ಕನ್ನಡ ಸಾಮ್ರಾಜ್ಯೋತ್ಸವ ಆಚರಣೆ ಕನ್ನಡಿಗರ ಹೆಮ್ಮೆ I kannada samrajyotsava
ಶಿವಮೊಗ್ಗದಲ್ಲಿ ಮಯೂರ ವರ್ಮ ಸ್ಮರಣೆ ಮತ್ತು ಕನ್ನಡ ಸಾಮ್ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಯೂರ ವರ್ಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಡಿ.ಮಂಜುನಾಥ್, ಡಾ. ಕೆ.ಜಿ.ವೆಂಕಟೇಶ್, ಎಂ.ನವೀನ್‌ಕುಮಾರ್, ಎಸ್.ಆರ್.ಚಂದ್ರಪ್ಪ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿಕೆ
ಮಯೂರ ವರ್ಮ ಸ್ಮರಣೆ ಕಾರ್ಯಕ್ರಮ
ಶಿವಮೊಗ್ಗ: ಕದಂಬ (kadamba) ಸಾಮ್ರಾಜ್ಯಕ್ಕೀಗ 1681 ವರ್ಷದ ಸಂಭ್ರಮಾಚರಣೆ. ಕನ್ನಡಮಯ ಆಡಳಿತ (adminstartion) ನೀಡಿದ ಈ ರಾಜಮನೆತನದ ಹಿರಿಮೆಯಲ್ಲಿ ಕನ್ನಡ (kannada) ಭಾಷೆಯ ಹಿರಿಮೆಯೂ ಅಡಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಹಾಗೂ ಸರ್ಕಾರಿ ನಿವೃತ್ತ ನೌಕರರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಕದಂಬ ಸಾಮ್ರಾಜ್ಯದ ಸ್ಥಾಪಕ ಮಯೂರ ವರ್ಮ ಸ್ಮರಣೆ ಮತ್ತು ಕನ್ನಡ ಸಾಮ್ರಾಜ್ಯೋತ್ಸವ ಕಾರ್ಯಕ್ರಮವನ್ನು ಮಯೂರ ವರ್ಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಸಾಮ್ರಾಜ್ಯೋತ್ಸವ ಆಚರಣೆ ಕನ್ನಡಿಗರ ಹೆಮ್ಮೆಯಾಗಬೇಕು. ಕದಂಬ ಸಾಮ್ರಾಜ್ಯದ ಸ್ಥಾಪಕ ಮಯೂರ ವರ್ಮ ತನ್ನ ಆಡಳಿತವನ್ನು ಕನ್ನಡಮಯವಾಗಿಸಿದ್ದ ಎಂಬುದನ್ನು ತಿಳಿಯುತ್ತಲೇ ನಾವು ಪುಳಕಿತರಾಗುತ್ತೇವೆ. ಕನ್ನಡದ ಪರಂಪರೆ ಅರಿಯದ ಆಧುನಿಕ ಜನರು ಸ್ವಾಭಿಮಾನ ಬಿಟ್ಟು ಆಂಗ್ಲಭಾಷೆಗೆ ಜೋತುಬೀಳುವ ಮೂಲಕ ಅಭಿಮಾನ ಶೂನ್ಯರಂತೆ ಕಾಣುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಸ್ವಾತಂತ್ರಾೃನಂತರ ಭಾರತದಲ್ಲಿ ಭಾಷಾವಾರು ಪ್ರಾಂತ್ಯಗಳು ರಚನೆಯಾದ ಸಂದರ್ಭ ಕನ್ನಡ ರಾಜ್ಯೋತ್ಸವ ಆಚರಿಸಿದ ರೀತಿಯಲ್ಲಿ ಕನ್ನಡ ಸಾಮ್ರಾಜ್ಯೋತ್ಸವ ನಡೆಯಬೇಕು. ಬಹಳ ಹಿಂದೆ ಉತ್ತರ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಯವರು ಒಟ್ಟಾಗಿ ಬನವಾಸಿ ಉತ್ಸವ ನಡೆಸಲು ಹೋರಾಟ ಮಾಡಿದ್ದರು. ನಟ ಅಶೋಕ್ ಆ ಹೋರಾಟದ ನೇತೃತ್ವ ವಹಿಸಿದ್ದರು. ಅಂದು ನಡೆದ ಹೋರಾಟದ ಫಲವಾಗಿ ಕದಂಬ ಉತ್ಸವ ನಡೆಸಲು ಸರ್ಕಾರ ತೀರ್ಮಾನಿಸಿತ್ತು ಎಂದರು.
ಸರ್ಕಾರಿ ನಿವೃತ್ತ ನೌಕರರ ಜಿಲ್ಲಾ ಸಂಘದ ಅಧ್ಯಕ್ಷ ಎಸ್.ಆರ್.ಚಂದ್ರಪ್ಪ, ಪತ್ರಕರ್ತ ಎಂ.ನವೀನ್ ಕುಮಾರ್ ಇದ್ದರು.
"
ಅನೇಕ ಸಂದರ್ಭಗಳಲ್ಲಿ ಇತಿಹಾಸ ದಾಖಲಿಸುವುದು ತಪ್ಪಾಗುತ್ತಿದೆ. ಇತಿಹಾಸವನ್ನು ಪುರಾಣದ ರೀತಿ ಚಿತ್ರಿಸಿರುವುದು ಅನೇಕ ಗೊಂದಲಗಳಿಗೆ ಕಾರಣ. ಪಲ್ಲವರಿಂದ ಅವಮಾನಿತನಾದ ಮಯೂರ ವರ್ಮ ಕದಂಬ ರಾಜ್ಯ ಸ್ಥಾಪಿಸಿದ. ಶಿರಸಿ, ಬನವಾಸಿ ಪ್ರದೇಶಗಳು ಇವರ ರಾಜ್ಯದ ಕೇಂದ್ರ ಸ್ಥಾನವಾಗಿತ್ತು. ಕಾವೇರಿಯಿಂದ ಗೋದಾವರಿವರೆಗೆ ಇವರ ಆಡಳಿತ ಒಳಗೊಂಡಿತ್ತು.