ಸೊರಬ ತಾಪಂ ಸಭಾಂಗಣದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಬೇಸಿಗೆ ಶಿಬಿರ ಮತ್ತು ರಸಪ್ರಶ್ನೆ ಸಮಾರೋಪದ ಇಒ ಶಶಿಧರ್ ಮಾತನಾಡಿದರು. ಸಂಜಯ್, ಬಲೀಂದ್ರಪ್ಪ, ಲ$್ಮಣ್ ಇತರರಿದ್ದರು.
ಸೊರಬ: ಮಕ್ಕಳನ್ನು ಮೊಬೈಲ್ ಬಳಕೆಯಿಂದ ದೂರವಿಡಲು ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೆಪಿಸಲು ಸರ್ಕಾರ ಪಂಚಾಯಿತಿ ವ್ಯಾಪ್ತಿಯ ಗ್ರಾಮ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಬೇಸಿಗೆ ಶಿಬಿರ ಮತ್ತು ರಸ ಪ್ರಶ್ನೆ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಾಗಿದೆ ಎಂದು ತಾಪಂ ಇಒ ಕೆ.ಜಿ.ಶಶಿಧರ ಹೇಳಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಗ್ರಾಪಂ ವ್ಯಾಪ್ತಿಯ ಶಾಲಾ ಮಕ್ಕಳಿಗೆ ಆಯೋಜಿಸಿದ್ದ ಬೇಸಿಗೆ ಶಿಬಿರ ಮತ್ತು ರಸಪ್ರಶ್ನೆ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಮಕ್ಕಳ ಓದು, ಅಂಕ ಗಳಿಕೆಗಷ್ಟೇ ಸೀಮಿತವಾಗದೆ ಸ್ಪರ್ಧಾತ್ಮಕ ಪರೀೆಗಳಿಗೆ ಸಾಮಾನ್ಯ ಜ್ಞಾನ ತುಂಬುವ ಕೆಲಸವಾಗಬೇಕು. ರಸಪ್ರಶ್ನೆ ಹಾಗೂ ವಿವಿಧ ಪ್ರಯೋಗ ಮಾದರಿಗಳನ್ನು ಅತ್ಯುತ್ತಮವಾಗಿ ರಚಿಸಿರುವುದು ಕಂಡುಬಂದಿದೆ. ಗ್ರಂಥಪಾಲಕರು ಗ್ರಂಥಾಲಯಗಳನ್ನು ಸುಸಜ್ಜಿತವಾಗಿ ಇಟ್ಟುಕೊಳ್ಳುವ ಕಡೆ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಪಿಡಿಒ ಚಿದಾನಂದ ಮಾತನಾಡಿ, ಮಕ್ಕಳಲ್ಲಿ ಸಾಂಸತಿಕ ಮನೋಭಾವ ಬೆಳೆಸಲು ಇಂತಹ ಶಿಬಿರಗಳು ಪೂರಕ. ಚಟುವಟಿಕೆಗಳಲ್ಲಿ ಭಾಗವಹಿಸುವುದು ಮುಖ್ಯ. ಸೋಲು&ಗೆಲುವು ಮುಖ್ಯವಲ್ಲ ಎಂದರು.
ತಾಪಂ ವ್ಯವಸ್ಥಾಪಕ ಸಂಜಯ್, ರಾಜ್ಯ ಗ್ರಂಥಾಲಯ ಸಂದ ಉಪಾಧ್ಯ ಬಲೀಂದ್ರಪ್ಪ, ತಾಲೂಕು ಗ್ರಂಥಾಲಯ ಸಂದ ಅಧ್ಯ ಲ$್ಮಣ್, ನರೇಗಾ ಸಹಾಯಕ ನಿರ್ದೇಶಕ ಮಂಜಪ್ಪ, ಪಿಡಿಒ ಸಂದೀಪ್, ಸಿಆರ್ಪಿ ಸುಧಾ, ಚಂದ್ರಕಲಾ, ಅರುಣ್ಕುಮಾರ್, ಗಣೇಶ್, ಸಚಿನ್, ನವೀನ್ ಇತರರಿದ್ದರು.