ಗಾಯಗೊಂಡಿದ್ದ ಚಿರತೆ ಮರಿ ಸಾವು | leopard

ಸಾವಿಗೀಡಾದ ಚಿರತೆ ಮರಿಯನ್ನು ತಹಸೀಲ್ದಾರ್ ಡಾ. ಆರ್.ಪ್ರತಿಭಾ, ಪಶುವೈದ್ಯ ಆಕಾಶ್ ಮತ್ತಿತರರು ಪರಿಶೀಲಿಸಿದರು.
ಸಾವಿಗೀಡಾದ ಚಿರತೆ ಮರಿಯನ್ನು ತಹಸೀಲ್ದಾರ್ ಡಾ. ಆರ್.ಪ್ರತಿಭಾ, ಪಶುವೈದ್ಯ ಆಕಾಶ್ ಮತ್ತಿತರರು ಪರಿಶೀಲಿಸಿದರು.
Published on
ಕಾರ್ಗಲ್: ತಾಲೂಕಿನ ಮುಪ್ಪಾನೆ ಗಸ್ತು ವ್ಯಾಪ್ತಿಯ ಮಂಡವಳ್ಳಿ ಗ್ರಾಮದ ಸರ್ವೇ ನಂ. 44ರಲ್ಲಿ ಗಾಯಗೊಂಡು ನಿತ್ರಾಣ ಸ್ಥಿತಿಯಲ್ಲಿ ಶನಿವಾರ ಪತ್ತೆಯಾಗಿದ್ದ ನಾಲ್ಕು ತಿಂಗಳ ಚಿರತೆ ಮರಿ ಭಾನುವಾರ ಮೃತಪಟ್ಟಿದೆ.
ತೋಟವೊಂದರ ಬಳಿ ಬೆನ್ನಿನ ಮೂಳೆ, ಕಾಲುಗಳ ಮೂಳೆ ಮುರಿದ ಸ್ಥಿತಿಯಲ್ಲಿ ಚಿರತೆ ಮರಿ ಪತ್ತೆಯಾಗಿತ್ತು. ಮರಿಯನ್ನು ಕಾರ್ಗಲ್ ವನ್ಯಜೀವಿ ವಲಯದ ಮುಪ್ಪಾನೆ ಶಾಖೆಯ ಸಸಿ ಚೌಕ ಕಳ್ಳ ಬೇಟೆ ನಿಗ್ರಹ ಶಿಬಿರಕ್ಕೆ ತಂದು ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದೆ. ತಹಸಿಲ್ದಾರ್ ಡಾ. ಆರ್.ಪ್ರತಿಭಾ ಅವರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಕಳೇಬರವನ್ನು ದಹಿಸಲಾಯಿತು. ಪಶುವೈದ್ಯಾಧಿಕಾರಿ ಆಕಾಶ್, ವಲಯ ಅರಣ್ಯಾಧಿಕಾರಿ ಧನಂಜಯ ನಾಯಕ್, ರೆವಿನ್ಯೂ ಇನ್ಸ್‌ಪೆಕ್ಟರ್ ಬೀರಪ್ಪ, ಗ್ರಾಮ ಆಡಳಿತಾಧಿಕಾರಿ ಯಲ್ಲಾಲಿಂಗ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net