ಭವ್ಯ ಪರಂಪರೆಯಿಂದ ಕನ್ನಡ ಭಾಷೆ ವಿಶ್ವಮಾನ್ಯ.Kannada Rajyotsava

ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಧ್ವಜಾರೋಹಣ ನೆರವೇರಿಸಿದರು. ಜಿ.ಕೆ.ಮಿಥುನ್‌ಕುಮಾರ್, ಅಭಿಷೇಕ್, ಸಿ.ಎಸ್.ಚಂದ್ರಭೂಪಾಲ್, ಎಚ್.ಸಿ.ಯೋಗೇಶ್ ಇದ್ದರು.
ಶಿವಮೊಗ್ಗ ನೆಹರು ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಧ್ವಜಾರೋಹಣ ನೆರವೇರಿಸಿದರು. ಜಿ.ಕೆ.ಮಿಥುನ್‌ಕುಮಾರ್, ಅಭಿಷೇಕ್, ಸಿ.ಎಸ್.ಚಂದ್ರಭೂಪಾಲ್, ಎಚ್.ಸಿ.ಯೋಗೇಶ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಧ್ವಜಾರೋಹಣ
  • ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಭವ್ಯ ಇತಿಹಾಸ
  • ಭಾಷೆ ಶ್ರೀಮಂತ ಸಾಹಿತ್ಯ ಹೊಂದಿದ ಕನ್ನಡ
ಶಿವಮೊಗ್ಗ: ಕನ್ನಡ ನೆಲ, ಜಲ, ಜನ, ಬದುಕು, ಸಂಸ್ಕೃತಿ, ಪರಂಪರೆ, ಕಲೆ, ಸಂಗೀತ, ಜನಪದ ಎಲ್ಲವನ್ನೂ ಒಳಗೊಂಡ ಶ್ರೀಮಂತ ಸಂಸ್ಕೃತಿ ನಮ್ಮದಾಗಿದೆ. ಭವ್ಯ ಪರಂಪರೆ ಹೊಂದುವ ಮೂಲಕ ವಿಶ್ವಮಾನ್ಯವಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬಣ್ಣಿಸಿದರು.
ನಗರದ ನೆಹರು ಮೈದಾನದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಶನಿವಾರ ಕನ್ನಡ ರಾಜ್ಯೋತ್ಸವ(Kannada Rajyotsava)ದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಭವ್ಯ ಇತಿಹಾಸವಿದೆ. ಶಾಸ್ತ್ರೀಯ ಪರಂಪರೆಯಾದ ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತ ಶೈಲಿಗೆ ಕರ್ನಾಟಕ ಮಹತ್ವದ ಕೊಡುಗೆ ನೀಡಿದೆ ಎಂದರು.
ನಮ್ಮ ಶಿಕ್ಷಣ ನೀತಿ ಮಾತೃಭಾಷೆಗೆ ಹೆಚ್ಚಿನ ಒತ್ತು ನೀಡಿದೆ. ಈ ರಾಜ್ಯೋತ್ಸವದ ಭಾಷಾಭಿಮಾನ ನವೆಂಬರ್‌ಗೆ ಸೀಮಿತವಾದರೆ ಸಾಲದು. ಕೇವಲ ಘೋಷಣೆ, ಭಾಷಣಗಳಿಗೆ ಸೀಮಿತಗೊಳ್ಳದೆ ಕನ್ನಡ ಜಾಗೃತಿಯ ವೇದಿಕೆಯಾಗಬೇಕು. ಪ್ರತಿ ನಿತ್ಯ ನಾವು ಕನ್ನಡಿಗರಾಗಬೇಕು. ಕನ್ನಡ ನಮ್ಮ ಉಸಿರು, ಜೀವನಾಡಿಯಾಗಬೇಕು. ಆಂತರಿಕವಾಗಿ ಕನ್ನಡ ಡಿಂಡಿಮ ಮೊಳಗಬೇಕು ಎಂದು ಸಲಹೆ ನೀಡಿದರು.
ಎಂಎಲ್‌ಸಿ ಡಾ. ಧನಂಜಯ ಸರ್ಜಿ, ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್.ಚಂದ್ರಭೂಪಾಲ್, ಮುಖಂಡ ಎಚ್.ಸಿ.ಯೋಗೇಶ್, ಭಾರತ ಸೇವಾದಳದ ವೈ.ಎಚ್.ನಾಗರಾಜ್, ಎಸ್‌ಪಿ ಜಿ.ಕೆ.ಮಿಥುನ್‌ಕುಮಾರ್, ಎಎಸ್‌ಪಿಗಳಾದ ಎ.ಜಿ.ಕಾರಿಯಪ್ಪ, ರಮೇಶ್ ಕುಮಾರ್, ಎಡಿಸಿ ಅಭಿಷೇಕ್, ತಹಸೀಲ್ದಾರ್ ರಾಜೀವ್, ಮಹಾನಗರ ಪಾಲಿಕೆ ಆಯುಕ್ತ ಕೆ.ಮಾಯಣ್ಣಗೌಡ ಮತ್ತಿತರರಿದ್ದರು.
"

ಕನ್ನಡದ ಉಳಿವಿಗೆ ನಾವೆಲ್ಲರೂ ಸಂಕಲ್ಪ ಮಾಡಬೇಕಾಗಿದೆ. ಕರ್ನಾಟಕ ಏಕೀಕರಣಕ್ಕೆ ಕಾರಣರಾದ ಕುವೆಂಪು, ಆಲೂರು ವೆಂಕಟರಾವ್, ಶಿವರಾಮ ಕಾರಂತ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಬಿ.ಎಂ.ಶ್ರೀಕಂಠಯ್ಯ ಸೇರಿ ಅನೇಕ ಮಹನೀಯರನ್ನು ನಾವಿಂದು ಸ್ಮರಿಸಬೇಕಾಗಿದೆ.

— -ಗುರುದತ್ತ ಹೆಗಡೆ, ಜಿಲ್ಲಾಧಿಕಾರಿ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net