ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡದೆ ಅನ್ಯಾಯ

ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಮಲೆನಾಡು ರೈತ ಹೋರಾಟ ವೇದಿಕೆ ಪ್ರಮುಖರು ಸಿಗಂದೂರು ಸೇತುವೆ ಮೇಲೆ ರಸ್ತೆ ತಡೆ ನಡೆಸಿದರು. ತೀ.ನ.ಶ್ರೀನಿವಾಸ್​, ಕೆ.ಎಸ್​.ಪ್ರಶಾಂತ್​, ಕುಮಾರಸ್ವಾಮಿ, ಇಂದೂಧರ ಗೌಡ ಇತರರಿದ್ದರು.
ಮುಳುಗಡೆ ಸಂತ್ರಸ್ತರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಮಲೆನಾಡು ರೈತ ಹೋರಾಟ ವೇದಿಕೆ ಪ್ರಮುಖರು ಸಿಗಂದೂರು ಸೇತುವೆ ಮೇಲೆ ರಸ್ತೆ ತಡೆ ನಡೆಸಿದರು. ತೀ.ನ.ಶ್ರೀನಿವಾಸ್​, ಕೆ.ಎಸ್​.ಪ್ರಶಾಂತ್​, ಕುಮಾರಸ್ವಾಮಿ, ಇಂದೂಧರ ಗೌಡ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಿಗಂದೂರು ಸೇತುವೆ ಮೇಲೆ ಹೆದ್ದಾರಿ ತಡೆ
  • ವಿವಿಧ ಸಂಟನೆಗಳ ಪ್ರಮುಖರಿಂದ ಪ್ರತಿಭಟನೆ
  • ಶರಾವತಿ ಸಂತ್ರಸ್ತರಿಗೆ ಹಕ್ಕುಪತ್ರ ನೀಡದೆ ಅನ್ಯಾಯ
ಸಾಗರ: ಮಲೆನಾಡು ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಮಲೆನಾಡು ರೈತ ಹೋರಾಟ ವೇದಿಕೆಯಿಂದ ಸಿಗಂದೂರು ಸೇತುವೆ ಮೇಲೆ ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಿದರು.
ಸಾಗರ, ಹೊಸನಗರ, ಸೊರಬ, ಶಿಕಾರಿಪುರ ಸೇರಿದಂತೆ ಜಿಲ್ಲೆಯ ಬೇರೆಬೇರೆ ಭಾಗದ ರೈತರು, ವಿವಿಧ ಸಂ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್​, ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮರ್ಯಾದೆಯೇ ಇಲ್ಲ. ಮಲೆನಾಡು ರೈತರನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ನೋಡುತ್ತಿದ್ದಾರೆಯೇ ಹೊರತು ಅವರ ಬೇಡಿಕೆ ಈಡೇರಿಸಲು ಯಾವ ಸರ್ಕಾರಗಳಿಗೂ ಮನಸ್ಸು ಇದ್ದಂತೆ ಕಾಣುತ್ತಿಲ್ಲ. ಶರಾವತಿ, ಚಕ್ರಾ, ವರಾಹಿ ಸೇರಿ ಜಿಲ್ಲೆಯ ಬೇರೆಬೇರೆ ನದಿಗಳ ಮುಳುಗಡೆ ಸಂತ್ರಸ್ತರು ತಾವು ವಾಸಿಸುವ ಭೂಮಿ ಹಕ್ಕು ಸಿಗದೆ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ತರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ವಿದ್ಯುತ್​ ಯೋಜನೆಗೆ ಭೂಮಿ ಕೊಟ್ಟು 65 ವರ್ಷಗಳಾಗಿವೆ. ಸುಪ್ರೀಂ ಕೋರ್ಟ್​ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಕುಳಿತು ಬಗೆಹರಿಸಲು ಸೂಚನೆ ನೀಡಿದೆ. ನ್ಯಾಯಾಲಯ ಆದೇಶಿಸಿ 15 ತಿಂಗಳು ಕಳೆದರೂ ರೈತರಿಗೆ ಹಕ್ಕುಪತ್ರ ನೀಡಿಲ್ಲ. ಚುನಾಯಿತ ಪ್ರತಿನಿಧಿಗಳು ಅತ್ಯಂತ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ದೂರಿದರು.
ಕೆಪಿಸಿ ಭೂಮಿ ಉಪಯೋಗಿಸದಿದ್ದರೆ ರೈತರಿಗೆ ಹಿಂದಿರುಗಿಸಿ ಎಂದು ಆದೇಶ ಇದ್ದರೂ ಅದನ್ನು ವಾಪಸ್​ ಕೊಡುತ್ತಿಲ್ಲ. ಸಿಂಗಳೀಕ ಅಭಯಾರಣ್ಯ ಹೆಸರಿನಲ್ಲಿ ಯುವಕರಿಗೆ ಹಿಂಸೆ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ವಿಪ ನಾಯಕರಾಗಿದ್ದಾಗ, ನಮ್ಮ ಸರ್ಕಾರ ಬಂದರೆ ತಣ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದ್ದರು. ಮೂರು ವರ್ಷವಾದರೂ ಮುಖ್ಯಮಂತ್ರಿಗಳು ತಾವು ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿದರು.
ನವಚೇತನ ವೇದಿಕೆ ಅಧ್ಯ ಕೆ.ಎಸ್​.ಪ್ರಶಾಂತ್​, ಕುಮಾರಸ್ವಾಮಿ, ಇಂದೂಧರ ಗೌಡ, ಹೂವಣ್ಣ ಹುರಳಿ, ಅಶೋಕ್​ ಬೇಸೂರು, ಚಕ್ರಪಾಣಿ, ಮಂಜಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net