ಸಾಗರದಲ್ಲಿ ಆಯೋಜಿಸಿದ್ದ ಮನೆಮನೆ ಸಾಹಿತ್ಯ ಕಾರ್ಯಕ್ರಮದಲ್ಲಿ ಡಾ. ಅನ್ನಪೂರ್ಣಾ, ಡಾ. ವೆಂಕಟೇಶ್ ಜೋಯಿಸ್, ಲೋಕೇಶ್‌ಕುಮಾರ್, ಜಿ.ಎಚ್.ಶಿವಯೋಗಿ, ರೇವಮ್ಮ, ಡಿ.ಗಣಪತಪ್ಪ, ನಾಗರಾಜ್ ಇತರರಿದ್ದರು.
ಸಾಗರ: ಸಾಹಿತ್ಯವನ್ನು ಮನೆ, ಮನಕ್ಕೆ ತಲುಪಿಸುವ ಕೆಲಸ ಮಾಡಲಾಗುತ್ತಿದೆ. ಸಾಹಿತ್ಯ ಎಲ್ಲರನ್ನೂ ಒಳಗೊಳ್ಳುವ ವಿಶೇಷ ಶಕ್ತಿ ಹೊಂದಿದೆ ಎಂದು ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ.ಸ್ವಾಮಿ ಹೇಳಿದರು.
ಸಾಗರದ ಎಸ್.ಎನ್.ನಗರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ನಿವೃತ್ತ ಶಿಕ್ಷಕ ಜಿ.ಎಚ್.ಶಿವಯೋಗಿ ಮನೆಯಲ್ಲಿ ಏರ್ಪಡಿಸಿದ್ದ ಮನೆಮನೆ ಸಾಹಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಹಿತ್ಯವನ್ನು ಮನೆ ಮತ್ತು ಮನಸ್ಸುಗಳಲ್ಲಿ ಪ್ರತಿಷ್ಠಾಪಿಸುವ ಕೆಲಸವಾಗಬೇಕು. ಮನೆಯಂಗಳದಲ್ಲಿ ನಡೆಸುವ ಸಾಹಿತ್ಯ ಸಮಾಗಮ ಕಾರ್ಯಕ್ರಮಕ್ಕೆ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಹಿತ್ಯದ ಮೂಲಕ ಮಾತ್ರ ಮನಸ್ಸು ಕಟ್ಟುವ ಕೆಲಸ ಮಾಡಬಹುದು. ಸಾಹಿತ್ಯಾಸಕ್ತರು ಮನೆಮನೆ ಸಾಹಿತ್ಯ ಕಾರ್ಯಕ್ರಮ ಮಾಡುವ ಮೂಲಕ ಸ್ಥಳೀಯವಾಗಿ ಸಾಹಿತ್ಯವನ್ನು ಬೆಳೆಸುವ ಪರಿಷತ್ ಕಾರ್ಯಕ್ರಮಕ್ಕೆ ಸಹಕಾರ ನೀಡಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕವಿ ರವೀಂದ್ರ ಕೆಳದಿ, ಸಾಹಿತ್ಯ ಪರಿಷತ್ ಕನ್ನಡವನ್ನು ಮನೆಮನಕ್ಕೆ ತಲುಪಿಸುವ ಕೆಲಸ ಮಾಡುತ್ತಿದೆ. ಇಂತಹ ಸಾಹಿತ್ಯ ಕಾರ್ಯಕ್ರಮ ನಡೆಸಿದಾಗ ಸ್ಥಳೀಯ ಸಾಹಿತ್ಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿದಂತೆ ಆಗುತ್ತದೆ. ಸಾಹಿತ್ಯವನ್ನು ಸಂಭ್ರಮಿಸುವ ಕೆಲಸವಾಗಬೇಕು ಎಂದು ಹೇಳಿದರು.
ಕವಿಗೋಷ್ಠಿ, ಗಾಯನ ಕಾರ್ಯಕ್ರಮ ನಡೆಯಿತು. ಡಾ. ಅನ್ನಪೂರ್ಣಾ, ಡಾ. ವೆಂಕಟೇಶ್ ಜೋಯಿಸ್, ಲೋಕೇಶ್‌ಕುಮಾರ್, ಜಿ.ಎಚ್.ಶಿವಯೋಗಿ, ರೇವಮ್ಮ, ಡಿ.ಗಣಪತಪ್ಪ, ನಾಗರಾಜ್, ಜಗನ್ನಾಥ್, ಪರಮೇಶ್ವರ ಆಲಳ್ಳಿ, ಡಾ. ವ.ಮ.ಗಂಗಾಧರ್, ಪುಷ್ಪಾವತಿ, ಎಸ್.ಬಸವರಾಜ್, ಎಚ್.ಜಿ.ಸುಬ್ರಹ್ಮಣ್ಯ ಭಟ್ ಇತರರಿದ್ದರು.