ಎಲ್ಪಿಜಿ ದರ ಏರಿಕೆ ಖಂಡಿಸಿ ತಾಲೂಕು ಕಚೇರಿ ಎದುರು ಕಾಂಗ್ರೆಸ್ ಮಹಿಳಾ ಘಟಕದಿಂದ ಸೌದೆ ಒಲೆಯಲ್ಲಿ ಚಹಾ ತಯಾರಿಸಿ ಪ್ರತಿಭಟನೆ ನಡೆಸಲಾಯಿತು. ಕಿಮ್ಮನೆ ರತ್ನಾಕರ್, ಶ್ವೇತಾ ಬಂಡಿ, ಮೈಥಿಲಿ ಸತೀಶ್, ರತ್ನಾಕರ್ ಶೆಟ್ಟಿ, ಗೀತಾ ರಮೇಶ್ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ತೀರ್ಥಹಳ್ಳಿ ಕಾಂಗ್ರೆಸ್ ಮಹಿಳಾ ಘಟಕದಿಂದ ಪ್ರತಿಭಟನೆ
ರಾಜ್ಯದ ಜಿಎಸ್ಟಿ ಅನುದಾನವೂ ಬಾಕಿ
ಎಲ್ಪಿಜಿ ದರ ಏರಿಕೆ ಜನತೆಗೆ ಹೊರೆ
ತೀರ್ಥಹಳ್ಳಿ : ಕೇಂದ್ರ ಸರ್ಕಾರ ದೇಶದಲ್ಲಿ ದಾಸ್ತಾನಿರುವ ತೈಲದ ಬೆಲೆ ಏರಿಕೆ ಮಾಡಿರುವುದು ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಹೊರೆಯಾಗಿದೆ ಎಂದು ಆರೋಪಿಸಿ ತಾಲೂಕು ಮಹಿಳಾ ಕಾಂಗ್ರೆಸ್ ಘಟಕದ ಪ್ರಮುಖರು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಕೊಲ್ಲಿ ಯುದ್ಧ ನಿಲ್ಲದೆ ಇದೇ ಸ್ಥಿತಿ ಮುಂದುವರಿದರೆ ದೇಶದ ಜನಜೀವನ ಅಸ್ತವ್ಯಸ್ತವಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಕೊಲ್ಲಿಯಲ್ಲಿ ನಡೆದಿರುವ ಸಂರ್ಷ ಜಗತ್ತಿಗೆ ಕಂಟಕವಾಗಿದೆ. ವಿಶ್ವಗುರು ಎಂದು ಹೇಳಿಕೊಳ್ಳುವ ಪ್ರಧಾನಮಂತ್ರಿ ನರೇಂದ್ರ ಮೋದಿ ಇಡೀ ಪ್ರಪಂಚಕ್ಕೆ ಬೆಂಕಿ ಹಚ್ಚಿರುವ ಅಮೆರಿಕ ಮತ್ತು ಇಸ್ರೇಲಿಗೆ ಯುದ್ಧ ನಿಲ್ಲಿಸುವಂತೆ ಹೇಳುವ ಗಟ್ಟಿತನ ತೋರಬೇಕು ಎಂದು ಕಿಮ್ಮನೆ ರತ್ನಾಕರ್ ಆಗ್ರಹಿಸಿದರು.
ಗ್ಯಾಸ್ ಬೆಲೆ ಏರಿಕೆಯಿಂದಾಗಿ ದೇಶದಲ್ಲಿ 5 ಲಕ್ಕೂ ಅಧಿಕ ಸಂಖ್ಯೆಯ ಹೋಟೆಲ್, ಕ್ಯಾಂಟೀನ್ಗಳು ಬಂದ್ ಆಗಿವೆ. ದುಡಿದು ತಿನ್ನುವ ವರ್ಗಗಳ ಕುಟುಂಬ ಬೀದಿಗೆ ಬರುವಂತಾಗಿದೆ. 1.15 ಸಾವಿರ ಕೋಟಿ ರೂ. ಅನುದಾನ ಸೇರಿ ಕಳೆದ 8 ವರ್ಷಗಳಿಂದ ಕೇಂದ್ರದಿಂದ ರಾಜ್ಯದ ಜಿಎಸ್ಟಿ ಹಣ ಬಂದಿಲ್ಲ. ಇಂತಹ ಸ್ಥಿತಿಯಲ್ಲಿ ಸಿದ್ದರಾಮಯ್ಯ ಅವರನ್ನು ಹೊರತುಪಡಿಸಿ ಬೇರೆ ಮುಖ್ಯಮಂತ್ರಿಗಳಿಂದ ಅಧಿಕಾರ ನಡೆಸಲು ಅಸಾಧ್ಯ. ಪ್ರಜೆಗಳ ಹಿತ ಕಾಪಾಡಲು ಅಸಮರ್ಥರಾಗಿರುವ ಪ್ರಧಾನಮಂತ್ರಿ ಕಚೇರಿ ಜನರ ಪಾಲಿಗೆ ಮುಚ್ಚಿದಂತಾಗಿದೆ ಎಂದು ಟೀಕಿಸಿದರು.
ಎಂಎಡಿಬಿ ಅಧ್ಯ ಆರ್.ಎಂ.ಮಂಜುನಾಥ ಗೌಡ ಮಾತನಾಡಿ, ರಾಜ್ಯ ಸರ್ಕಾರದ ಮನವಿಗೂ ಸ್ಪಂದಿಸದೆ ತಾರತಮ್ಯ ಮಾಡುತ್ತಿರುವ ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಬಗ್ಗೆ ರಾಜ್ಯದ ಸಂಸದರು ಮೌನವಾಗಿರುವುದು ಖಂಡನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬಿಜೆಪಿ ನೇತೃತ್ವದ ಆಡಳಿತದಲ್ಲಿ ಬಡತನ ತಾಂಡವವಾಡುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿದ್ದ 55 ಲ ಕೋಟಿ ಸಾಲವು ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರದ ಆಡಳಿತದಲ್ಲಿ ನಾಲ್ಕು ಪಟ್ಟು ಏರಿಕೆಯಾಗಿದೆ. ಹಿಂದೂ ಧರ್ಮದ ಹೆಸರಿನಲ್ಲಿ ಜನರನ್ನು ಹಾದಿ ತಪ್ಪಿಸಿ ಸುಳ್ಳು ೂಷಣೆಗಳ ಮೂಲಕ ದೇಶವನ್ನು ಅವ್ಯಸ್ಥೆಗೆ ತಂದು ನಿಲ್ಲಿಸಿದೆ.