ಹೈಮಾಸ್ಟ್ ದೀಪ ಅಳವಡಿಕೆ ಅನಗತ್ಯ | records Scrutiny

ತೀರ್ಥಹಳ್ಳಿ ತಾಲೂಕು ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿದ ಮುಜರಾಯಿ ಇಲಾಖೆಯ ದಾಖಲೆಗಳ ವಿವರಣೆ ಪಡೆದರು.
ತೀರ್ಥಹಳ್ಳಿ ತಾಲೂಕು ಕಚೇರಿಗೆ ಶಾಸಕ ಆರಗ ಜ್ಞಾನೇಂದ್ರ ಭೇಟಿ ನೀಡಿದ ಮುಜರಾಯಿ ಇಲಾಖೆಯ ದಾಖಲೆಗಳ ವಿವರಣೆ ಪಡೆದರು.
Published on
ತೀರ್ಥಹಳ್ಳಿ: ಮುಜರಾಯಿ ಇಲಾಖೆಯ ನಿಯಮಾವಳಿಗಳನ್ನು ಪಾಲಿಸದೆ ತಾಲೂಕಿನ ಧಾರ್ಮಿಕ ಕೇಂದ್ರಗಳಿಗೆ ದುಬಾರಿ ಬೆಲೆಯ ಹೈಮಾಸ್ಟ್ ದೀಪಗಳನ್ನು ಅಳವಡಿಸಲು ನಿರ್ಧಾರ ತೆಗೆದುಕೊಂಡಿರುವುದರಲ್ಲಿ ಲೋಪವಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.
ಸೋಮವಾರ ತಾಲೂಕು ಕಚೇರಿಗೆ ಭೇಟಿ ನೀಡಿದ ವೇಳೆ ಮುಜರಾಯಿ ಇಲಾಖೆ ದಾಖಲೆಗಳ ವಿವರಣೆ ಪಡೆದ ನಂತರ ಮಾತನಾಡಿದ ಅವರು, ಹೈಮಾಸ್ಟ್ ದೀಪಗಳ ಖರೀದಿ ಬಗ್ಗೆ ದೇವಸ್ಥಾನದ ಧಾರ್ಮಿಕ ಸಮಿತಿಯ ಗಮನಕ್ಕೆ ಬಾರದಂತೆ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ. ಹಣಗೆರೆ ಕಟ್ಟೆಯಲ್ಲಿರುವ ಭೂತರಾಯ ಸ್ವಾಮಿ ಮತ್ತು ಸೈಯದ್ ಹಜರತ್ ದರ್ಗಾ ಧಾರ್ಮಿಕ ಕೇಂದ್ರಕ್ಕೆ 18 ಲಕ್ಷ ರೂ. ವೆಚ್ಚದಲ್ಲಿ ಹೈಮಾಸ್ಟ್ ದೀಪ ಖರೀದಿಸಲಾಗಿದೆ. ಇದರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಹಸ್ತಕ್ಷೇಪವಿದೆ ಎಂದು ದೂರಿದರು.
ಮೃಗವಧೆಯ ಮಲ್ಲಿಕಾರ್ಜುನಸ್ವಾಮಿ ದೇವಸ್ಥಾನ ಮತ್ತು ಸುಸಜ್ಜಿತ ಬೆಳಕಿನ ವ್ಯವಸ್ಥೆ ಇರುವ ಪಟ್ಟಣದ ರಾಮೇಶ್ವರ ದೇವಸ್ಥಾನದ ಆವರಣಗಳಿಗೂ ಅಳವಡಿಸಲು ಪ್ರಸ್ತಾವನೆ ಕಳುಹಿಸಲಾಗಿದೆ. ಧರ್ಮದರ್ಶಿ ಮಂಡಳಿ ಗಮನಕ್ಕೂ ಬಾರದ ಈ ತೀರ್ಮಾನದ ಬಗ್ಗೆ ನಾನು ತಡೆ ಹಾಕಿದ್ದೇನೆ. ಈ ದೀಪಗಳ ನಿರ್ವಹಣೆಯೂ ದುಬಾರಿಯಾಗಿದ್ದು ಹುಂಡಿ ಹಣವನ್ನೇ ವ್ಯಯ ಮಾಡಬೇಕಾಗುತ್ತದೆ. ಆಶ್ಚರ್ಯದ ಸಂಗತಿ ಎಂದರೆ ಶಿವಮೊಗ್ಗ ಉಪವಿಭಾಗಾಧಿಕಾರಿಯೂ ಪ್ರಸ್ತಾವನೆ ಕಳುಹಿಸುವಂತೆ ತಾಲೂಕಿನ ಮುಜರಾಯಿ ವಿಭಾಗದ ಗುಮಾಸ್ತರಿಗೆ ಸೂಚಿಸಿದ್ದಾರೆ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net