ್ಲಾ ಪ್ರಜೆ ಎಂಬುದು ದೃಢಪಟ್ಟಿದ್ದು, ವೀಸಾ ಮತ್ತು ಪಾಸ್‌ಪೋರ್ಟ್ ಸೇರಿ ಅಗತ್ಯ ದಾಖಲಾತಿ ಇಲ್ಲದ ಕಾರಣ ಆತನ ವಿರುದ್ಧ ವಿದೇಶಾಂಗ ಕಾಯ್ದೆ(Foreign Affairs Act) 1946ರ ಪ್ರಕಾರ ಭದ್ರಾವತಿ ಹಳೇನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.