ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆಗೆ ಒತ್ತಾಯ

ಶಿರಾಳಕೊಪ್ಪದಲ್ಲಿ ರಣಾ ವೇದಿಕೆಯಿಂದ ಕನ್ನಡ ನಾಮ ಫಲಕ ಕಡ್ಡಾಯವಾಗಿ ಅಳವಡಿಸುವಂತೆ ಆಗ್ರಹಿಸಿ ಪುರಸಭೆ  ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರವಿನಾಯ್ಕ, ನವೀನ್​, ವಿಜಯ್​ ಕುಮಾರ್​, ನಾಗರಾಜ್​ ಇತರರಿದ್ದರು.
ಶಿರಾಳಕೊಪ್ಪದಲ್ಲಿ ರಣಾ ವೇದಿಕೆಯಿಂದ ಕನ್ನಡ ನಾಮ ಫಲಕ ಕಡ್ಡಾಯವಾಗಿ ಅಳವಡಿಸುವಂತೆ ಆಗ್ರಹಿಸಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ರವಿನಾಯ್ಕ, ನವೀನ್​, ವಿಜಯ್​ ಕುಮಾರ್​, ನಾಗರಾಜ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸರ್ಕಾರದ ಸುತ್ತೋಲೆ ಇದ್ದರೂ ಕಡೆಗಣನೆ
  • ಶಿರಾಳಕೊಪ್ಪದಲ್ಲಿ ಬಸ್​ ನಿಲ್ದಾಣದವರೆಗೆ ಮೆರವಣಿಗೆ
  • ಪುರಸಭೆ ಮುಖ್ಯಾಧಿಕಾರಿಗೆ ಕರವೇಯಿಂದ ಮನವಿ ಸಲ್ಲಿಕೆ
  • ಕನ್ನಡ ನಾಮಫಲಕ ಕಡ್ಡಾಯ ಅಳವಡಿಕೆಗೆ ಒತ್ತಾಯ
ಶಿರಾಳಕೊಪ್ಪ: ಪಟ್ಟಣದಲ್ಲಿನ ವಾಣಿಜ್ಯ ಮಳಿಗೆಗಳು, ಕೈಗಾರಿಕಾ ಟಕಗಳು, ಕಚೇರಿಗಳು, ಖಾಸಗಿ ಶಾಲಾ ಕಾಲೇಜುಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯವಾಗಿ ಅಳವಡಿಸುವಂತೆ ಆಗ್ರಹಿಸಿ ಪಟ್ಟಣದ ಆನವಟ್ಟಿ ರಸ್ತೆಯಿಂದ ಬಸ್​ ನಿಲ್ದಾಣದವರೆಗೆ ಮೆರವಣಿಗೆ ನಡೆಸಿ ಪುರಸಭೆ ಮುಖ್ಯಾಧಿಕಾರಿ ಪರಶುರಾಮ ಅವರಿಗೆ ಮನವಿ ಸಲ್ಲಿಸಿದರು.
ಕನ್ನಡದ ನೆಲ, ಜಲ, ಭಾಷೆಯ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಆದರೂ ನಾವು ಕನ್ನಡ ಬೆಳೆಸಿ, ಉಳಿಸಿ ಎಂದು ಹೇಳುವ ಪರಿಸ್ಥಿತಿ ಬಂದಿದೆ. ಈ ಪರಿಸ್ಥಿತಿ ಮೆಟ್ಟಿನಿಲ್ಲುವ ತಾಕತ್ತು ನಮಗಿದೆ. ಕರ್ನಾಟಕದಲ್ಲಿ ಶೇ.60ರಷ್ಟು ಕನ್ನಡ ನಾಮಫಲಕ ಅಳವಡಿಸುವ ಸರ್ಕಾರದ ಸುತ್ತೋಲೆ ಇದ್ದರೂ ಕನ್ನಡದ ನಾಮಫಲಕ ಅಳವಡಿಸಲು ಹಿಂದೇಟು ಹಾಕುವವರ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇನ್ನು 5 ದಿನ ಕಾಲಾವಕಾಶ ನೀಡುತ್ತೇವೆ. ಇಲ್ಲವಾದರೆ ಸರ್ಕಾರಿ ಕಚೇರಿಗಳ ಮುಂದೆ ತೀವ್ರ ಹೋರಾಟಕ್ಕೆ ಸಿದ್ಧ ಎಂದು ಎಚ್ಚರಿಸಿದರು.
ಕರವೇ ಶಿಕಾರಿಪುರ ತಾಲೂಕು ಅಧ್ಯ ರವಿನಾಯ್ಕ, ನವೀನ್​, ವಿಜಯ್​ಕುಮಾರ್​, ನಾಗರಾಜ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net