ದೇವಾಲಯಗಳ ಅಭಿವೃದ್ಧಿಗೆ ಕೈಜೋಡಿಸಿ

ತ್ಯಾಗರ್ತಿ ಸಮೀಪ ಹೊಸಂತೆ ಬಾವಾಜಿ ಮಠದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಕಲಸೆ ಚಂದ್ರಪ್ಪ, ಚೇತನ್‌ರಾಜ್ ಕಣ್ಣೂರು, ಮಹೇಶ್, ದಿನೇಶ್ ಮತ್ತಿತರರು ಪಾಲ್ಗೊಂಡಿದ್ದರು.
ತ್ಯಾಗರ್ತಿ ಸಮೀಪ ಹೊಸಂತೆ ಬಾವಾಜಿ ಮಠದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಶಾಸಕ ಗೋಪಾಲಕೃಷ್ಣ ಬೇಳೂರು, ಕಲಸೆ ಚಂದ್ರಪ್ಪ, ಚೇತನ್‌ರಾಜ್ ಕಣ್ಣೂರು, ಮಹೇಶ್, ದಿನೇಶ್ ಮತ್ತಿತರರು ಪಾಲ್ಗೊಂಡಿದ್ದರು.
Published on
ತ್ಯಾಗರ್ತಿ: ಗ್ರಾಮದಲ್ಲಿ ಶಿಥಿಲಗೊಂಡ ಪುರಾತನ ದೇವಾಲಯಗಳ ಅಭಿವೃದ್ಧಿಗೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಹೊಸಂತೆ ಬಾವಾಜಿ ಮಠದ ಪುರಾತನ ಆಂಜನೇಯ, ನಾಗದೇವರು ಮತ್ತು ಚೌಡೇಶ್ವರಿ ದೇವಸ್ಥಾನದ ಮರು ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಮದ ಚೌಡಮ್ಮ, ಯಕ್ಷಮ್ಮ ಇಂತಹ ಪುರಾತನ ಗುಡಿಗಳು ಗ್ರಾಮದ ಶಕ್ತಿಯ ಸ್ಥಳವಾಗಿದೆ. ದೇವಾಲಯಗಳ ಅಭಿವೃದ್ಧಿಯಿಂದ ಗ್ರಾಮದಲ್ಲಿ ನೆಮ್ಮದಿ ನೆಲೆಸುತ್ತದೆ ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ಸೋಮಶೇಖರ್ ಲಾವಿಗ್ಗೆರೆ, ಚೇತನ್‌ರಾಜ್ ಕಣ್ಣೂರು, ಯೋಗೇಶ್ ಹುತ್ತಾದಿಂಬ, ಎಚ್.ಆರ್.ರಮೇಶ್ ಹೊಸಂತೆ, ಮಹೇಶ್, ದಿನೇಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net