ಸಾಗರ ತಾಲೂಕಿನ ಹೊನ್ನೇಸರದ ಚರಕ ಶ್ರಮಜೀವಿ ಆಶ್ರಮದಲ್ಲಿ ಹಮ್ಮಿಕೊಂಡಿದ್ದ ಚರಕ ಉತ್ಸವದಲ್ಲಿ ಕಾರ್ಮಿಕರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬಸವರಾಜ್ ಪಾಟೀಲ್, ಪ್ರಸನ್ನ, ಮಹಾಲಕ್ಷ್ಮೀ, ಮಮತಾ ಕೃಷ್ಣ, ಪ್ರಿಯಾಂಕಾ ಇತರರಿದ್ದರು.
ಸಾಗರ: ಯಾಂತ್ರಿಕ ಜಗತ್ತಿಗೆ ತೆರೆದುಕೊಳ್ಳುವ ಬಗ್ಗೆ ಹಾತೊರೆಯುತ್ತಿರುವ ಇಂತಹ ದಿನಗಳಲ್ಲಿ ಶ್ರಮ ಸಂಸ್ಕೃತಿಯ ಪ್ರತೀಕವಾದ, ಮಾನವ ಸಂಪನ್ಮೂಲ ಸದ್ಬಳಕೆಯಾಗುವ ಕೈಮಗ್ಗ ಕ್ಷೇತ್ರದಲ್ಲಿ, ಚರಕ ಸಂಸ್ಥೆಯ ಪ್ರಯೋಗ ಆಶಾದಾಯಕ ಮತ್ತು ಮಾದರಿಯಾಗಿದೆ ಎಂದು ರಾಷ್ಟ್ರೀಯ ಸ್ವಾಭಿಮಾನ್ ಪರಿಷ್‌ತ್‌ನ ರಾಷ್ಟ್ರೀಯ ಸಂಯೋಜಕ ಬಸವರಾಜ್ ಪಾಟೀಲ್ ಹೇಳಿದರು.
ತಾಲೂಕಿನ ಹೊನ್ನೇಸರದ ಚರಕದ ಶ್ರಮಜೀವಿ ಆಶ್ರಮದಲ್ಲಿ ಚರಕ ಮಹಿಳಾ ವಿವಿಧೋದ್ದೇಶ ಕೈಗಾರಿಕಾ ಸಹಕಾರ ಸಂಘ, ಕವಿ-ಕಾವ್ಯ ಟ್ರಸ್ಟ್‌ನಿಂದ ಆಯೋಜಿಸಿದ್ದ ಚರಕ ಉತ್ಸವದ ಸಮಾರೋಪ ಸಮಾರಂಭದಲ್ಲಿ ಕಾಯಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಗ್ರಾಮೀಣ ಬದುಕಿನಲ್ಲಿ ಸಹಕಾರ ಮನೋಭಾವ ಅಪರೂಪ ಆಗುತ್ತಿರುವಾಗ ಚರಕ ಸಹಕಾರ ಸಂಘ ಕೈಗೊಳ್ಳುತ್ತಿರುವ ಚಟುವಟಿಕೆಗಳು ಇವತ್ತು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ. ಗ್ರಾಮೀಣ ಭಾಗದ ಜನರ ಕುಶಲಕಲೆಯ ಜ್ಞಾನವನ್ನು ಬಳಸಿಕೊಳ್ಳಬೇಕು ಮತ್ತು ಆ ಕಲೆಗೆ ವೇದಿಕೆ ಕಲ್ಪಿಸುವ ಕೆಲಸವಾಗಬೇಕು ಎಂದರು.
ಚರಕ ಉತ್ಸವದಲ್ಲಿ ಸದಸ್ಯರಿಂದ ‘ಹಳ್ಳಿ ಹೈದರ ್ಯಾಷನ್ ಶೋ’ ನಡೆಯಿತು. ಚರಕ ಸಂಸ್ಥೆ ಸಂಸ್ಥಾಪಕ ಪ್ರಸನ್ನ, ಅಧ್ಯಕ್ಷೆ ಮಹಾಲಕ್ಷ್ಮೀ, ಭೀಮನಕೋಣೆ ಗ್ರಾಪಂ ಮಾಜಿ ಉಪಾಧ್ಯಕ್ಷೆ ಮಮತಾ ಕೃಷ್ಣ, ಪ್ರಿಯಾಂಕಾ, ಪವಿತ್ರಾ, ಎಂ.ವಿ.ಪ್ರತಿಭಾ ಇತರರಿದ್ದರು.