ಟೀಕೆ ಬಿಟ್ಟು ಅಭಿವೃದ್ಧಿಗೆ ಸಹಕರಿಸಲಿ

ಕಿರಣ್​ ಪ್ರಭಾಕರ್​
ಕಿರಣ್​ ಪ್ರಭಾಕರ್​
Published on
ತೀರ್ಥಹಳ್ಳಿ: ಮಾಜಿ ಶಾಸಕ ಕಿಮ್ಮನೆ ರತ್ನಾಕರ್​ ಹಾಲಿ ಶಾಸಕರ ವಿರುದ್ಧ ಆರೋಪ ಮಾಡುವುದನ್ನು ಬಿಟ್ಟು ೇತ್ರದ ಜನರ ಸಮಸ್ಯೆ ಪರಿಹಾರಕ್ಕೆ ಆದ್ಯತೆ ನೀಡಬೇಕು. ಅಭಿವೃದ್ಧಿ ಪರ ಹೋರಾಟಗಳಿಗೆ ಬೆಂಬಲ ನೀಡಲು ನಾವೂ ಸಿದ್ಧರಿದ್ದೇವೆ ಎಂದು ಜೆಡಿಎಸ್​ ತಾಲೂಕು ಅಧ್ಯಕ್ಷ ಕುಣಜೆ ಕಿರಣ್​ ಪ್ರಭಾಕರ್​ ಹೇಳಿದರು.
ಸಮಾಜವಾದಿ ಚಿಂತನೆಯ ಈ ೇತ್ರದ ಬಗ್ಗೆ ರಾಜ್ಯದ ಜನರಲ್ಲಿ ಉತ್ತಮ ಅಭಿಪ್ರಾಯವಿದೆ. ಈ ೇತ್ರದ ಮಾಜಿ ಶಾಸಕರೂ ಆಗಿರುವ ಕಿಮ್ಮನೆ ರತ್ನಾಕರ್​ ದಿನ ಬೆಳಗಾದರೆ ತಮ್ಮ ಹಿಂಬಾಲಕರನ್ನು ಕಟ್ಟಿಕೊಂಡು ಹಾಲಿ ಶಾಸಕ ಆರಗ ಜ್ಞಾನೇಂದ್ರ ಅವರ ಬಗ್ಗೆ ಅನಗತ್ಯ ಟೀಕೆ ಮಾಡುವುದು ಶೋಭೆಯಲ್ಲ. ಬಿಜೆಪಿ&ಜೆಡಿಎಸ್​ ಮೈತ್ರಿ ಮಾಡಿಕೊಂಡಿರುವುದರಿಂದ ಮಿತ್ರ ಪದ ಶಾಸಕರ ಪರ ಮಾತನಾಡಬೇಕಾದ ಅಗತ್ಯವಿದೆ. ಜೆಡಿಎಸ್​ ಬೆಂಬಲದಿಂದ ಈ ೇತ್ರದಲ್ಲಿ ಪ್ರಬಲವಾಗಿರುವ ಬಿಜೆಪಿಗೆ ಭೀಮ ಬಲ ಬಂದಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಾಸಕರ ಮಗ ಜಮೀನು ಖರೀದಿ ಮಾಡುವುದರಲ್ಲಿ ತಪ್ಪೇನಿದೆ? ಶಾಸಕರ ಕಡೆಯಿಂದ ತಪ್ಪು ನಡೆದಿದ್ದರೆ ದಾಖಲೆ ಸಹಿತ ದೂರು ದಾಖಲಿಸಲಿ. ವಿನಾಕಾರಣ ಬೇರೆಯವರನ್ನು ಟೀಕಿಸುವ ಬದಲಿಗೆ ೇತ್ರಕ್ಕೆ ಆಗಬೇಕಿರುವ ಕೆಲಸಗಳ ಬಗ್ಗೆ ಗಮನ ಹರಿಸಲಿ ಎಂದರು.
ಜೆಡಿಎಸ್​ ತಾಲೂಕು ಕಾರ್ಯದರ್ಶಿ ಗುರುದತ್​, ಪ್ರಮುಖರಾದ ರಾಮಸ್ವಾಮಿ ಮೇಧೋಳಿಗೆ, ರತನ್​, ಸಂತೋಷ್​, ಪ್ರವಿಣ್​ ಕುಂದಾ, ಪ್ರೇಮಚಂದ್ರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net