ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯ ಮಹಾಬಲೇಶ್ ತಡಗಳಲೆ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನುಷ್ಠಾನಗೊಂಡಾಗಿನಿಂದ ಗ್ರಾಮೀಣ ಜನರ ಬದುಕಿನಲ್ಲಿ ಹೊಸ ಬೆಳಕು ಮೂಡಿದೆ. ಯೋಜನೆಯಿಂದ ಸಾಕಷ್ಟು ಜನರು ಅನುಕೂಲ ಪಡೆದುಕೊಳ್ಳುತ್ತಿದ್ದಾರೆ. ವಾತ್ಸಲ್ಯ ಯೋಜನೆ ಮೂಲಕ ಬಡಮಹಿಳೆಯರಿಗೆ ಮನೆ ನಿರ್ಮಿಸಿಕೊಡುವ ಯೋಜನೆ ಅತ್ಯಂತ ಮೌಲ್ಯಯುತವಾದದ್ದು ಎಂದು ಹೇಳಿದರು. ವೇದಿಕೆಯಲ್ಲಿ ಚಂದ್ರಪ್ಪ, ಕೃಷ್ಣಪ್ಪ, ಸುಜಾತ ಸೈದೂರು, ಸುರೇಶ್, ಶಾರದಾ ಗೌರಮ್ಮ ಇತರರಿದ್ದರು.