ಕಾರ್ಗಲ್: ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ಪೊಲೀಸ್ ಠಾಣೆ ಹಾಗೂ ಹಲಗೇರಿ ಗ್ರಾಮ ಪಂಚಾಯಿತಿ ಜಂಟಿಯಾಗಿ ಜೋಗ ಜಲಪಾತದ ಬ್ರಿಟಿಷ್ ಬಂಗಲೆ ಸಮೀಪದ ಅಪಾಯಕಾರಿ ಹಾಗೂ ನಿಷೇಧಿತ ಪ್ರದೇಶಕ್ಕೆ ಸ್ಥಳಿಯರು ಹಾಗೂ ಪ್ರವಾಸಿಗರು ತೆರಳದಂತೆ ಸೂಚನಾ ಫಲಕಗಳನ್ನು ಅಳವಡಿಸಲಾಯಿತು. ಮುಂದಿನ ದಿನಗಳಲ್ಲಿ ಇಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ನಿರ್ಧರಿಸಲಾಗಿದೆ. ಸ್ಥಳಕ್ಕೆ ಪಿಎಸ್ಐ ಶಾಂತಿನಾಥ್ ಪಾಸಾನೆ, ಹಲಗೇರಿ ಗ್ರಾಪಂ ಆಡಳಿತಾಧಿಕಾರಿ ಸುಮಾ, ಹಲಗೇರಿ ಪಿಡಿಒ ನಟರಾಜ್ ನಾಯ್ಕ್ ಸ್ಥಳಕ್ಕೆ ಭೇಟಿ ನೀಡಿದ್ದರು.