ಮೋದಿ ಆಡಳಿತದಲ್ಲಿ ಭಾರತದಲ್ಲಿ ಅಭಿವೃದ್ಧಿ ಪರ್ವ

ಶಿಕಾರಿಪುರ ತಾಲೂಕು ಮುದ್ದನಹಳ್ಳಿಯಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಅವರ ಮನ್​ ಕಿ ಬಾತ್​ ಕಾರ್ಯಕ್ರಮ ವೀಸಿದರು. ಬಿ.ವೈ.ವಿಜಯೇಂದ್ರ, ಬಿ.ವೈ.ರಾವೇಂದ್ರ, ಬಿ.ಕೆ.ಗುರುರಾಜ್​, ಪ್ರಶಾಂತ್​, ಬೆಣ್ಣೆ ಪ್ರವಿಣ್​ ಇತರರಿದ್ದರು.
ಶಿಕಾರಿಪುರ ತಾಲೂಕು ಮುದ್ದನಹಳ್ಳಿಯಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಪ್ರಧಾನಿ ನರೇಂದ್ರ ಮೋದಿ ಅವರ ಮನ್​ ಕಿ ಬಾತ್​ ಕಾರ್ಯಕ್ರಮ ವೀಸಿದರು. ಬಿ.ವೈ.ವಿಜಯೇಂದ್ರ, ಬಿ.ವೈ.ರಾವೇಂದ್ರ, ಬಿ.ಕೆ.ಗುರುರಾಜ್​, ಪ್ರಶಾಂತ್​, ಬೆಣ್ಣೆ ಪ್ರವಿಣ್​ ಇತರರಿದ್ದರು.
Published on
ಶಿಕಾರಿಪುರ: ಮಾಜಿ ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮುದ್ದನಹಳ್ಳಿಯ ಶೇಖರ ಗೌಡ ಎಂಬುವರ ಮನೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸಂಸದ ಬಿ.ವೈ.ರಾವೇಂದ್ರ ಮತ್ತಿತರರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಮನ್​ ಕಿ ಬಾತ್​ ಕಾರ್ಯಕ್ರಮ ವೀಸಿದರು.
ನಂತರ ಮಾತನಾಡಿದ ಯಡಿಯೂರಪ್ಪ, ಪ್ರಧಾನಿ ಮೋದಿ ಆಡಳಿತದಲ್ಲಿ ಭಾರತವು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಎಲ್ಲ ೇತ್ರಗಳಲ್ಲಿ ಭಾರತ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ಮೋದಿಯವರ ಪ್ರತಿ ಯೋಜನೆಯೂ ಜನಪರವಾಗಿವೆ ಎಂದರು.
ಸಂಸದ ಬಿ.ವೈ.ರಾವೇಂದ್ರ ಮಾತನಾಡಿ, ಯಡಿಯೂರಪ್ಪ ಅವರನ್ನು ರಾಜಕಾರಣದ ಅಂಗಳದಲ್ಲಿ ಉತ್ತುಂಗಕ್ಕೇರಿಸಿದ್ದು ಶಿಕಾರಿಪುರ ತಾಲೂಕಿನ ಮಹಾಜನತೆ. ಅವರ ಆಶೀರ್ವಾದ ಬಲದಿಂದ, ಜನತೆಯ ಆಶಯದಂತೆ ಯಡಿಯೂರಪ್ಪ ಅವರು ತಾಲೂಕಿನಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದರಿಂದ ಅಭಿವೃದ್ಧಿಯಲ್ಲಿ ಇಂದು ಶಿಕಾರಿಪುರ ತಾಲೂಕು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಎಂದರು.
ಶಾಸಕ ಬಿ.ವೈ.ವಿಜಯೇಂದ್ರ ಮಾತನಾಡಿ, ಯಡಿಯೂರಪ್ಪ ಅವರು ಈ ನಾಡು ಕಂಡ ಶ್ರೇಷ್ಠ ಜನನಾಯಕ. ಅವರ ಜನಪರ ಹೋರಾಟಗಳು, ಸಾಮಾಜಿಕ ಕಳಕಳಿ, ಜನಸೇವೆ ನಮಗೆ ಸದಾ ಮಾದರಿ ಎಂದು ಹೇಳಿದರು.
ಶಕ್ತಿ ಕೇಂದ್ರ ಪ್ರಮುಖ್​ ಪ್ರಶಾಂತ್​, ಯುವಮೋರ್ಚಾ ಜಿಲ್ಲಾ ಉಪಾಧ್ಯ ಬೆಣ್ಣೆ ಪ್ರವಿಣ್​, ಬಿಜೆಪಿ ರೈತ ಮೋರ್ಚಾ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಕೆ.ಗುರುರಾಜ್​, ಪ್ರಮುಖರಾದ ಗಂಗಾನಾಯ್ಕ್​, ಕೃಷ್ಣ ನಾಯ್ಕ್​, ಹಾಲಪ್ಪ ಸಂಗಪ್ಪ, ಮುದ್ನಳ್ಳಿ ವೀರನ ಗೌಡ, ಇತರರಿದ್ದರು.
ಪ್ರಧಾನಿ ನರೇಂದ್ರ ಮೋದಿ ವಿಶ್ವನಾಯಕ. ಮೋದಿ ಆಡಳಿತದಲ್ಲಿ ಭಾರತ ಅತ್ಯಂತ ಸಮರ್ಥವಾಗಿದೆ. ಈಗ ಭಾರತದ ಬಲ ಹೆಚ್ಚಿದೆ. ದೇಶದ ಯುವಶಕ್ತಿಯಲ್ಲಿ ಆತ್ಮಬಲ ತುಂಬುವ ಕೆಲಸವನ್ನು ಮಾಡುತ್ತಿದ್ದಾರೆ. ವಿಕಸಿತ ಭಾರತವು ಅವರ ಕಲ್ಪನೆಯಾಗಿದ್ದು, ಅದು ಸಾಕಾರಗೊಳ್ಳುತ್ತಿದೆ.
> ಬಿ.ಎಸ್​.ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net