ಇಂದಿರಾ ಕ್ಯಾಂಟೀನ್​ ಕಟ್ಟಡ ಕಾಮಗಾರಿ ಕಳಪೆ

ತೀರ್ಥಹಳ್ಳಿ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್​ ಕಟ್ಟಡವನ್ನು ಶಾಸಕ ಆರಗ ಜ್ಞಾನೇಂದ್ರ ವೀಸಿದರು. ರತ್ನಾಕರ ಶೆಟ್ಟಿ, ಸಂದೇಶ್​ ಜವಳಿ, ವಹಿದಾ ಇತರರಿದ್ದರು.
ತೀರ್ಥಹಳ್ಳಿ ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಇಂದಿರಾ ಕ್ಯಾಂಟೀನ್​ ಕಟ್ಟಡವನ್ನು ಶಾಸಕ ಆರಗ ಜ್ಞಾನೇಂದ್ರ ವೀಸಿದರು. ರತ್ನಾಕರ ಶೆಟ್ಟಿ, ಸಂದೇಶ್​ ಜವಳಿ, ವಹಿದಾ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 5 ವರ್ಷಗಳ ಹಿಂದೆ ಆರಂಭಗೊಂಡರೂ ಇಂದಿಗೂ ನಿರ್ಮಾಣದ ಹಂತ
  • 66 ಲಕ್ಷ ರೂ ವೆಚ್ಚದ ಕಟ್ಟಡ
  • ಇಂದಿರಾ ಕ್ಯಾಂಟೀನ್​ ಕಟ್ಟಡ ಕಾಮಗಾರಿ ಕಳಪೆ
ತೀರ್ಥಹಳ್ಳಿ: ಪಟ್ಟಣದಲ್ಲಿ ನಿರ್ಮಿಸುತ್ತಿರುವ ಇಂದಿರಾ ಕ್ಯಾಂಟೀನ್​ ಕಟ್ಟಡ ಕಳಪೆಯಾಗಿದೆ ಎಂದು ಶಾಸಕ ಆರಗ ಜ್ಞಾನೇಂದ್ರ ಆರೋಪಿಸಿದರು.
ಸ್ಥಳಕ್ಕೆ ಭೇಟಿ ಪರಿಶೀಲಿಸಿದ ಅವರು, ಕಾಮಗಾರಿಯಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದೆ. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು. 66 ಲಕ್ಷ ರೂ ವೆಚ್ಚದ ಈ ಕಟ್ಟಡ ಕಳಪೆಯಾಗಿದ್ದು, ಜತೆಗೆ ಅಪಾಯಕಾರಿಯಾಗಿದೆ. ಇದನ್ನು ನೆಲಸಮ ಮಾಡಿ ಹೊಸದಾಗಿ ನಿರ್ಮಾಣ ಮಾಡಬೇಕು ಎಂದು ತಿಳಿಸಿದರು.
ಪಟ್ಟಣದ ಜಿಪಂ ಕಚೇರಿ ಆವರಣದಲ್ಲಿ 5 ವರ್ಷಗಳ ಹಿಂದೆ ಆರಂಭಗೊಂಡು ಇಂದಿಗೂ ನಿರ್ಮಾಣದ ಹಂತದಲ್ಲಿಯೇ ಇದೆ. ಎರಡೆರಡು ಬಾರಿ ಉದ್ಘಾಟನೆಯಾದರೂ ಇಂದಿಗೂ ಕಾರ್ಯಾರಂಭವಾಗಿಲ್ಲ. ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಯಿಂದಾಗಿ ಕಟ್ಟಡದ ಎಲ್ಲ ಭಾಗದಲ್ಲಿ ಛಾವಣಿಯಿಂದ ಸೋರುತ್ತಿದ್ದು, ಕಟ್ಟಡದ ಒಳಭಾಗದಲ್ಲಿ ನೀರು ನಿಂತಿದೆ. ಕಟ್ಟಡಕ್ಕೆ ಕಾಂಕ್ರೀಟ್​ ಹಾಕುವ ಬದಲಿಗೆ ಸ್ಲಾ$್ಯಬ್​ ತಂದು ಜೋಡಿಸಿರುವುದು ಮತ್ತು ಕೌಂಟರ್​ಗಳ ನಿರ್ಮಾಣವಂತೂ ಹೇಳಲಾಗದಷ್ಟು ಕಳಪೆಯಾಗಿದೆ ಎಂದು ದೂರಿದರು.
ಸಿಮೆಂಟ್​ ಧೂಳು ಹಾರುತ್ತಿದೆ. ಲಾಂತರ ರೂ. ಮೊತ್ತದ ಅಡುಗೆ ಸಲಕರಣೆ ಗೋದಾಮಿನಲ್ಲಿ ತುಕ್ಕು ಹಿಡಿಯುತ್ತಿವೆ. ನಿರ್ಮಾಣದ ಹಂತದಲ್ಲಿ ಒಬ್ಬನೇ ಒಬ್ಬ ಅಧಿಕಾರಿಯೂ ಈ ಕಡೆ ಮುಖ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಪಂ ಅಧ್ಯಕ್ಷ ರತ್ನಾಕರ ಶೆಟ್ಟಿ, ಪಪಂ ಸದಸ್ಯರಾದ ಸಂದೇಶ್​ ಜವಳಿ, ಸೊಪ್ಪುಗುಡ್ಡೆ ರಾವೇಂದ್ರ, ಬಿ.ಆರ್​.ರಾವೇಂದ್ರ ಶೆಟ್ಟಿ, ಮುಖ್ಯಾಧಿಕಾರಿ ಡಿ.ರಾಜು, ನಗರಾಭಿವೃದ್ಧಿ ಇಲಾಖೆ ಇಇ ವಹಿದಾ, ಲಿಂಗರಾಜು ಇತರರಿದ್ದರು 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net