ಸೆ.1ಕ್ಕೆ ಸಂಸದರ ಮನೆ ಮುಂದೆ ನಿರಶನ | pressmeet

ಎಂ.ಬಿ.ಮಂಜಪ್ಪ
ಎಂ.ಬಿ.ಮಂಜಪ್ಪ
Published on
ಸಾಗರ: ಶಿವಮೊಗ್ಗದಲ್ಲಿರುವ ಸಂಸದ ಬಿ.ವೈ.ರಾಘವೇಂದ್ರ ಅವರ ಮನೆ ಎದುರು ಸೆ.1ರಂದು ಬೆಳಗ್ಗೆ 11ರಿಂದ ಅನಿರ್ದಿಷ್ಟಾವಧಿ ಏಕಾಂಗಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ ಎಂದು ಸಂಯುಕ್ತ ರೈತ ಸಂಘದ ಅಧ್ಯಕ್ಷ ಎಂ.ಬಿ.ಮಂಜಪ್ಪ ಹಿರೇನೆಲ್ಲೂರು ತಿಳಿಸಿದರು.

ಪ್ರಸ್ತುತ ಮಲೆನಾಡು ಭಾಗದ ಜನರು ಅಭಯಾರಣ್ಯ, ಕಾಡು, ಕುಮ್ಕಿ, ಪರಿಭಾವಿತ ಅರಣ್ಯ ಮತ್ತಿತರ ಕಾಯ್ದೆಗಳಿಂದ ರೋಸಿಹೋಗಿದ್ದಾರೆ. ಇದೀಗ ಕಸ್ತೂರಿ ರಂಗನ್ ವರದಿ ಅನುಷ್ಠಾನದ ಹೆಸರಿನಲ್ಲಿ ಮಲೆನಾಡು ರೈತರ ಆತ್ಮಸ್ಥೆರ್ಯ ಕುಗ್ಗಿಸುವ ಕೇಂದ್ರದ ಪ್ರಯತ್ನವನ್ನು ರೈತ ಸಂಘ ಖಂಡಿಸುತ್ತದೆ. ವರದಿ ಜಾರಿಗೆ ಬಂದರೆ ಹಳ್ಳಿಭಾಗಗಳ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಲಿದೆ. ಈವರೆಗೂ ಸಂಸದ ಬಿ.ವೈ.ರಾಘವೇಂದ್ರ ಮಲೆನಾಡಿನ ಜ್ವಲಂತ ಸಮಸ್ಯೆಗಳ ಬಗ್ಗೆ ಕೇಂದ್ರದ ಗಮನ ಸೆಳೆದಿಲ್ಲ. ಇದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net