ಭಾರತ ಬಾಲ್ಯವಿವಾಹ ಮುಕ್ತವಾಗಲು ಕೈಜೋಡಿಸಿ I child marriage

ಬಾಲ್ಯವಿವಾಹ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಶಿವಮೊಗ್ಗ ನಗರ ಪಾಲಿಕೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಎಂ.ಎಸ್.ಸಂತೋಷ್ ಮಾತನಾಡಿದರು. ಕೆ.ಮಾಯಣ್ಣ ಗೌಡ, ರಾಘವೇಂದ್ರ ಸ್ವಾಮಿ, ಅನುಪಮಾ, ಅಕ್ಷಯ, ಅಕ್ಷತಾ ಇದ್ದರು.
ಬಾಲ್ಯವಿವಾಹ ಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ಶಿವಮೊಗ್ಗ ನಗರ ಪಾಲಿಕೆಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಎಂ.ಎಸ್.ಸಂತೋಷ್ ಮಾತನಾಡಿದರು. ಕೆ.ಮಾಯಣ್ಣ ಗೌಡ, ರಾಘವೇಂದ್ರ ಸ್ವಾಮಿ, ಅನುಪಮಾ, ಅಕ್ಷಯ, ಅಕ್ಷತಾ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ಎಂ.ಎಸ್.ಸಂತೋಷ್ ಮನವಿ
  • ನಗರಪಾಲಿಕೆಯಲ್ಲಿ ಜಾಗೃತಿ ಕಾರ್ಯಕ್ರಮ
  • ಕಾಯ್ದೆ ಪಾಲನೆಗೆ ಕೈ ಜೋಡಿಸುವಂತೆ ಜಾಗೃತಿ
 ಶಿವಮೊಗ್ಗ: ಬಾಲ್ಯವಿವಾಹ (child marriage) ಮುಕ್ತ ಭಾರತ ಮಾಡಲು ಎಲ್ಲರ ಸಹಕಾರ (cooperation) ಅಗತ್ಯ. ವಾತಾವರಣದಲ್ಲಿ ಸಂಕ್ರಾಂತಿ (sankranti) ಯು ಬದಲಾವಣೆ ತರುವ ರೀತಿಯಲ್ಲಿ ಬಾಲ್ಯವಿವಾಹಮುಕ್ತ ಭಾರತವಾಗಲು ಎಲ್ಲರೂ ಕೈಜೋಡಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್.ಸಂತೋಷ್ ಹೇಳಿದರು.
ಬಾಲ್ಯವಿವಾಹಮುಕ್ತ ಕರ್ನಾಟಕ ಅಭಿಯಾನದ ಅಂಗವಾಗಿ ನಗರ ಪಾಲಿಕೆಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಾಲ್ಯವಿವಾಹ ತಡೆಗೆ ಕಾನೂನು ಜಾರಿಗೆ ಬಂದು ಬಹಳ ವರ್ಷಗಳಾಗಿವೆ. ನಮ್ಮ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 79 ಬಾಲ್ಯವಿವಾಹ ಪ್ರಕರಣ ದಾಖಲಾಗಿದೆ. ಕಠಿಣ ಕಾನೂನು ಇದ್ದರೂ ಬಾಲ್ಯವಿವಾಹ ತಡೆಯುವಲ್ಲಿ ಅದು ವಿಫಲವಾಗಿರುವುದು ವಿಪರ್ಯಾಸ ಎಂದರು.
ಹದಿಹರೆಯದ ಮಕ್ಕಳು ಪ್ರೀತಿಯ ತಪ್ಪುಕಲ್ಪನೆಯಲ್ಲಿ ಗರ್ಭಧರಿಸಿದಾಗ ಪಾಲಕರು ಅನಿವಾರ್ಯವಾಗಿ ಅವರಿಗೆ ಬಾಲ್ಯವಿವಾಹ ಮಾಡುತ್ತಾರೆ. ಹಲವು ಸಮಾಜದಲ್ಲಿ ಇದು ನಡೆಯುತ್ತಿದೆ. ಜಿಲ್ಲೆಯಲ್ಲಿ ಒಂದು ವರ್ಷದಲ್ಲಿ 150 ರಿಂದ 200 ಪೋಕ್ಸೊ ಪ್ರಕರಣಗಳು ದಾಖಲಾಗುತ್ತಿವೆ. ಬಹಳಷ್ಟು ಪ್ರಕರಣಗಳು ಪರಸ್ಪರ ಸಮ್ಮತಿಯಿಂದ ಆಗುತ್ತವೆ. ಕೆಲವು ರಾಜಿ ಸಂಧಾನದ ಮೂಲಕ ಮುಚ್ಚಿಹೋಗುತ್ತವೆ. ಇದಕ್ಕೆ ಕಡಿವಾಣ ಹಾಕಬೇಕಿರುವುದು ಎಲ್ಲರ ಕರ್ತವ್ಯ ಎಂದು ಹೇಳಿದರು.
ಬಾಲ್ಯವಿವಾಹ ನಡೆಯುತ್ತಿರುವ ಬಗ್ಗೆ ಗೊತ್ತಿದ್ದೂ ತಿಳಿಸದಿದ್ದರೆ ಅಥವಾ ವಿವಾಹದಲ್ಲಿ ಭಾಗಿಯಾದರೆ, ಅಡುಗೆ ಮಾಡಿದರೆ, ಸ್ಥಳಾವಕಾಶ ನೀಡಿದರೂ ಶಿಕ್ಷಾರ್ಹ ಅಪರಾಧವಾಗುತ್ತದೆ. ಪಾಲಕರಷ್ಟೇ ಅಲ್ಲ, ಮದುವೆಯಲ್ಲಿ ಭಾಗವಹಿಸಿದವರೂ ಕೂಡ ಶಿಕ್ಷಾರ್ಹರು. ಕನಿಷ್ಠ ಒಂದು ವರ್ಷ, ಗರಿಷ್ಠ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಲು ಅವಕಾಶವಿದೆ ಎಂದು ತಿಳಿಸಿದರು.
ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅಕ್ಷಯಾ, ಪ್ರಮುಖರಾದ ಅಕ್ಷತಾ, ಅನುಪಮಾ ಇತರರಿದ್ದರು.
"

ಬಾಲ್ಯವಿವಾಹದಿಂದ ಕುಟುಂಬವೇ ಸರ್ವನಾಶವಾಗುತ್ತದೆ. ಸಮಸ್ಯೆ ಬಂದಾಗ ಯಾವ ರೀತಿ ಎದುರಿಸಬೇಕೆಂಬ ಸಾಮರ್ಥ್ಯ ಚಿಕ್ಕ ವಯಸ್ಸಿನಲ್ಲಿ ಇರುವುದಿಲ್ಲ. ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳಿಗೆ ಪ್ರೀತಿಯಿಂದ ಬುದ್ಧಿಹೇಳಿ ಕಾನೂನಿನ ಬಗ್ಗೆ ಅರಿವು ಮೂಡಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net