ಆನವಟ್ಟಿ ಮಠಕ್ಕೆ ನೆರವು ನೀಡುವೆ | Assurance

ಸೊರಬ ತಾಲೂಕಿನ ಆನವಟ್ಟಿ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದ ಸಂಸದ ಬಿ.ವೈ.ರಾಘವೇಂದ್ರ. ಜಯಪ್ಪ, ಎಲ್.ಅರವಿಂದ, ಡಾ. ಜ್ಞಾನೇಶ್, ಗೀತಾ ಮಲ್ಲಿಕಾರ್ಜುನ್ ಇತರರಿದ್ದರು.
ಸೊರಬ ತಾಲೂಕಿನ ಆನವಟ್ಟಿ ರಾಘವೇಂದ್ರ ಸ್ವಾಮಿ ಮಠಕ್ಕೆ ಭೇಟಿ ನೀಡಿದ್ದ ಸಂಸದ ಬಿ.ವೈ.ರಾಘವೇಂದ್ರ. ಜಯಪ್ಪ, ಎಲ್.ಅರವಿಂದ, ಡಾ. ಜ್ಞಾನೇಶ್, ಗೀತಾ ಮಲ್ಲಿಕಾರ್ಜುನ್ ಇತರರಿದ್ದರು.
Published on
ಸೊರಬ: ಶ್ರೀ ರಾಘವೇಂದ್ರ ಸ್ವಾಮಿ ಕೃಪಾಶೀರ್ವಾದದಿಂದ ಜನಿಸಿದ ನಾನು ಅವರ ಭಕ್ತನಾಗಿ ಜನ ಸೇವೆ ಮಾಡಲು ಅವಕಾಶ ದೊರೆತಿರುವುದು ನನ್ನ ಸೌಭಾಗ್ಯ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು. 
ತಾಲೂಕಿನ ಆನವಟ್ಟಿ ಶ್ರೀ ರಾಘವೇಂದ್ರ ಸ್ವಾಮಿ ಮಠಕ್ಕೆ ಸೋಮವಾರ ಭೇಟಿ ನೀಡಿ ರಾಯರ ದರ್ಶನ ಪಡೆದು ಮಾತನಾಡಿದ ಅವರು, ನನ್ನ ತಂದೆ ರಾಯರ ಮಠಕ್ಕೆ ನಡೆದುಕೊಂಡ ಬಳಿಕ ಮೂವರು ಅಕ್ಕಂದಿರ ನಂತರ ನಾನು ಜನಿಸಿದ ಬಗ್ಗೆ ಹೇಳುತ್ತಾರೆ. ನನಗೂ ರಾಯರ ಬಗ್ಗೆ ಬಹಳ ಭಕ್ತಿ ಇದೆ ಎಂದರು.
ಮಠದ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ  ಕೊಡಿಸುತ್ತೇನೆ ಅಥವಾ ವೈಯಕ್ತಿಕವಾಗಿ ಮುಂದಿನ ದಿನದಲ್ಲಿ ನೆರವು ನೀಡುತ್ತೇನೆ. ತಂದೆ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಅವರು ಮೂಡಿ, ಕಚವಿ ಹಾಗೂ ಮೂಗೂರು ಏತ ನೀರಾವರಿ ಯೋಜನೆ ಸೇರಿ ಹಲವು ಅಭಿವೃದ್ಧಿ ಕಾಮಗಾರಿ ಮಾಡಲಾಯಿತು. ಇದರಿಂದ ಈ ಭಾಗದ ಕೆರೆಗಳಿಗೆ ನೀರು ತುಂಬಿಸಿ ರೈತರಿಗೆ ಅನುಕೂಲ ಮಾಡಿಕೊಡಲಾಗಿದೆ. ಅವುಗಳ ಉದ್ಘಾಟನೆ ದಿನದಂದು ಜನತೆಗೆ ಊಟ ಇದ್ದರೂ ಕೆಲವರ ಹುನ್ನಾರದಿಂದ ಊಟ ಸಿಗಲಿಲ್ಲ. ಆ ನೋವು ಇಂದಿಗೂ ನನ್ನನ್ನು ಕಾಡುತ್ತಿದೆ. ಅನ್ಯಾಯ ಮಾಡಿದವರನ್ನು ದೇವರೇ ನೋಡಿಕೊಳ್ಳುತ್ತಾನೆ ಎಂದರು.
ಮಠದ ಟ್ರಸ್ಟ್ ಅಧ್ಯಕ್ಷ ಜಯಪ್ಪ, ಪ್ರಮುಖರಾದ ಎಲ್.ಅರವಿಂದ, ಗೀತಾ ಮಲ್ಲಿಕಾರ್ಜುನ್, ಡಾ. ಜ್ಞಾನೇಶ್, ಮಲ್ಲಿಕಾರ್ಜುನ ದ್ವಾರಹಳ್ಳಿ, ಮಲ್ಲಿಕಾರ್ಜುನ ಗುತ್ತೆರ್, ಪಾಣಿ ರಾಜಪ್ಪ, ಉಮೇಶ್, ಹನುಮಂತಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net