ಶಿವಮೊಗ್ಗದಲ್ಲಿ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮದಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಬಿ.ವೈ.ರಾಘವೇಂದ್ರ, ಸಿ.ಎಸ್.ಷಡಾಕ್ಷರಿ, ಆರ್.ಮೋಹನ್‌ಕುಮಾರ್, ಆಯನೂರು ಮಂಜುನಾಥ್, ಎಸ್.ಪಿ.ದಿನೇಶ್ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಪ್ರಾಮಾಣಿಕತೆಯ ಪ್ರಜ್ಞೆ ಎಲ್ಲರಲ್ಲೂ ಅವಶ್ಯ
ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅಭಿಮತ
ಶಿವಮೊಗ್ಗ: ಯಾರು ಪ್ರಾಮಾಣಿಕ (prompt) ವಾಗಿ ಕಾರ್ಯನಿರ್ವಹಿಸುತ್ತಾರೋ ಅವರಿಗೆ ಭಗವಂತ (god) ಎಲ್ಲವನ್ನೂ ನೀಡುತ್ತಾನೆ. ಈ ಎಚ್ಚರ ಇಂದಿನ ಯುವಪೀಳಿಗೆಗೆ ಇರಬೇಕು. ಭವಿಷ್ಯದಲ್ಲಿ ಲಂಚ, ವಂಚನೆಗೆ ಕೈ ಹಾಕುವುದಿಲ್ಲ ಎನ್ನುವ ಪ್ರತಿಜ್ಞೆಯನ್ನು ವಿದ್ಯಾರ್ಥಿಗಳು ಮಾಡಬೇಕು. ನಾಡಿನ ರಾಜಕಾರಣಿಗಳು, ಅಧಿಕಾರಿಗಳು, ಸ್ವಾಮೀಜಿಗಳಿಗೆ ಪ್ರಾಮಾಣಿಕತೆಯ ಪ್ರಜ್ಞೆ ಮೂಡಿದರೆ ನಮ್ಮದು ಕಲ್ಯಾಣ ರಾಜ್ಯವಾಗುತ್ತದೆ ಎಂದು ಸಾಣೇಹಳ್ಳಿ (sanehalli) ಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದಿಂದ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಹಾಗೂ ಸಾಧನೆಗೈದ ಹಳೆಯ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ದ್ವೇಷ, ಅಸೂಯೆ, ಮತ್ಸರಗಳನ್ನು ಕಳೆದುಕೊಂಡಿದ್ದೇವೆಯೇ, ಪಾಲಕರು, ಗುರು-ಹಿರಿಯರ ಬಗ್ಗೆ ಗೌರವ ಇಟ್ಟುಕೊಂಡಿದ್ದೇವೆಯೇ ಎಂಬುದನ್ನು ವಿದ್ಯಾವಂತರು ಪ್ರಶ್ನಿಸಿಕೊಳ್ಳಬೇಕು. ಇಂದು ವಿದ್ಯಾವಂತರು ತಮ್ಮ ಸುತ್ತಲೂ ಗೋಡೆಗಳನ್ನು ಕಟ್ಟಿಕೊಳ್ಳುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಅನಕ್ಷರಸ್ಥ ಪಾಲಕರು ಸಂಸ್ಕಾರದಿಂದ ಸಮಾಜಮುಖಿಯಾಗಿ ಬದುಕಿ ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿದರು. ಆದರೆ ಶಿಕ್ಷಣ ಪಡೆದ ಅನೇಕರು ದಾರಿ ತಪ್ಪುತ್ತಿದ್ದಾರೆ. ಸಮಾಜಮುಖಿಯಾಗದೆ ಸುತ್ತಲೂ ಗೋಡೆ ನಿರ್ಮಿಸಿಕೊಂಡಿದ್ದಾರೆ. ಈ ಪರಿಸ್ಥಿತಿ ಬದಲಾಗಬೇಕು ಎಂದು ಹೇಳಿದರು.
ಬೆಕ್ಕಿನ ಕಲ್ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಪ್ರಮುಖರಾದ ಎಸ್.ಪಿ.ದಿನೇಶ್, ಸಿದ್ದಬಸಪ್ಪ ಇತರರಿದ್ದರು.
"
ನಾವು ಸತ್ತ ಮೇಲೆ ದೇಹ ಭೂಮಿಗೆ ಸೇರುತ್ತದೆ. ಉಸಿರು ಗಾಳಿಯಲ್ಲಿ ಲೀನವಾಗುತ್ತದೆ. ನಾವು ಸಂಪಾದಿಸಿದ ಆಸ್ತಿಗೆ ಬೇರೆಯವರು ಬಡಿದಾಡುತ್ತಾರೆ. ಸಾವಿನ ನಂತರ ನಮ್ಮೊಂದಿಗೆ ಬರುವುದು ನಾವು ಮಾಡಿದ ಒಳಿತು, ಕೆಡಕುಗಳೇ ಹೊರತು ನಾವು ಸಂಪಾದಿಸಿದ ಆಸ್ತಿಯಲ್ಲ. ಹೀಗಾಗಿ ಮನುಷ್ಯ ಆದರ್ಶದ ತಳಹದಿ ಮೇಲೆ ಜೀವನ ಕಟ್ಟಿಕೊಳ್ಳಬೇಕು. ವಿವಿಧ ಉದ್ಯೋಗಗಳಲ್ಲಿ, ದೊಡ್ಡ ಸ್ಥಾನದಲ್ಲಿರುವವರಿಗೆ ಈ ಎಚ್ಚರ ಮೂಡಿದಾಗ ಭ್ರಷ್ಟಾಚಾರ ದೂರವಾಗುತ್ತದೆ. ಶ್ರೀ ಪಂಡಿತಾರಾಧ್ಯ ಸ್ವಾಮೀಜಿಸಾಣೇಹಳ್ಳಿ ಮಠ