ಭದ್ರಾವತಿ: ನಾಡು ಕಂಡ ಅಪ್ರತಿಮ ನಾಯಕ ನಾಡಪ್ರಭು ಕೆಂಪೇಗೌಡ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದಾ ಅಪ್ಪಾಜಿ ಬಣ್ಣಿಸಿದರು.
ನಗರದ ಅಪ್ಪರ್ ಹುತ್ತಾದಲ್ಲಿ ನಾಡಪ್ರಭು ಕೆಂಪೇಗೌಡ ಹಿತರಕ್ಷಣಾ ವೇದಿಕೆಯಿಂದ ಆಯೋಜಿಸಿದ್ದ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆಂಪೇಗೌಡರು ನಾಡಿಗೆ ನೀಡಿದ ಕೊಡುಗೆ ಅಪಾರ. ಅವರ ಜೀವನ ಚರಿತ್ರೆ ಬಗ್ಗೆ ಎಲ್ಲರೂ ಅರಿತುಕೊಳ್ಳಬೇಕು ಎಂದು ತಿಳಿಸಿದರು.
ವೇದಿಕೆ ಅಧ್ಯಕ್ಷ ಟಿ.ಚಂದ್ರೇಗೌಡ ಮಾತನಾಡಿ, ವೇದಿಕೆಯಿಂದ ಕೆಂಪೇಗೌಡ ಜಯಂತಿಯನ್ನು ಪ್ರತಿ ವರ್ಷ ಅದ್ದೂರಿಯಾಗಿ ಆಚರಿಸಲಾಗುತ್ತಿದೆ ಎಂದರು. ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಅಪ್ಪರ್ ಹುತ್ತಾ ಕಾಲನಿ, ಲೋಯರ್ ಹುತ್ತಾ, ಗೋಲ್ಡನ್ ಜ್ಯೂಬಿಲಿ, ಜಿಂಕ್‌ಲೈನ್, ಜನ್ನಾಪುರದ ಒಕ್ಕಲಿಗ ಸಮಾಜದವರು, ವಿವಿಧ ಸಂಘಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
ವೇದಿಕೆ ಪ್ರಧಾನ ಕಾರ್ಯದರ್ಶಿ, ನಗರಸಭೆ ಸದಸ್ಯೆ ನಾಗರತ್ನಾ ಅನಿಲ್‌ಕುಮಾರ್, ಕೆ.ಆರ್.ಸವಿತಾ ಉಮೇಶ್, ಮಾಜಿ ಸದಸ್ಯ ಬಾಲಕೃಷ್ಣ, ಉಪಾಧ್ಯಕ್ಷ ಬಿ.ಎನ್.ಮಹಾದೇವ, ಕೆ.ಶಶಿಕುಮಾರ್, ಖಜಾಂಚಿ ವೆಂಕಟೇಶ್, ಗೊಂದಿ ಜಯರಾಂ, ಭಾಗ್ಯಮ್ಮ, ಡಿಎಸ್‌ಎಸ್ ಮುಖಂಡ ಚಿನ್ನಯ್ಯ ಇತರರಿದ್ದರು.