ಹೊಸಸಿದ್ದಾಪುರದಲ್ಲಿ ಗೃಹಿಣಿ ಆತ್ಮಹತ್ಯೆ | crime

ಸ್ವಾತಿ
ಸ್ವಾತಿ
Published on
ಭದ್ರಾವತಿ: ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರದಲ್ಲಿ ಶಿವರಾತ್ರಿ ಹಬ್ಬದ ದಿನದಂದು ಆತ್ಮಹತ್ಯೆ ಮಾಡಿಕೊಂಡಿದ್ದ ಕೆಎಸ್‌ಐಎಫ್‌ಎಸ್ ಡಿ ಗ್ರೂಪ್ ನೌಕರ ಜಗದೀಶ್ ಅವರ ಪತ್ನಿ ಸ್ವಾತಿ (26) ಕೂಡಾ ಶುಕ್ರವಾರ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ಪೊಲೀಸ್ ಪೇದೆಯೊಬ್ಬ ಸಲ್ಲದ ಅಪಪ್ರಚಾರದಲ್ಲಿ ತೊಡಗಿದ್ದರು ಎಂದು ಸ್ವಾತಿ ಸಾವಿಗೂ ಮುನ್ನ ತನ್ನ ತಾಯಿಗೆ ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಕಳುಹಿಸಿದ್ದಾರೆ. ಇದು ದಂಪತಿಯ ಆತ್ಮಹತ್ಯೆ ಪ್ರಕರಣಕ್ಕೆ ತಿರುವು ನೀಡಿದ್ದು, ಈ ನಿಟ್ಟಿನಲ್ಲಿ ತನಿಖೆ ಮುಂದುವರಿದಿದೆ. ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಅವರು ಈಗ ಅನಾಥವಾಗಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net