ಕನ್ನಡದಲ್ಲಿ ವ್ಯವಹರಿಸಲು ಒತ್ತಾಯ | Protest

ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್‌ನಲ್ಲಿ ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸಬೇಕು ಎಂದು ಒತ್ತಾಯಿಸಿ ಕನ್ನಡ ಸೇನೆ ಪ್ರಮುಖರಾದ ಜಿ.ಡಿ.ಮಲ್ಲಿಕಾರ್ಜುನ, ಆಸ್ೀ, ಲಿಂಗರಾಜು, ಶಿವಕುಮಾರ ಮತ್ತಿತರರು ಪ್ರತಿಭಟನೆ ನಡೆಸಿದರು.
ರಿಪ್ಪನ್‌ಪೇಟೆ ಕೆನರಾ ಬ್ಯಾಂಕ್‌ನಲ್ಲಿ ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸಬೇಕು ಎಂದು ಒತ್ತಾಯಿಸಿ ಕನ್ನಡ ಸೇನೆ ಪ್ರಮುಖರಾದ ಜಿ.ಡಿ.ಮಲ್ಲಿಕಾರ್ಜುನ, ಆಸ್ೀ, ಲಿಂಗರಾಜು, ಶಿವಕುಮಾರ ಮತ್ತಿತರರು ಪ್ರತಿಭಟನೆ ನಡೆಸಿದರು.
Published on
ರಿಪ್ಪನ್ ಪೇಟೆ: ಪಟ್ಟಣದ ಕೆನರಾ ಬ್ಯಾಂಕ್‌ನಲ್ಲಿ ಅನ್ಯ ಭಾಷಿಕ ಅಧಿಕಾರಿ, ಸಿಬ್ಬಂದಿ ಕನ್ನಡದಲ್ಲಿ ವ್ಯವಹರಿಸದೇ ಇರುವುದರಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಮಲೆನಾಡ ಕನ್ನಡಿಗರ ಸೇನೆ ನೇತೃತ್ವದಲ್ಲಿ ಸೋಮವಾರ ಸಾರ್ವಜನಿಕರು ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ವ್ಯವಸ್ಥಾಪಕ ಹಾಗೂ ಕೆಲ ಸಿಬ್ಬಂದಿ ಹಿಂದಿ, ಇಂಗ್ಲಿಷ್ ಮಾತನಾಡುತ್ತಾರೆ. ಸ್ಥಳೀಯರಿಗೆ ಇವರ ಭಾಷೆ ಅರ್ಥವಾಗುವುದಿಲ್ಲ ಹಾಗೂ ಕನ್ನಡ ಅವರಿಗೆ ತಿಳಿಯುವುದಿಲ್ಲ. ಇದರಿಂದ ಠೇವಣಿ, ಸಾಲ, ನೂತನ ಖಾತೆ ಆರಂಭಕ್ಕೆ ಬರುವ ಜನರಿಗೆ ಸಂವಹನದ ತೊಡಕಿನಿಂದ ವ್ಯವಹಾರಗಳು ಸರಿಯಾಗಿ ನಡೆಯುತ್ತಿಲ್ಲ ಎಂದು ದೂರಿದರು.
ಮಳೆ ಕೊರತೆಯಿಂದ ಬರ ಆತಂಕದಲ್ಲಿರುವ ರೈತರಿಗೆ ಈಗ ಬೆಳೆ ವಿಮೆ ಪಾವತಿಸುವ ಸಮಯ. ಅವಧಿ ಕಡಿಮೆಯಿರುವ ತುರ್ತು ಸಂದರ್ಭದಲ್ಲಿ ಅಗತ್ಯ ಕೆಲಸ ಆಗದಿದ್ದರೆ ಜನರಿಗೆ ಅನ್ಯಾಯವಾಗುತ್ತದೆ. ಹಾಗಾಗಿ ಮೇಲಧಿಕಾರಿಗಳು ಕೂಡಲೇ ಗಮನಹರಿಸಿ ವ್ಯವಸ್ಥೆ ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಶಿವಮೊಗ್ಗ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ ವ್ಯವಸ್ಥಾಪಕ ರಾಜು, ಬ್ಯಾಂಕಿನಲ್ಲಿನ ನ್ಯೂನತೆಗಳನ್ನು ಜು.30ರೊಳಗೆ ಸರಿಪಡಿಸಿ ಗ್ರಾಹಕಸ್ನೇಹಿ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಸಿದ್ದೇಶ್, ಜಿ.ಡಿ.ಮಲ್ಲಿಕಾರ್ಜುನ, ಲಿಂಗರಾಜು, ಶಿವಕುಮಾರ, ಆದರ್ಶ, ಗೋಪಾಲಕೃಷ್ಣ, ಶ್ರೀಧರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net