ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆ

ಸಿಗಂದೂರಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರದಲ್ಲಿ ಧರ್ಮದರ್ಶಿ ಎಸ್.ರಾಮಪ್ಪ ಅವರನ್ನು ಸನ್ಮಾನಿಸಲಾಯಿತು. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ರವಿಕುಮಾರ್ ಸಿಗಂದೂರು ಇತರರಿದ್ದರು.
ಸಿಗಂದೂರಿನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರದಲ್ಲಿ ಧರ್ಮದರ್ಶಿ ಎಸ್.ರಾಮಪ್ಪ ಅವರನ್ನು ಸನ್ಮಾನಿಸಲಾಯಿತು. ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ರವಿಕುಮಾರ್ ಸಿಗಂದೂರು ಇತರರಿದ್ದರು.
Published on
ಸಾಗರ: ಧಾರ್ಮಿಕ ಕ್ಷೇತ್ರಗಳು ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಾಗ ಸಮಾಜ ಏಳಿಗೆಯಾಗುತ್ತದೆ ಎಂದು ಶಾಸಕ MLA ಗೋಪಾಲಕೃಷ್ಣ ಬೇಳೂರು ಹೇಳಿದರು.
ಸಿಗಂದೂರಿನಲ್ಲಿ ಸಿಗಂದೂರು TEMPLE ಚೌಡೇಶ್ವರಿ ಟ್ರಸ್ಟ್ ಮತ್ತು ಡಾ. ರಾಮಪ್ಪ ಅಭಿಮಾನಿ ಬಳಗದಿಂದ ಡಾ. ರಾಮಪ್ಪ ಸಿಗಂದೂರು ಅವರ 74ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರ ಹಾಗೂ ಸೈನಿಕ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಲೆನಾಡು ಭಾಗದಲ್ಲಿ ಸಿಗಂದೂರು SIGANDOORU ಕ್ಷೇತ್ರ ಭಕ್ತಿಶಕ್ತಿಯ ಜತೆಗೆ ವಿವಿಧ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಚಟುವಟಿಕೆಗಳಿಗೆ ದೇಣಿಗೆ ನೀಡುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಿದೆ ಎಂದು ತಿಳಿಸಿದರು.
ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಮಾತನಾಡಿ, ನಾಡಿನಲ್ಲಿ ಮಠಮಂದಿರಗಳು ಧಾರ್ಮಿಕ ಪ್ರಬೋಧನೆ ಜತೆ ಸಮಾಜ ಸೇವೆ, ಅನ್ನ ದಾಸೋಹ, ಅಕ್ಷರ ದಾಸೋಹದಂತಹ ಸಾರ್ಥಕ ಕೆಲಸ ಮಾಡಿಕೊಂಡು ಬರುತ್ತಿವೆ ಎಂದರು.
ಡಾ. ರಾಮಪ್ಪ ಸಿಗಂದೂರು, ಜಿ.ಟಿ.ಸತ್ಯನಾರಾಯಣ, ರವಿಕುಮಾರ್ ಸಿಗಂದೂರು, ಶ್ರೀಧರ ಹುಲ್ತಿಕೊಪ್ಪ, ಇಂದೂಧರ ಬೇಸೂರು, ನಾರಾಯಣಪ್ಪ, ಶಿವಕುಮಾರ್, ನಾಗರಾಜ್, ಉಮೇಶ್, ರವಿಕುಮಾರ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net