ಮಕ್ಕಳಿಗೆ ಸಂಸ್ಕಾರ ಕಲಿಸುವುದು ಅವಶ್ಯ

ಭದ್ರಾವತಿ ನ್ಯೂಟೌನ್‌ನಲ್ಲಿ ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮದ 5ನೇ ವಾರ್ಷಿಕೋತ್ಸವವನ್ನು ಬಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಎಸ್.ಕುಮಾರ್, ಎಚ್.ಎಲ್.ಷಡಾಕ್ಷರಿ, ಜ್ಯೋತಿ ಸೋಮಶೇಖರ್ ಇತರರಿದ್ದರು.
ಭದ್ರಾವತಿ ನ್ಯೂಟೌನ್‌ನಲ್ಲಿ ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮದ 5ನೇ ವಾರ್ಷಿಕೋತ್ಸವವನ್ನು ಬಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಎಸ್.ಕುಮಾರ್, ಎಚ್.ಎಲ್.ಷಡಾಕ್ಷರಿ, ಜ್ಯೋತಿ ಸೋಮಶೇಖರ್ ಇತರರಿದ್ದರು.
Published on
ಭದ್ರಾವತಿ: ಹಿರಿಯರನ್ನು ಗೌರವಿಸುವ ಹಾಗೂ ಅವರ ಸೇವೆ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಕೆ.ಶಿವಕುಮಾರ್ ಹೇಳಿದರು.
ನ್ಯೂಟೌನ್ ಸುರಕ್ಷಾ ಜೀವನ ಸೇವಾ ಟ್ರಸ್ಟ್‌ನಿಂದ ಆಯೋಜಿಸಿದ್ದ ಸುರಕ್ಷಾ ಜೀವನ ವೃದ್ಧಾಶ್ರಮ ಮತ್ತು ಅನಾಥಾಶ್ರಮದ 5ನೇ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಲ್ಲಿ ಉತ್ತಮ ಸಂಸ್ಕಾರ ಬೆಳೆಸುವ ಅಗತ್ಯವಿದೆ. ಗುರು-ಹಿರಿಯರನ್ನು ಗೌರವಿಸುವ ಸಂಸ್ಕಾರ ಕಲಿಸಬೇಕು ಎಂದು ತಿಳಿಸಿದರು.
ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಎಚ್.ಎಲ್.ಷಡಕ್ಷರಿ ಮಾತನಾಡಿ, ಸಮಾಜದಲ್ಲಿ ಸಂಬಂಧಗಳಿಗೆ ಬೆಲೆ ಇಲ್ಲದಂತಾಗಿದೆ. ಸಹೋದರತ್ವ ಸಂಬಂಧವನ್ನೂ ಸಹ ಉಳಿಸಿಕೊಳ್ಳುವ ಮನಸ್ಥಿತಿ ದೂರವಾಗಿದೆ. ಮದುವೆಯಾಗಿ ಕೆಲ ದಿನಗಳಲ್ಲೇ ದಾಂಪತ್ಯ ಕಲಹದಿಂದ ಪತಿ-ಪತ್ನಿ ಬೇರೆ ಆಗುತ್ತಿರುವುದು ವಿಪರ್ಯಾಸ ಎಂದರು.
ಸುರಕ್ಷಾ ಜೀವನ ಸೇವಾ ಟ್ರಸ್ಟ್ ಅಧ್ಯಕ್ಷೆ ಜ್ಯೋತಿ ಸೋಮಶೇಖರ್, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್.ಕುಮಾರ್, ನಗರಸಭೆ ಸದಸ್ಯರಾದ ಸರ್ವಮಂಗಳಾ ಭೈರಪ್ಪ, ಕೆ.ಸುದೀಪ್‌ಕುಮಾರ್, ಬಿ.ಎಂ.ರವಿಕುಮಾರ್, ಕೆಡಿಪಿ ಸದಸ್ಯ ಎಚ್.ರವಿಕುಮಾರ್, ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಹನುಮಮ್ಮ, ಉಮೇಶ್, ಪ್ರಭಾಕರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net