ಸನಾತನ ಧರ್ಮದ ರಕ್ಷಣೆ ನಮ್ಮ ಹೊಣೆ | Hindu sangama

ಸಾಗರದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಗುರುರಾಜ್, ರಾಘವೇಂದ್ರ ಶೇಟ್, ಪ್ರತಿಮಾ ಜೋಗಿ, ಮೈತ್ರಿ ಪಾಟೀಲ್ ಇತರರಿದ್ದರು.
ಸಾಗರದಲ್ಲಿ ಆಯೋಜಿಸಿದ್ದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ, ಗುರುರಾಜ್, ರಾಘವೇಂದ್ರ ಶೇಟ್, ಪ್ರತಿಮಾ ಜೋಗಿ, ಮೈತ್ರಿ ಪಾಟೀಲ್ ಇತರರಿದ್ದರು.
Published on
ಸಾಗರ: ಪ್ರಸ್ತುತ ಹಿಂದೂ ಸಮಾಜ ಹೊರಗಿನ ಮತ್ತು ಒಳಗಿನ ಅತಂಕವನ್ನು ಎದುರಿಸುತ್ತಿದೆ. ನಾವು ಬಯಸದೇ ಇರುವ ಬದಲಾವಣೆ ಹಿಂದೂ ಸಮಾಜವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದಕ್ಕೆ ನಾವೇ ಪರಿಹಾರ ಕಂಡುಕೊಳ್ಳಬೇಕು ಎಂದು ಗ್ರಾಮವಿಕಾಸ ಅಖಿಲ ಭಾರತ ಸಂಯೋಜಕ ಗುರುರಾಜ್ ಹೇಳಿದರು.
ಸಾಗರದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಆಯೋಜಿಸಿದ್ದ ಹಿಂದು ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸಣ್ಣ ಮಾರ್ಗವೇ ಹಿಂದೂ ಸಂಗಮ ಎಂದರು.
ಇದರಲ್ಲಿ ಉತ್ಸಾಹ ಇದೆ, ಆವೇಶ ಇಲ್ಲ. ಪ್ರಸ್ತುತ ಸಮಾಜ ಎದುರಿಸುತ್ತಿರುವ ಸಮಸ್ಯೆಗಳಿಂದ ಹೊರಗೆ ಬರಬೇಕಾದರೆ ನಾವು ಇನ್ನಷ್ಟು ದೃಢ ನಿರ್ಧಾರ ಕೈಗೊಳ್ಳಬೇಕಿದೆ. ನಮ್ಮ ಧರ್ಮ, ಸಂಸ್ಕೃತಿಯನ್ನು ಕಾಪಾಡಿಕೊಳ್ಳುವುದು ಇಂದಿನ ತುರ್ತು. ಜಗತ್ತಿನ ಎಲ್ಲ ಕ್ಷೇತ್ರಕ್ಕೂ ಕೊಡುಗೆ ನೀಡಿರುವುದು ಹಿಂದೂ ಸಮಾಜ ಎಂದು ಅಭಿಪ್ರಾಯಪಟ್ಟರು.
ಮೂಲೆಗದ್ದೆ ಮಠ ಸದಾನಂದ ಶಿವಯೋಗಾಶ್ರಮದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಮಾತನಾಡಿ, ಮೂರು ಅಕ್ಷರಗಳಲ್ಲಿಯೇ ಸಮರ್ಥ ಸತ್ವ ಹೊಂದಿರುವ ಸದೃಢ ದೇಶ ಭಾರತ. ನಮ್ಮ ಕುಟುಂಬ, ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುವ ಜತೆಗೆ ಅನ್ನ ಕೊಡುವ ರೈತನಿಗೆ, ಗಡಿ ಕಾಯುವ ಸೈನಿಕನ ಪರವಾಗಿಯೂ ನಾವು ಪ್ರಾರ್ಥನೆ ಮಾಡಬೇಕು. ಯುವ ಸಮೂಹವನ್ನು ಸನ್ಮಾರ್ಗದತ್ತ ಕರೆದೊಯ್ಯುವ ಕೆಲಸವಾಗಬೇಕು ಎಂದು ಹೇಳಿದರು.
ಆಯೋಜನಾ ಸಮಿತಿಯ ರಾಘವೇಂದ್ರ ಶೇಟ್, ರಾಜೇಂದ್ರ ಪೈ, ಪ್ರತಿಮಾ ಜೋಗಿ, ಮೈತ್ರಿ ಪಾಟೀಲ್, ಸವಿತಾ, ಗಣೇಶ್ ಶೇಟ್, ಶ್ವೇತಾ, ಬಿ.ಎಚ್.ಲಿಂಗರಾಜ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net