ಗ್ರಾಮೀಣ ಬದುಕಿನ ಮಹತ್ವ ಪರಿಚಯಿಸಿ

ಸಾಗರದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ವಕೀಲೆ ಸಹನಾ ಜಿ. ಭಟ್ ಪ್ರಮಾಣಪತ್ರ ವಿತರಿಸಿದರು. ಎಸ್.ಶೈಲಾ, ಉದಯಕುಮಾರ್ ಕುಂಸಿ, ಎಚ್.ಸಂತೋಷ್ ಇತರರಿದ್ದರು.
ಸಾಗರದಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ವಕೀಲೆ ಸಹನಾ ಜಿ. ಭಟ್ ಪ್ರಮಾಣಪತ್ರ ವಿತರಿಸಿದರು. ಎಸ್.ಶೈಲಾ, ಉದಯಕುಮಾರ್ ಕುಂಸಿ, ಎಚ್.ಸಂತೋಷ್ ಇತರರಿದ್ದರು.
Published on
ಸಾಗರ: ಆಧುನಿಕ ತಂತ್ರಜ್ಞಾನದ ಕಾಲಘಟ್ಟದಲ್ಲಿ ಬದುಕಿನ ಶೈಲಿ ಬದಲಾಗುತ್ತಿದ್ದು, ಮಕ್ಕಳಿಗೆ ಗ್ರಾಮೀಣ ಬದುಕಿನ ಮಹತ್ವ ಪರಿಚಯಿಸಬೇಕಿದೆ ಎಂದು ವಕೀಲೆ ಸಹನಾ ಜಿ. ಭಟ್ ಹೇಳಿದರು.
ಸಾಗರದ ಚಿಗುರು ಜಂಬೋ ಕಿಡ್ಸ್ ಆಯೋಜಿಸಿದ್ದ ಒಂದು ತಿಂಗಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿ, ಬೇಸಿಗೆ ಶಿಬಿರಗಳು ಮಕ್ಕಳಿಗೆ ಸಮಾಜದ ವಿವಿಧ ಆಯಾಮಗಳ ಬಗ್ಗೆ ಪರಿಚಯಿಸುವ ಕೆಲಸ ಮಾಡುತ್ತವೆ. ಜಾನಪದ ಸಾಹಿತ್ಯದ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು ಎಂದು ತಿಳಿಸಿದರು.
ಹಳ್ಳಿ ಸೊಗಡು ಶೀರ್ಷಿಕೆಯಡಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಗ್ರಾಮೀಣ ಪ್ರದೇಶದ ಮಹತ್ವವನ್ನು ಪ್ರಾತ್ಯಕ್ಷಿಕೆ ಮೂಲಕ ಪರಿಚಯಿಸಲಾಯಿತು. ಬೀಸುವ ಕಲ್ಲು, ಒನಕೆ, ಮೊಸರು ಕಡಿಯುವುದು, ಭತ್ತ, ಹಸೆ ಚಿತ್ತಾರದ ಹೂಜಿಗಳು ಎಲ್ಲವನ್ನೂ ಅನಾವರಣಗೊಳಿಸಲಾಗಿತ್ತು.
ಶಿಬಿರಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿರಿಯ ಕಲಾವಿದ ಉದಯಕುಮಾರ್ ಕುಂಸಿ, ಶಿಬಿರದ ಸಂಚಾಲಕಿ ಎಸ್.ಶೈಲಾ, ಸಂಸ್ಥೆಯ ಹೂವಪ್ಪ, ಎಚ್.ಸಂತೋಷ್, ಮಲ್ಲಮ್ಮ, ಶಿಕ್ಷಕರಾದ ಮೇಘನಾ, ನಂದಿನಿ, ಐಶ್ವರ್ಯಾ, ಸಹನಾ, ಜೀನಾ, ತೆರೇಜಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net