ವಾಸ್ತವದ ಅರಿವಿದ್ದರೆ ಉನ್ನತಿ ಸಾಧ್ಯ I reality concept

ಶಿವಮೊಗ್ಗದ ಎನ್‌ಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಕಾಲೇಜಿನ ನವೀಕೃತ ಕಟ್ಟಡವನ್ನು ಜಿ.ಎಸ್.ನಾರಾಯಣ ರಾವ್ ಉದ್ಘಾಟಿಸಿದರು. ಡಾ. ಪಿ.ನಾರಾಯಣ್, ಎಸ್.ಎನ್.ನಾಗರಾಜ, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಇತರರಿದ್ದರು.
ಶಿವಮೊಗ್ಗದ ಎನ್‌ಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಕಾಲೇಜಿನ ನವೀಕೃತ ಕಟ್ಟಡವನ್ನು ಜಿ.ಎಸ್.ನಾರಾಯಣ ರಾವ್ ಉದ್ಘಾಟಿಸಿದರು. ಡಾ. ಪಿ.ನಾರಾಯಣ್, ಎಸ್.ಎನ್.ನಾಗರಾಜ, ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎನ್‌ಇಎಸ್ ಅಧ್ಯಕ್ಷರ ಅಭಿಮತ
  • ನವೀಕೃತ ಕಟ್ಟಡ ಉದ್ಘಾಟನೆ ಕಾರ್ಯಕ್ರಮ
ಶಿವಮೊಗ್ಗ: ವಾಸ್ತವ (reality) ದ ಅರಿವಿನ ಮೂಲಕ ಬದುಕನ್ನು ಮುನ್ನಡೆಸಿದಾಗ ನಿಜವಾದ ಉನ್ನತಿ ಸಾಧ್ಯ ಎಂದು ರಾಷ್ಟ್ರೀಯ (national) ಶಿಕ್ಷಣ (education) ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್ ಹೇಳಿದರು.
ನಗರದ ಎನ್‌ಇಎಸ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ ಕಾಲೇಜಿನ ನವೀಕೃತ ಕಟ್ಟಡವನ್ನು ಬುಧವಾರ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಶಿಕ್ಷಣದ ಜತೆಗೆ ಸಂಸ್ಕಾರವೂ ಬೇಕಿದ್ದು, ಗುರುಹಿರಿಯರು ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಎನ್‌ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಮೂಲ ಸೌಕರ್ಯ ಒದಗಿಸುವುದರಿಂದಲೇ ಉನ್ನತ ಶಿಕ್ಷಣದ ಬೆಳವಣಿಗೆ ಆಗುವುದಿಲ್ಲ. ಇಂದಿನ ಕಾಲದಲ್ಲಿ ಮಾಹಿತಿ ಎಲ್ಲೆಡೆ ಸುಲಭವಾಗಿ ಲಭ್ಯವಿದೆ. ಆದ್ದರಿಂದ ವಿದ್ಯಾರ್ಥಿಗಳು ಕಾಲೇಜಿಗೆ ಏಕೆ ಬರಬೇಕೆಂಬ ಪ್ರಶ್ನೆ ಕೇಳುತ್ತಿದ್ದಾರೆ. ಇದಕ್ಕೆ ಉಪನ್ಯಾಸಕರು ಮತ್ತು ಶಿಕ್ಷಣ ಸಂಸ್ಥೆಗಳು ಉತ್ತರಿಸಬೇಕಿದೆ ಎಂದರು.
ಬೋಧನಾ ವಿಧಾನದಲ್ಲಿ ಉಪನ್ಯಾಸಕರಿಗೂ ಹೊಸ ಸವಾಲುಗಳಿವೆ. ತರಗತಿಯಲ್ಲಿ ಮಾಹಿತಿ ನೀಡುವ ವ್ಯವಸ್ಥೆಯಿಂದ ಹೊರಬಂದು ವಿಶ್ಲೇಷಿಸುವ ಹಾಗೂ ಸಮಸ್ಯೆ ಪರಿಹಾರ ಮಾಡುವ ಕಲಿಕೆಗೆ ಒತ್ತು ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಆವರಣದಲ್ಲಿ ನೂತನ ಉದ್ಯಾನವನ್ನು ಉದ್ಘಾಟಿಸಲಾಯಿತು. ಶಿಕ್ಷಣ ಮತ್ತು ಮೂಲ ಸೌಕರ್ಯ ಅಭಿವೃದ್ಧಿಗೆ ಪೂರಕವಾಗಿ ನಿರ್ಮಾಣಗೊಂಡ ಕೊಠಡಿಗಳು, ಕಂಪ್ಯೂಟರ್ ಲ್ಯಾಬ್, ಸುಸಜ್ಜಿತ ಸಭಾಂಗಣ, ಪ್ರಾಚಾರ್ಯರ ಕೊಠಡಿ, ನವೀಕೃತ ಗ್ರಂಥಾಲಯ ಹಾಗೂ ಕಿರು ಸಭಾಂಗಣಗಳನ್ನು ಗಣ್ಯರು ಉದ್ಘಾಟಿಸಿದರು.
ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಪಿ.ಮೈಲಾರಪ್ಪ, ಎಚ್.ಸಿ.ಶಿವಕುಮಾರ್, ಎಂ.ಎಸ್.ಅನಂತ ದತ್ತ, ಕುಲಸಚಿವ ಎನ್.ಕೆ.ಹರಿಯಪ್ಪ, ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ, ಪ್ರಾಚಾರ್ಯ ಡಾ. ಬಿ.ಎಸ್.ಶಿವಪ್ರಸಾದ್ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net